ಜಿಲ್ಲೆಯಲ್ಲಿ ತೀರಾ ಹದಗೆಟ್ಟ ಸಾರಿಗೆ ವ್ಯವಸ್ಥೆ : ಜಿ.ಎಸ್ ಗೊಂಬಿ
ಮಹಾಲಿಂಗಪುರ 08: ಇತ್ತಿಚೀನ ಕೆಲವು ತಿಂಗಳಲ್ಲಿ ಜಿಲ್ಲೆಯಲ್ಲಿ ಸಾರಿಗೆ ವ್ಯೆವಸ್ಥೆ ತೀರಾ ಹದಗೆಟ್ಟಿದೆ ಎಂದು ಪುರಸಭೆ ಮಾಜಿ ಅಧ್ಯಕ್ಷ ಜಿ.ಎಸ್ ಗೊಂಬಿ ಹೇಳಿದರು.
ಸ್ಥಳೀಯ ಜಿ.ಎಲ್.ಬಿ.ಸಿ ಅತಿಥಿ ಗೃಹದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಮಹಾಲಿಂಗಪುರ ಪಟ್ಟಣವು ರಾಜ್ಯದ ಪ್ರಮುಖ ವ್ಯಾಪಾರಿ ಪಟ್ಟಣ, ಶಾಲಾ ಕಾಲೇಜುಗಳು, ಆಸ್ಪತ್ರೇಗಳು, ಕೃಷಿ ಮಾರುಕಟ್ಟೆ, ಸುತ್ತ ಮುತ್ತ ಸಕ್ಕರೆ ಕಾರ್ಖಾನೆಗಳು, ದಿನವಿಡಿ ಬರುವ ರೈತಾಪಿ ಜನಗಳು, ಸಾವೀರಾರು ವಿದ್ಯಾರ್ಥಿ/ ವಿದ್ಯಾರ್ಥಿನಿಯರು ಗ್ರಾಮೀಣ ಭಾಗದ ಪ್ರದೇಶದಿಂದ ಮಹಾಲಿಂಗಪುರಕ್ಕೆ ನಗರವನು ಅವಲಂಬಿಸಿದ್ದಾರೆ. ಒಟ್ಟು ಒಂದು ಲಕ್ಷ ಜನ ಸಂದನಿಯಿಂದ್ ಅದರಲ್ಲಿ 80ಅ ಜನ ಸಾರಿಗೆ ವ್ಯೆವಸ್ಥೆಯನ್ನು ಅವಲಂಬಿಸಿದ್ದಾರೆ.
ಮಹಾಲಿಂಗಪುರವು ಪ್ರಮುಖ ವಾಣಿಜ್ಯ ಕೇಂದ್ರವಿದ್ದು ಬಸ್ಸುಗಳ ಸಂಖ್ಯೆ ತೀರಾ ಕಡಿಮೆಯಾಗಿ, ತಾಲೂಕು ಕಛೇರಿಗಳಿಗೆ, ಜಿಲ್ಲಾ ಮಟ್ಟದ ಕಛೇರಿಗಳಿಗೆ ಹೋಗಿಬರುವುದು ತೀರಾ ದುಸ್ತರವಾಗಿದೆ. ಮಹಿಳೆಯರಿಗಾಗಿ ಉಚಿತ ಬಸ್ ಮಾಡಿದ ಮೇಲೆ ಸಾಮಾನ್ಯ ಪ್ರಯಾಣಿಕರು ಬಸ್ ಎರುವುದು ಅತ್ಯಂತ ಕಠಿಣವಾಗಿದೆ. ಮಹಿಳೆಯರಿಗೆ, ವಿದ್ಯಾರ್ಥಿಗಳಿಗೆ, ವಯಸ್ಕರಿಗೆ ಸುರಕ್ಷತೆ ಇಲ್ಲದಂತಾಗಿದೆ. ಬಸ್ ನಿರ್ವಾಹಕರು, ಚಾಲಕರು ನಿಸ್ಸಾಯಕರಾಗಿದ್ದಾರೆ. ಸಾರ್ವಜನಿಕರ ಪಾಣಕ್ಕೆ ಬೆಲೆ ಇಲ್ಲದಂತಾಗಿದೆ. ಯಾವುದೇ ಒಂದು ಊರಿಗೆ ಹೋಗಬೇಕಾದರೆ ಗಂಟೆ ಗಟ್ಟಲೆ ಕಾದು ನಿಲ್ಲಬೇಕಾದ ಪರಿಸ್ಥೀತಿ ಬಂದಿದೆ.
ಅಲ್ಲದೆ ಮುಧೋಳದಿಂದ ಮಹಾಲಿಂಗಪುರಕ್ಕೆ ಸಂಜೆ ಯಾದರೆ ಬಸ್ಸುಗಳೆ ಇಲ್ಲ, ಇನ್ನೂ ಜಿಲ್ಲಾ ಮಟ್ಟದಿಂದ ಅಥವಾ ಬೇರೆಕಡೆಯಿಂದ ಬರಬೇಕಾದರೆ ಬಸ್ಸುಗಳು ಇಲ್ಲದೆ ಜನ ರಾತ್ರಿಗಟ್ಟಲೆ ಅಲ್ಲದೆ ಕಾಯಬೇಕಾದ ದುಸ್ಥೀತಿ ಬಂದಿದೆ. ರಾಜ್ಯ ಸರ್ಕಾರಕ್ಕೆ ಈ ಮೂಲಕ ತಿಳಿಸುವುದೇನೆಂದರೆ ಮಹಾಲಿಂಗಪುರಕ್ಕೆ ಇನ್ನೂ ಹೆಚ್ಚಿನ ಬಸ್ ಗಳ ಸೌಲಭ್ಯ ವದಗಿಸಿ, ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನು ಮಾಡಿಕೊಡಬೇಕು,
ಉದಾಹರಣೆ : ಮಹಾಲಿಂಗಪುರ- ಬೆಳಗಾವಿ, ಮಹಾಲಿಂಗಪುರ-ಕೊಲ್ಲಾಪುರ, ಮಹಾಲಿಂಗಪುರ- ಚಿಕ್ಕೋಡಿ, ಮಹಾಲಿಂಗಪುರ-ಹುಬ್ಬಳ್ಳಿ, ಮಹಾಲಿಂಗಪುರ-ಬೆಂಗಳೂರ, ಹೀಗೆ ಇನ್ನೂ ಹಲವಾರು ಕಡೆಗಳಲ್ಲಿ ಬಸ್ಗಳ ಸೌಲಭ್ಯವನ್ನು ಹೆಚ್ಚಿಸಬೇಕು. ಅಲ್ಲದೆ ಮಹಾಲಿಂಗಪುರದ ಸರ್ಕಾರಿ ಆಸ್ಪತ್ರೆ ಊರಿನಿಂದ ಬಹಳ ದೂರವಿರುವುದರಿಂದ ಅಲ್ಲಿಗೆ ಹೋಗಲು ಜನರಿಗೆ ಬಸ್ಸ ವ್ಯೆವಸ್ಥೆ ಮಾಡಿಸಬೇಕು, ಕೂಡಲೆ ಜಿಲ್ಲಾ ಮತ್ತು ತಾಲೂಕು ಅಧಿಕಾರಿಗಳು ಇತ್ತಕಡೆಗೆ ಗಮನ ಹರಿಸಿ ಸಾರ್ವಜನಿಕರಿಗೆ ಅನುಕೂಲವಾಗುವ ರೀತಿ ಬಸ್ ಗಳನ್ನು ಬಿಡಬೇಕು, ಇಲ್ಲವಾದಲ್ಲಿ ಮುಂದೋದ್ದುದಿನ ಸಾರ್ವಜನಿಕರೆಲ್ಲರೂ ಸೇರಿ ಉಗ್ರ ಹೋರಾಟ ಮಾಡಬೇಕಾಗುವುದು ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಮಹಾಲಿಂಗಪ್ಪ ಕುಳ್ಳೋಳ್ಳಿ, ಶ್ರೀಮಂತ ಹಳ್ಳಿ, ಪುರಸಭೆ ಸದಸ್ಯರಾದ ರವಿ ಜವಳಗಿ, ಚನಬಸು ಯರಗಟ್ಟಿ, ರಾಜು ಚಮಕೇರಿ ಮತ್ತು ಮಹೇಶ ಜಿಡ್ಡಿಮನಿ,ಬಸವರಾಜ ಮಡಿವಾಳ ಇದ್ದರು.