ತಾಯಿನಾಡಿಗೆ ಆಗಮಿಸಿದ ವೈದ್ಯಕೀಯ ವಿದ್ಯಾರ್ಥಿ ಪ್ರಜ್ವಲ್ಗೆ ಗ್ರಾಮಸ್ಥರಿಂದ ಸನ್ಮಾನ
ಮಮಹಾಲಿಂಗಪುರ: ಉಕ್ರೇನ್ನ ಖಾರ್ಕಿವ್ನಲ್ಲಿ ವೈದ್ಯಕೀಯ ವಿಜ್ಞಾನದ 6ನೇ ವರ್ಷದ ಅಂತಿಮ ಸೆಮಿಸ್ಟರ್ ವ್ಯಾಸಂಗದಲ್ಲಿದ್ದ ಬಾಗಲಕೋಟ್ ಜಿಲ್ಲೆಯ ರಬಕವಿಬನಹಟ್ಟಿ ತಾಲೂಕಿನ ಮದಭಾವಿಯ ಪ್ರಜ್ವಲ್ತಿಮ್ಮಾಪುರ ಮಂಗಳವಾರ ಮುಂಜಾನೆ ಸುರಕ್ಷಿತವಾಗಿ ಮನೆ ತಲುಪಿದ್ದಾನೆ. ಈ ಸಮಯದಲ್ಲಿ ಅಜ್ಜಿ ಸೇರಿದಂತೆ ತಂದೆ ಮಹಾಲಿಂಗಪ್ಪ, ತಾಯಿ ಜಯಶ್ರೀ ಹಾಗೂ ಗ್ರಾಮಸ್ಥರು ಪ್ರಜ್ವಲ್ನಿಗೆ ಸನ್ಮಾನ ಮಾಡಿ ಸಿಹಿ ತಿನ್ನಿಸಿ ಹರ್ಷ ವ್ಯಕ್ತಪಡಿಸಿದರು.
ಪತ್ರಿಕೆಯೊಂದಿಗೆ ಮಾತನಾಡಿದ ಪ್ರಜ್ವಲ ಫೆ.23ರವರೆಗೆ ಭೌತಿಕ ತರಗತಿಗಳಿಗೆ ಹಾಜರಾಗಿದ್ದು ಯಾವುದನ್ನು ಅರಿಯದ ನಮಗೆ ಫೆ.24ರಂದು ನಸುಕಿನಜಾವ ಬಾಂಬ್ಗಳ ಸದ್ದಿನಿಂದ ನಮ್ಮಲ್ಲಿ ಯುದ್ಧದ ದುಗುಡ ಹೆಚ್ಚಾಯಿತು. ಸಮೀಪದ ವೃತ್ತದಲ್ಲಿ ಸಾವಿರಾರು ಜನರ ಜಮಾವಣೆ.27ರವರೆಗೆ ಸಾಮಾನ್ಯ ಸ್ಥಿತಿಯಲ್ಲಿತ್ತು, ಆದರೆ ಅಷ್ಟರಲ್ಲಿ ಕೀವ್ ನಗರ ರಷ್ಯಾ ವಶಮಾಡಿಕೊಂಡು 27ಕ್ಕೆಖಾರ್ಕಿವ್ ನಗರಕ್ಕೆನುಗ್ಗಿದಾಗ ಉಕ್ರೇನ್ ಸೈನಿಕರು ವಾಹನಗಳ ಸಮೇತ ಅವರನ್ನು ಬಂಧಿಸಿದಾಗ ರಷ್ಯಾದಾಳಿ ತೀವ್ರಗೊಳಿಸಿತು, ಅಲ್ಲಿಂದ ನಮ್ಮಸ್ಥಿತಿ ತುಂಬ ಗಂಭೀರವಾಗುತ್ತ ಮೆಟ್ರೋ ಕೆಳಗಿನ ಸುರಂಗ ಮಾರ್ಗವೇ ನಮಗೆ ಆಶ್ರಯ ತಾಣವಾಯಿತು.
ದಿನೇದಿನೇ ಬಾಂಬ್, ಸ್ಕಡ್ಗಳಸದ್ದು ಬಂಕರುಗಳ ಓಡಾಟದಿಂದ ಯುದ್ಧದ ಕಾರ್ಮೋಡ ಕವಿಯಿತು. ರಷ್ಯಾ ಸೈನಿಕರಿಗೆ ನಮ್ಮ ಶಬ್ದ, ಮೊಬೈಲ್ ಟಾರ್ಚ್ ಕೂಡ ಕಾಣಬಾರದು. ತಾಯಂದಿರು ಹಸುಗೂಸಿನ ಅಳುವನ್ನೂಅಮುಕಿ ಹಿಡಿದರು. ಬಹಿರ್ದೆಶೆ, ಶೌಚಾಲಯ ಕಂತೂ ಪಡಬಾರದ ಕಷ್ಟಪಟ್ಟೆವು. ನೀರುಊಟ ಸರಿಯಾಗಿಸಿಗದೆ ನಾವು ನಿತ್ರಾಣ ಸ್ಥಿತಿಗೆ ತಲುಪಿದೇವು. ಒಟ್ಟಾರೆ ಜೀವ ನಮ್ಮ ಕೈಯಲ್ಲಿ ಹಿಡಿದುಕೊಂಡು ಬದುಕುವಂತಾಯಿತು.
ಖಾರ್ಕೀವ್ ಮತ್ತು ಕೀವ್ ಮಧ್ಯೆ ನಮ್ಮ ಮೇಲೆ ಬಾಂಬುಗಳು ಎರುಗುತ್ತವೆಯೋ ಎನ್ನುವ ಹಾಗೆ ಭಯಂಕರ ಶಬ್ದಕೇಳಿ ನಮ್ಮನ್ನು ಸೇರಿ ಟ್ಯಾಕ್ಸಿಡ್ರೈವರ್ ಸಹ ಹೆದರಿ ನಡುಗುತ್ತಿದ್ದ. ಅದೃಷ್ಟ ಚೆನ್ನಾಗಿತ್ತು ಲೀವ್ ತಲುಪಿ, ಪೋಲೆಂಡಿನ ಬಾಬಾ ಶಂಕರ ಗುರೂಜಿ ಆಶ್ರಮದ ಆಶ್ರಯ ಪಡೆದು,ನಂತರ ಸೋಮವಾರ ದೆಹಲಿ ತಲುಪಿ ಮಂಗಳವಾರ ಸ್ವಗ್ರಾಮ ಮದಭಾವಿ ತಲುಪಲಾಯಿತೆಂದು ತಮ್ಮ ಅನುಭವ ಹಂಚಿಕೊಂಡರು.
ಬ್ಲಾಕ್ಕಾಂಗ್ರೆಸ್ ಅಧ್ಯಕ್ಷ ಮಲ್ಲಪ್ಪ ಸಿಂಗಾಡಿ, ಗ್ರಾಪಂ ಅಧ್ಯಕ್ಷೆನೂರ್ ಜಹಾನ್ ನದಾಫ್, ವಿನೋದ್ಗೌಡ ಉಳ್ಳಾಗಡ್ಡಿ, ಮಹಮ್ಮದ್ಹುಲಿಕಟ್ಟಿ ಭೀಮಪ್ಪ ತಿಮ್ಮಾಪುರ, ವಿಠ್ಠಲಅರಭಾವಿ, ಮಹಾಲಿಂಗನಾಯಕ, ಸದಾಶಿವಕೋಳೆಕರ್,ಮಹಾಲಿಂಗಪ್ಪ ಇಟ್ನಾಳ, ಪ್ರಧಾನಿವಗ್ಗರ, ಯಲ್ಲಪ್ಪಮಾಂಗ, ವೀರ್ಪಬೋರನಟ್ಟಿ, ರಾಜುಮುಲ್ಲಾ, ನಾಗಪ್ಪಡು ಮ್ಮಣ್ಣವರ್ ಇತರರು ಇದ್ದರು.
ಆರು ವರ್ಷಗಳವರೆಗೆ ಉಕ್ರೇನ್ದೇಶದ ಖಾರ್ಕಿವ್ನಗರದಲ್ಲಿ ವೈದ್ಯಕೀಯ ವ್ಯಾಸಂಗ ಮಾಡಿ ಅಂತಿಮ ಹಂತದ ಪರೀಕ್ಷೆಗಾಗಿ ಕೇವಲಎರಡು ತಿಂಗಳುಮಾತ್ರಬಾಕಿ ಇತ್ತು,ಈ ಯುದ್ಧ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಕಾರ್ಮೋಡ ಚೆಲ್ಲಿದೆ. ಕಾರಣ ಭಾರತ ಸರ್ಕಾರ ಮಾನವೀಯ ಆಧಾರದ ಮೇಲೆ ಮುಂದಿನ ವ್ಯಾಸಂಗಕ್ಕೆ ಅನುಮಾಡಿ ಕೊಡಬೇಕು.
*ವೈದ್ಯ ವಿದ್ಯಾರ್ಥಿ, ಪ್ರಜ್ವಲ್ ತಿಮ್ಮಾಪುರ.