ಹೆಡ್ ಬುಷ್ ಚಲನಚಿತ್ರದಲ್ಲಿ ವೀರಗಾಸೆ ಕಲಾವಿದರಿಗೆ ಅವಮಾನ: ಕ್ರಮ ಜರುಗಿಸುವಂತೆ ಮನವಿ
ಶಿಗ್ಗಾವಿ 29: ಹೆಡ್ ಬುಷ್ ಚಲನಚಿತ್ರದಲ್ಲಿ ವೀರಗಾಸೆ ಕಲಾವಿದರಿಗೆ ಅವಮಾನ ಮಾಡಲಾದ ಚಿತ್ರ ತಂಡದ ವಿರುದ್ಧ ಕ್ರಮ ಜರಗಿಸುವಂತೆ ಒತ್ತಾಯಿಸಿ ಶಿಗ್ಗಾವಿ ತಾಲೂಕು ವೀರಗಾಸೆ ಕಲಾವಿದರ ಅಭಿಮಾನಿಗಳ ಬಳಗದ ವತಿಯಿಂದ ತಹಶೀಲ್ದಾರ ಶಿವಾನಂದ ರಾಣೆಯವರ ಮೂಲಕ ಮನವಿ ಅರ್ಿಸಿ ಒತ್ತಾಯಿಸಲಾಯಿತು.
ಈಗಾಗಲೇ ತೆರೆ ಕಂಡಿರುವ ಹೆಡ್ ಬುಷ್ ಕನ್ನಡ ಚಲನಚಿತ್ರದಲ್ಲಿ ವೀರಗಾಸೆ ಕಲಾವಿದರಿಗೆ ಚಿತ್ರದಲ್ಲಿ ನಾಯಕ ಡಾಲಿ ಧನಂಜಯ ಕಾಲಿನಿಂದ ಒದೆಯುತ್ತಿರುವ ದೃಶ್ಯ ಪ್ರಸಾರವಾಗುತ್ತಿದ್ದು, ಇದು ಅತ್ಯಂತ ಖಂಡನೀಯವಾದದ್ದು ಈ ದೃಶ್ಯ ಅಸಂಖ್ಯಾತ ವೀರಭದ್ರಸ್ವಾಮಿಯ ಆರಾಧಕರ ಧಾರ್ಮಿಕ ಭಾವನೆಗೆ ಧಕ್ಕೆ ಉಂಟುಮಾಡಿದೆ. ಇದನ್ನು ಶಿಗ್ಗಾವಿ ತಾಲೂಕು ಪೀರಗಾಸೆ, ಕಲಾವಿದರ ಅಭಿಮಾನಿಗಳ ಬಳಗೆ ಖಂಡಿಸುತ್ತದೆ. ಈ ಕೂಡಲೇ ವಿವಾದಿತ ದೃಶ್ಯವನ್ನು ಚಿತ್ರದಿಂದ ತೆಗೆದುಹಾಕಿ ಕ್ಷಮಾಪಣೆ ಕೋರಬೇಕಾಗಿ ಆಗ್ರಹಿಸುತ್ತದೆ, ಅಲ್ಲದೆ ಮತ್ತೆ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಲು ಒತ್ತಾಯಿಸುತ್ತಾ ಶೀಘ್ರದಲ್ಲಿ ಚಿತ್ರತಂಡದ ಮೇಲೆ ಕ್ರಮ ಕೈಗೊಳ್ಳದಿದ್ದರೆ ರಾಜ್ಯಾದ್ಯಂತ ಹೋರಾಟ ಮಾಡಲಾಗುವುದು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಬಸವರಾಜ ನಾರಾಯಣಪುರ, ಸಂಗಮೇಶ ಪರಶೆಟ್ಟಿ, ಓಂಪ್ರಕಶ ಅಂಗಡಿ, ಮಂಜುನಾಥ ಮಿರ್ಜಿ, ವಿಜಯಕುಮಾರ ಪಟ್ಟಣಶೆಟ್ಟಿ, ಗಂಗಾಧರ ಶೆಟ್ಟರ, ಸಿದ್ದಲಿಂಗೇಶ ಕುಂಬಾದಿ, ನಿಲಕಂಠಪ್ಪ ಸಕ್ರಿ, ಬಾಪುಗೌಡ್ರ ಪಾಟೀಲ, ಬಸವರಾಜ ಆಲದಕಟ್ಟಿ, ಸಂತೋಷ ಸವಣೂರ, ರೇವಣಪ್ಪ ಕಮ್ಮಾರ, ಗಂಗಾಧರ ಪೂಜಾರ, ಬಸವರಾಜ ಕೋಸುರು, ಗುರುನಂಜಪ್ಪ ಕುಂಬಾರಿ, ಸಿದ್ರಾಮಪ್ಪ ಕುಂಬಾರಿ, ವೀರಯ್ಯ ಪೂಜಾರ, ವಿಲಾಸ ನಾರಾಯಣಪೂರ, ನಿಸ್ಸಿಮಪ್ಪ ಪರಶೆಟ್ಟಿ, ಗದಿಗೆಪ್ಪ ಕುರವತ್ತಿ, ಶಂಬು ಕೇರಿ, ಸಂತೋಷ ಸವಣೂರ ಸೇರಿದಂತೆ ಇತರರು ಇದ್ದರು,