ಮುದ್ದೆಬಿಹಾಲ್

ಬಿಜೆಪಿ ಕಾರ್ಯಕರ್ತರ ವಿಜಯೋತ್ಸವ: ಗುಜರಾತ್ ಫಲಿತಾಂಶ-ಕರ್ನಾಟಕದ ಚುನಾವಣೆಗೆ ದಿಕ್ಸೂಚಿ

ಬಿಜೆಪಿ ಕಾರ್ಯಕರ್ತರ ವಿಜಯೋತ್ಸವ: ಗುಜರಾತ್ ಫಲಿತಾಂಶ-ಕರ್ನಾಟಕದ ಚುನಾವಣೆಗೆ ದಿಕ್ಸೂಚಿ

ಮುದ್ದೇಬಿಹಾಳ : ಗುಜರಾತ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಜನಪರ ಯೋಜನೆಗಳಿಗೆ ಮತದಾರರು ಒಲವು ತೋರಿದ್ದು ಭವಿಷ್ಯದಲ್ಲಿ ಕರ್ನಾಟಕ ವಿಧಾನಸಭೆ ಚುನಾವಣೆಗೂ ದಿಕ್ಸೂಚಿಯಾಗಲಿದೆ ಎಂದು ಜಿಪಂ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಹೇಳಿದರು. 

ಗುಜರಾತ್ ಚುನಾವಣೆಯಲ್ಲಿ ಬಿಜೆಪಿ ಬಹುಮತ ಸಾಧಿಸಿದ ಹಿನ್ನೆಲೆಯಲ್ಲಿ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಗುರುವಾರ ಬಿಜೆಪಿ ಘಟಕದಿಂದ ಹಮ್ಮಿಕೊಂಡಿದ್ದ ವಿಜಯೋತ್ಸವದಲ್ಲಿ ಅವರು ಮಾತನಾಡಿದರು.ಕರ್ನಾಟಕದಲ್ಲಿ 150ಕ್ಕೂ ಹೆಚ್ಚು ಸ್ಥಾನಗಳಲ್ಲಿ ಬಿಜೆಪಿ ಗೆಲುವು ಸಾಧಿಸುವುದರದಲ್ಲಿ ಸಂದೇಹವಿಲ್ಲ ಎಂದರು. 

      ಡಾ.ವೀರೇಶ ಪಾಟೀಲ್,ಬಿಜೆಪಿ ಎಸ್ಟಿ ಮೋರ್ಚಾ ಜಿಲ್ಲಾಧ್ಯಕ್ಷ ದೇವೇಂದ್ರ ವಾಲೀಕಾರ ಮಾತನಾಡಿ, ಬಿಜೆಪಿ ಗೆಲುವಿಗೆ ಸರಕಾರ ಜಾರಿಗೊಳಿಸಿರುವ ಜನಪ್ರೀಯ ಯೋಜನೆಗಳು ಕಾರಣವಾಗಿವೆ ಎಂದರು.ಈ ವೇಳೆ ಪಟಾಕಿ ಸಿಡಿಸಿ,ಸಿಹಿ ಹಂಚಿ ಸಂಭ್ರಮಿಸಲಾಯಿತು.ನಗರ ಘಟಕದ ಅಧ್ಯಕ್ಷ ಪುನೀತ ಹಿಪ್ಪರಗಿ,ಪುರಸಭೆ ಮಾಜಿ ಸದಸ್ಯ ರಾಜು ಬಳ್ಳೊಳ್ಳಿ,ಸತೀಶ ಕುಲಕರ್ಣಿ,ಜಿಲ್ಲಾ ಕಾರ್ಯದರ್ಶಿ ಬಸವರಾಜ ದಡ್ಡಿ(ಶಿವು),ವಿಕ್ರಮ ಓಸ್ವಾಲ್,ಪರಶುರಾಮ ಮುರಾಳ,ಬಿ.ಮುರಳಿಕೃಷ್ಣ,ಸಚಿನ್ ಚಿನ್ನಾಪೂರ ಮೊದಲಾದವರು ಇದ್ದರು. 


ಸುದ್ದಿ ಓದಿ