ಬಳ್ಳಾರಿ

ಶಿಕ್ಷಣ ಕ್ಷೇತ್ರದಲ್ಲಿ ಖಾಸಗಿ ಅನುದಾನಿತ ಶಿಕ್ಷಣ ಸಂಸ್ಥೆಗಳ ಕೊಡುಗೆ ಅಪಾರ: ಮಧು ಬಂಗಾರಪ್ಪ

ಶಿಕ್ಷಣ ಕ್ಷೇತ್ರದಲ್ಲಿ ಖಾಸಗಿ ಅನುದಾನಿತ ಶಿಕ್ಷಣ ಸಂಸ್ಥೆಗಳ ಕೊಡುಗೆ ಅಪಾರ: ಮಧು ಬಂಗಾರಪ್ಪ

ಹೂವಿನಹಡಗಲಿ 22: ಶಿಕ್ಷಣ ಕ್ಷೇತ್ರದಲ್ಲಿ ಖಾಸಗಿ ಅನುದಾನಿತ ಶಿಕ್ಷಣ ಸಂಸ್ಥೆಗಳ ಕೊಡುಗೆ ಅಪಾರ ಎಂದು ಶಾಲಾ ಶಿಕ್ಷಣ ಇಲಾಖೆ ಸಚಿವ ಮಧು ಬಂಗಾರಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.  

ಬೆಂಗಳೂರಿನ ಜುಬ್ಲಿ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ ನಲ್ಲಿ ರುಪ್ಪಾ ಸೋಮವಾರ ಆಯೋಜಿಸಿದ್ದ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು. ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಶಿಕ್ಷಕರರು ಮುಂದಾಗಬೇಕು. ಹೊಸ ಹೊಸ ತಂತ್ರಗಳನ್ನು ಬಳಸಿ ಮಕ್ಕಳಿಗೆ ಅರ್ಥವಾಗುವಂತೆ ಸರಳವಾಗಿ ಬೋಧಿಸುವ ಮೂಲಕ ಆಸಕ್ತಿ ಮೂಡಿಸಿರಿ ಎಂದು ತಿಳಿಸಿದರು. ನಂದಿಪುರದ ಡಾ ಮಹೇಶ್ವರ ಸ್ವಾಮಿಗಳು ಸಾನಿಧ್ಯ ವಹಿಸಿದ್ದರು. ಪ್ರಶಸ್ತಿ ಪಡೆದ ಶಿಕ್ಷಣ ಸಂಸ್ಥೆಗಳು: ಆರ್ ಪಿ ಕೆ ಇಂಟರ್ನ್ಯಾಷನಲ್ ಪಬ್ಲಿಕ್ ಶಾಲೆ, ಹಡಗಲಿ. ಸಾಧನಾ ಆಂಗ್ಲ ಮಾಧ್ಯಮ ಶಾಲೆ ಹೊಳಲು, ವಿದ್ಯಾಂಜಲಿ ಶಾಲೆ ಹಡಗಲಿ. ವಿಶ್ವ ಭಾರತಿ ಇಟ್ಟಗಿ, ಕೆ ಎನ್ ಶಾಲೆ ಹಡಗಲಿ ಶಾಲೆಗಳಿಗೆ ಶಿಕ್ಷಣ ಭೀಷ್ಮ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.  

ವಿದ್ಯಾ ರತ್ನ ಪ್ರಶಸ್ತಿ ಪುರಸ್ಕೃತರು: ದಿವ್ಯ ಜ್ಯೋತಿ ಪ್ರಾಥಮಿಕ ಶಾಲೆಯ ಹಾಲೇಶ್ ಹಕ್ಕಂಡಿ, ದಾವಣಗೆರೆ ಕಾನ್ವೆಂಟ್ ಆಂಗ್ಲ ಮಾಧ್ಯಮ ಶಾಲೆಯ ಶಾಂತಾ ಎ.ಲಿಟಲ್ ಚಾಂಪ್ಸ್‌ ಶಾಲೆಯ ಶಿಲ್ಪ ಎಸ್‌. ಉತ್ತಂಗಿಯ ರೆವೆರೆಂಡ್ ಚನ್ನಪ್ಪ ಶಾಲೆಯ ಕೆ ಗುರು ಬಸವರಾಜ, ಹಡಗಲಿಯ ಆರ್ ಆರ್ ವಿಜಯನಗರ ಶಾಲೆಯ ಎಲ್ ತೇಜು ನಾಯ್ಕ, ಎಂ ಎಂ ಪಾಟೀಲ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿಜಯಲಕ್ಷ್ಮಿ ಪಾಟೀಲ್, ಗ್ಲೋಬಲ್ ಇಂಟರ್ನ್ಯಾಷನಲ್ ಪಬ್ಲಿಕ್ ಶಾಲೆಯ ಕಿನ್ನರಿ ದೇವಿ.ಸೇರಿದಂತೆ ಇತರರಿಗೆ ಶಿಕ್ಷಕ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.ಈ ಸಮಾರಂಭದಲ್ಲಿ ವಿಧಾನ ಪರಿಷತ್ ಸದಸ್ಯ ಎಸ್ ಎಲ್ ಭೋಜೇಗೌಡ. ಕರ್ನಾಟಕ ರುಪ್ಪಾ ಸಂಘಟನೆಯ ರಾಜ್ಯಾಧ್ಯಕ್ಷ .ಡಾ ಹಾವನೂರ ಎಸ್ ಲೇಪಾಕ್ಷ, ಕಾರ್ಯಾಧ್ಯಕ್ಷ ಜಿ ಎಂ. ಕೋಟ್ರೇಶ, ಕಾರ್ಯದರ್ಶಿ ಶಶಿಧರ್ ದಿಂಡೂರ ಉಪಸ್ಥಿತರಿದ್ದರು. 

ಹಡಗಲಿ ರುಪ್ಪಾ ಸಂಘಟನೆಯ ಅಧ್ಯಕ್ಷ ಪಿ. ಬಿ. ಹಾವನೂರು. ಗೌರವ ಅಧ್ಯಕ್ಷರಾದ ಜಿ ಕೋಟ್ರೇಶ ಪ್ರಧಾನ ಕಾರ್ಯದರ್ಶಿ ಹುಸೇನ್ ಮಿಯಾ ಕೆ. ಸಹ ಕಾರ್ಯದರ್ಶಿ ದಯಾನಂದ ಎಂ ರಾಜ್ಯ ಪ್ರತಿನಿಧಿಗಳಾದ ಹೇಮಾ ಜೈನರ್, ಡಿ.ಕರಿಂಸಾಬ್‌. ನಿಸಾರ್ ಅಹ್ಮದ್, ಇತರರಿದ್ದರು. 


ಸುದ್ದಿ ಓದಿ