ವಿದ್ಯಾಸಾಗರ ಶಾಲೆ ವಿದ್ಯಾರ್ಥಿನಿ ಎಂ.ಝುಹ ಫಾತಿಮಾ ಜಿಲ್ಲೆಗೆ ಪ್ರಥಮ
ಲೋಕದರ್ಶನ ವರದಿ
ಕಂಪ್ಲಿ 24 : ವಿದ್ಯಾರ್ಥಿ ಜೀವನದ ಮಹತ್ತರ ಘಟ್ಟವಾದ ಹತ್ತನೇ ತರಗತಿ ವಾರ್ಷಿಕ ಪರೀಕ್ಷೆಯ ಫಲಿತಾಂಶಗಳು ಪ್ರಕಟವಾಗಿದ್ದು, ಕಂಪ್ಲಿ ಪಟ್ಟಣದ ಪ್ರತಿಷ್ಠಿತ ವಿದ್ಯಾಸಂಸ್ಥೆಯಾದ ವಿದ್ಯಾಸಾಗರ ರೆಸಿಡೆನ್ಸಿಯಲ್ ಹೈಸ್ಕೂಲ್ ವಿದ್ಯಾರ್ಥಿನಿ ಎಂ.ಝುಹ ಫಾತಿಮಾ ಎನ್ನುವ ವಿದ್ಯಾರ್ಥಿನಿ 625ಕ್ಕೆ 620(ಶೇ.99.20ಅ)ಅಂಕಗಳೊಂದಿಗೆ ಜಿಲ್ಲೆೆಗೆ ಪ್ರಥಮ ಸ್ಥಾನದ ಮೂಲಕ ಶಾಲೆಗೆ ಕೀರ್ತಿ ತಂದಿದ್ದಾಳೆಂದು ಶಾಲೆಯ ಮುಖ್ಯಸ್ಥ ಪಿ.ನಾಗೇಶ್ವರರಾವು ಹಾಗೂ ಪ್ರಾಚಾರ್ಯ ಸಾಯಿಕಿಶೋರ್ ತಿಳಿಸಿದ್ದಾರೆ.
ಪರೀಕ್ಷೆಗೆ ಹಾಜರಾದ 80 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಇದರಲ್ಲಿ 46 ಡಿಸ್ಟಿಂಕ್ಷನ್, 24 ಪ್ರಥಮ ಶ್ರೇಣಿ, 5 ದ್ವಿತೀಯ ದರ್ಜೆಯಲ್ಲಿ, 5 ತೃತೀಯ ದರ್ಜೆಯಲ್ಲಿ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಇದರಲ್ಲಿ ಎಂ.ಝುಹಾ ಫಾತಿಮಾ 620, ನಿವೇದಿತಾ ದೇಶಪಾಂಡೆ 612(ಶೇ.97.92), ಎಚ್.ಕಾರ್ತಿಕ 611(97.76), ಕೆ.ಮೋಹಿತ್ ಚೌದರಿ 608, ಮಹ್ಮದ್ ರಿಹಾನ್ 608, ವಿವೇಕ್ ಅಂಜನಾ 608, ಮಹಾದೇವಗೌಡ 605, ಶಿಫಾ ಅಲಿ ಸಾಧಿಕ್ 601 ಅಂಕಗಳನ್ನು ಪಡೆದಿದ್ದು, ಈ ಶಾಲೆ 19 ವಿದ್ಯಾರ್ಥಿಗಳು ಕನ್ನಡದಲ್ಲಿ ನೂರಕ್ಕೆ ನೂರು ಮತ್ತು ಹಿಂದಿಯಲ್ಲಿ 14 ವಿದ್ಯಾರ್ಥಿಗಳು ನೂರಕ್ಕೆ ನೂರು ಅಂಕಗಳನ್ನು ಮತ್ತು ಸಮಾಜ ವಿಜ್ಞಾನದಲ್ಲಿ ಒಬ್ಬ ವಿದ್ಯಾರ್ಥಿ ನೂರಕ್ಕೆ ನೂರು ಅಂಕಗಳನ್ನು ಪಡೆದಿದ್ದಾರೆಂದು ತಿಳಿಸಿದರು.
ಉತ್ತಮ ಅಂಕಗಳನ್ನು ಪಡೆದು ಶಾಲೆಯ, ಪಟ್ಟಣದ, ತಾಲ್ಲೂಕಿನ ಹಾಗೂ ಜಿಲ್ಲೆಯ ಪ್ರತಿಷ್ಠೆಯನ್ನು ಹೆಚ್ಚಿಸಿದ ವಿದ್ಯಾರ್ಥಿಗಳನ್ನು ಹಾಗೂ ಉತ್ತಮ ಫಲಿತಾಂಶಕ್ಕೆ ಕಾರಣರಾದ ಶಿಕ್ಷಕರನ್ನು ಶಾಲೆಯ ಆಡಳಿತ ಮಂಡಳಿ ಸದಸ್ಯರು, ಶಿಕ್ಷಕ ವೃಂದದವರು ಅಭಿನಂದಿಸಿದ್ದಾರೆ.