ವರುಣನ ಆರ್ಭಟ: ಅಂಗಡಿ, ಮನೆಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣ ಹಾನಿ : ವಿಜಯಪುರ ಜಿಲ್ಲಾಧಿಕಾರಿ ವಿಜಯಮಹಾಂತೇಶ ದ್ಯಾಮಣ್ಣವರ ಭೇಟಿ ನೀಡಿ ಪರೀಶೀಲನೆ
ಮುದ್ದೇಬಿಹಾಳ: ಪಟ್ಟಣದಲ್ಲಿ ಬುಧವಾರ ಭಾರಿ ಪ್ರಮಾಣದಲ್ಲಿ ಮಳೆ ಸುರಿದ ಪರಿಣಾಮ ಅಂಗಡಿ, ಮನೆಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣ ಹಾನಿಯಾಗಿರುವ ಬಗ್ಗೆ ಮಾಹಿತಿ ತಿಳಿದ ವಿಜಯಪುರ ಜಿಲ್ಲಾಧಿಕಾರಿ ವಿಜಯಮಹಾಂತೇಶ ದ್ಯಾಮಣ್ಣವರ ಸಂಜೆ ಬಸವೇಶ್ವರ ವೃತ್ತದಲ್ಲಿರುಬ ಬಹುತೇಕ ಅಂಗಡಿಗಳಿಗೆ, ಇಂದಿರಾ ಸರ್ಕಲ್, ತಾಳಿಕೋಟಿ ರಸ್ತೆ ಮಾರ್ಗರದಲ್ಲಿರವ ಕೆಲವು ಕಟ್ಟಿಗೆ ಅಡ್ಡೆಗಳಿಗೆ ಸಾ ಮಿಲ್ ಗಳಿಗೆ ಭೇಟಿ ನೀಡಿ ಪರೀಶೀಲನೆ ನಡೆಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈಗಾಗಲೇ ಈ ಹಿಂದೆ ಇದೇ ರೀತಿ ಸಾಕಷ್ಟು ಬಾರಿ ಮಳೆ ಬಂದರೂ ಇಷ್ಟೋಂದು ಅಂಗಡಿಗಳಿಗೆ ಮನೆಗಳಿಗೆ ನೀರು ನುಗ್ಗಿ ಹಾನಿಯಾಗಿರಲಿಲ್ಲ ಆದರೇ ಸಧ್ಯ ಈ ಬಾರಿ ಮಳೆ ಹೆಚ್ಚಾಗಿದ್ದು ಮಾತ್ರವಲ್ಲದೇ ಇನ್ನು ನಾಲ್ಕು ದಿನಗಳ ಕಾಲ ಹೀಗೆ ಮಳೆ ಮುಂದುವರೆಯಲಿದೆ ಈ ನಿಟ್ಟನಲ್ಲಿ ಯಾವೂದೇ ಹಾನಿಯಾಗದಂತೆ ಮತ್ತು ಸಾರ್ವಜನಿಕರಿಗೆ ತೊಂದರೆಯಾಗದಂತೆ ಬಹುತೇಕ ಎಲ್ಲ ಚರಂಡಿಗಳನ್ನು ಸ್ವಚ್ಚತೆಗೊಳಿಸಿ ಮಳೆ ನೀರು ಸರಾಗವಾಗಿ ಹೋಗುವಂತೆ ಮಾಡಬೇಕು ಎಂದು ತಹಶೀಲ್ದಾರ ಅವರಿಗೆ ಮತ್ತು ಪುರಸಭೆ ಮುಖ್ಯಾಧಿಕಾರಿ ಸೂಚಿಸಲಾಗಿದೆ.
ಸಧ್ಯ ಮನೆಗೆ ನೀರು ನುಗ್ಗಿ ಹಾನಿಗೊಳಗಾದವರ ಸಂಖ್ಯೆ ಮತ್ತು ಪ್ರಮಾಣ ಪರೀಶೀಲನೆ ನಡೆಸಲಾಗುವುದು ಅದರಲ್ಲಿ ಮನೆ ಹಾನಿಗೆ 10 ಸಾವಿರ ರೂಗಳ ವಿಶೇಷ ಪರಿಹಾನ ನೀಡಲು ಸರಕಾರ ನಿರ್ದೇಶನ ನೀಡಿದೆ ಅದನ್ನು ತಕ್ಷಣದಲ್ಲಿಯೇ ಸಂಪೂರ್ಣ ಪರಿಶಿಲನೆ ನಡೆಸಿ ನೈಜ ವರದಿ ಆದರದ ಮೇಲೆ ಪರಿಹಾರ ವಿತರಿಸಲಾಗುವುದು. ಆದರೇ ಅಂಗಡಿಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಹಾನಿಗೊಂಡವರಿಗೆ ಇಲ್ಲಿಂದ ಪರಿಹಾರ ಕೊಡಲು ಸಾಧ್ಯವಿಲ್ಲ ಕಾರಣ ಅಂತಹ ಅಂಗಡಿಗಳ ಸಮಗ್ರ ವರದಿ ತಯಾರಿ ಸರಕಾರಕ್ಕೆ ಕಳುಹಿಸಿಕೊಡಲಾಗುವುದು ನಂತರ ಸರಕಾರ ಯಾವ ರೀತಿ ಕ್ರಮ ಕೈಗೊಳ್ಳುತ್ತದೆಯೋ ಮತ್ತು ಎಷ್ಟು ಪರಿಹಾರ ನೀಡಬೇಕು ಎಂದು ಸೂಚಿಸುತ್ತದೆಯೋ ಎಂಬುದು ತಿಳಿದು ಅರ್ಹರಿಗೆ ಪ್ರಕೃತಿ ವಿಕೋಪದ ಪರಿಹಾರ ನೀಡಲಾಗವುದು ಎಂದರು.
ಈ ವೇಳೆ ಪುರಸಭೆ ಅಧ್ಯಕ್ಷೆ ಪ್ರತಿಭಾ ಅಂಗಡಗೇರಿ ಹಾಗೂ ಪುರಸಭೆ ಸದಸ್ಯ ಮೈಬೂಬ ಗೊಳಸಂಗಿಯವರು ಎಂಬುದನ್ನು ಸಧ್ಯ ಬಸವೇಶ್ವರ ವೃತ್ತದಿಂದ ಇಂದಿರಾ ಸರ್ಕಲ್ ದವರೆಗೂ ಲೋಕೋಪಯೋಗಿ ಇಲಾಖೆ ಹೊಸದಾಗಿ ಸಿಸಿ ರಸ್ತೆ ನಿರ್ಮಿಸಲಾಗಿದೆ. ಆದರೇ ಈ ಮೊದಲೆ ನಮ್ಮ ಪುರಸಭೆಗೆ ಯಾವೂದೇ ಮಾಹಿತ ಇಲ್ಲದೇ ಗುತ್ತಿಗೆದಾರರು ಅಕ್ಕ ಪಕ್ಕದಲ್ಲಿ ಗುಣಮಟ್ಟ ದೊಡ್ಡ ಚರಂಡಿ ನಿರ್ಮಿಸದೆ ರಸ್ತೆ ನಿರ್ಮಿಸಿದ್ದಾರೆ ಇದರಿಂದಾಗಿ ಈ ಬಾರಿ ಇಷ್ಟು ಪ್ರಮಾಣ ಹಾನಿಯಾಗಿದೆ ಎಂದು ಜಿಲ್ಲಾಧಿಕಾರಿ ವಿಜಯಮಹಾಂತೇಶ ದ್ಯಾಮಣ್ಣವರ ಅವರಲ್ಲಿ ಹೇಳಿದರು. ಇದಕ್ಕೆ ತಕ್ಷಣದಲ್ಲಿಯೇ ಪ್ರತಿಕಿಯಿಸಿದ ಜಿಲ್ಲಾಧಿಕಾರಿಗಳು ಸಧ್ಯ ಪರಿಸ್ಥಿತಿ ನೋಡಿದರೆ ರಸ್ತೆ ನಿರ್ಮಾಣ ಅವೈಜ್ಞಾನಿಕವಾಗಿ ಎಂಬುದು ಮೋಲ್ನೋಟಕ್ಕೆ ಕಂಡುಬರತ್ತಿದೆ ಆದರೂ ಮುಂದೆಯೂ ಹೀಗೆ ಆಗಬಾರದು ಎಂಬ ಉದ್ದೇಶದಿಂದ ಸಂಬಂಧಪಟ್ಟ ಅಧಿಕಾರಿಗಳೋಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ಹೇಳಿದರು.
ಈ ವೇಳೆ ವಿಜಯಪುರ ಬಲರಾಮ ಲಮಾಣಿ, ಜಿಲ್ಲಾ ಅಗ್ನಿಶಾಮಕ ಅಧಿಕಾರಿ ರಂಗನಾಥ, ತಹಶಿಲ್ದಾರ ಬಿ ಎಸ್ ಕಡಕಭಾವಿ, ಪಿಎಸೈ ರೇಣುಕಾ ಲಮಾಣಿ, ಪುರಸಭೆ ಮುಖ್ಯಾಧಿಕಾರಿ ಸುರೇಖಾ ಬಾಗಲಕೋಟ ಹಾಗೂ ಗಣ್ಯರಾದ ನೀಲಕಂಠರಾವ ನಾಡಗೌಡ ಸೇರಿದಂತೆ ಹಲವರು ಇದ್ದರು.