ಬೊಮ್ಮಾಯಿಯವರ ನೇತೃತ್ವದಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಗೆಲುವು ನಿಶ್ಚಿತ
ಶಿಗ್ಗಾವಿ 17: ಮಾಜಿ ಸಿಎಂ ಬಸವರಾಜ ಬೊಮ್ಮಾಯಿಯವರ ನೇತೃತ್ವದಲ್ಲಿ ಮುಂಬರುವ ಉಪಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಗೆಲುವು ನಿಶ್ಚಿತ ಎಂದು ಭಾರತ ಸೇವಾ ಸಂಸ್ಥೆಯ ಅಧ್ಯಕ್ಷರಾದ ಶ್ರೀಕಾಂತ್ ದುಂಡಿಗೌಡ್ರ ಹೇಳಿದರು.
ತಾಲೂಕಿನ ಹೊಸೂರು, ಯತ್ನಳ್ಳಿ ತಾಂಡ ಹಾಗೂ ಮಸಳಿಕೊಪ್ಪ, ಅರಟಾಳ ಗ್ರಾಮಗಳಲ್ಲಿ ಶ್ರೀಕಾಂತ ದುಂಡಿಗೌಡ್ರ ನೇತೃತ್ವದಲ್ಲಿ ನಡೆದ “ನಮ್ಮ ನಡೆ ಕಾರ್ಯಕರ್ತರ ಕಡೆ” ಕಾರ್ಯಕ್ರಮದಲ್ಲಿ ಕಾರ್ಯಕರ್ತರನ್ನ ಬೇಟಿಯಾಗಿ ಮಾತನಾಡಿದ ಅವರು, ನಮ್ಮ ಅಜೆಂಡ ಅಭಿವೃದ್ಧಿಯೊಂದೇ ಆಗಿದ್ದು, ಮೊದಲಿನ ಬಿಜೆಪಿ ಸರಕಾರದಿಂದ ಎಲ್ಲಾ ಯೋಜನೆಗಳನ್ನು ಕ್ಷೇತ್ರದ ಜನರ ಮನೆ ಮನೆ ತಲುಪಿಸುವಂತಹ ಕಾರ್ಯ ಆಗಿದೆ, ಸರ್ಕಾರದ ಸೌಲಭ್ಯಗಳು ಸದ್ಬಳಕೆಯಾಗಿದೆ, ಇನ್ನು ಸಂಸದ ಪ್ರಹ್ಲಾದ್ ಜೋಶಿ ಅವರ ಕೇಂದ್ರ ಸರ್ಕಾರದ ಯೋಜನೆಗಳು ಬಡವರ ಪರವಾಗಿವೆ ಆದ್ದರಿಂದ ಬಿಜೆಪಿಯ ಗೆಲುವು ನಿಜವಾದ ಅಭಿವೃದ್ಧಿಯ ಗೆಲುವು ಎಂದರು.
ನಂತರ ವಿವಿಧ ಗ್ರಾಮಗಳ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ದೇವಾಲಯಗಳಿಗೆ ಭೇಟಿ ನೀಡಿ ಆಶೀರ್ವಾದ ಪಡೆದರು, ಮುಖಂಡರು ಶ್ರೀಕಾಂತ ದುಂಡಿಗೌಡ್ರ ಅವರನ್ನ ಸನ್ಮಾನಿಸಿ ಗೌರವಿಸಿದರು.
ಕೆಸಿಸಿ ನಿರ್ದೇಶಕ ಸಂಗಮೇಶ್ ಕಂಬಾಳಿಮಠ, ಮುಖಂಡರಾದ ಎಂ ಎನ್ ವೆಂಕೋಜಿ, ತಿಪ್ಪಣ್ಣ ಸಾತಣ್ಣವರ್, ಹನುಮರೆಡ್ಡಿ ನಡುವಿನಮನಿ, ಸಿ ವಿ ಮತ್ತಿಗಟ್ಟಿ, ಬಸವರಾಜ ನಾರಾಯಣಪುರ, ಸಂತೋಷ್ ಹುಣಶ್ಯಾಳ್, ನಾಗಪ್ಪ ಅದೃಶ್ಯಪ್ಪನವರ್, ರಮೇಶ್ ಸಾತಣ್ಣವರ್, ಗ್ರಾಮದ ಹಿರಿಯರಾದ ಶೇಖರಗೌಡ ಪಾಟೀಲ್, ಶಂಕ್ರ್ಪ ಲಕ್ಕಣ್ಣವರ್, ಆದಪ್ಪ ಚಬ್ಬಿ, ನೀಲಪ್ಪ ಬಾರಕೆರ, ವೀರನಗೌಡ ದೊಡ್ಡಗೌಡ್ರು, ಶಂಕರಗೌಡ ಪಾಟೀಲ್, ಸುಧೀರ್ ಚಬ್ಬಿ ,ಮಂಜನಗೌಡ ಪಾಟಿಲ್, ಈರ್ಪ ಡವಗಿ ,ಎಸ್ ಆರ್ ಅದರಗುಂಚಿ, ಚನ್ನಪ್ಪ ಬಿಂದ್ಲಿ ,ನಾಗರಾಜ್ ಸೂರಗೊಂಡ ,ಶಿವನಗೌಡ ಪಾಟೀಲ್ ,ಅರುಣ್ ಇಂದೂರ್, ಮಹಾದೇವ ದೇವತಿ, ನಿತ್ಯಾನಂದ ಬರದೂರ, ಅರ್ಜಪ್ಪ ಲಮಾಣಿ, ಮಾಂತೇಶ್ ಲಮಾಣಿ, ಕೃಷ್ಣ ಲಮಾಣಿ, ಧರಣೇಂದ್ರ ಪುಟ್ಟಣ್ಣವರ, ಬಾಹುಬಲಿ ಬಿಶೆಟ್ಟಿ, ಗದಿಗೆಪ್ಪ ಹೊನ್ನಳ್ಳಿ ಹಾಗೂ ಗ್ರಾಮದ ಮುಖಂಡರು, ಹಿರಿಯರು, ಯುವಕರು ಉಪಸ್ಥಿತರಿದ್ದರು.