ಮಹಲಿಂಗಪುರ

ಮುಂಗಾರು ಮಳೆಗಾಗಿ ಹಿಂದು ಮುಸ್ಲಿಂ ಸಮುದಾಯಗಳಿಂದ ವಿವಿಧ ರೀತಿಯ ಪ್ರಾರ್ಥನೆಗೆ ದೇವರ ಮೊರೆ.

ಮುಂಗಾರು ಮಳೆಗಾಗಿ ಹಿಂದು ಮುಸ್ಲಿಂ ಸಮುದಾಯಗಳಿಂದ ವಿವಿಧ ರೀತಿಯ ಪ್ರಾರ್ಥನೆಗೆ ದೇವರ ಮೊರೆ.

ಮಹಾಲಿಂಗಪುರ25  : ಸಂಕಷ್ಟ ಬಂದಾಗ ಪರಿಹಾರಕ್ಕಾಗಿ ಭಗವಂತನನ್ನು ನೆನೆಯುವುದು ಪ್ರಾಚೀನ ಕಾಲದಿಂದ ನಡೆದು ಬಂದ ಸಂಪ್ರದಾಯವಾಗಿದೆ. ಆದ್ದರಿಂದ ಜೂನ್ ಆರಂಭದ ವಾರದಲ್ಲಿ ಆಗಬೇಕಿದ್ದ ಮಳೆ ವಿಳಂಬವಾಗಿರುವುದಕ್ಕೆ ಕರ್ನಾಟಕದಾದ್ಯಂತ ಮಳೆಗಾಗಿ ವಿವಿಧ ರೀತಿಯಲ್ಲಿ ಜನರು ದೇವರ ಮೊರೆ ಹೋಗುತ್ತಿದ್ದಾರೆ. 

ಮಹಾಲಿಂಗಪುರ ಪಟ್ಟಣದ ಬಸವನಗರದಲ್ಲಿ ಹುರಕಡ್ಲಿ ಫೌಂಡೇಶನ್ ವತಿಯಿಂದ ಹಮ್ಮಿಕೊಂಡಿದ್ದ ಸಮೃದ್ಧ ಮಳೆಗಾಗಿ ಕಪ್ಪೆ, ಕತ್ತೆ ಮತ್ತು ಗುಡಚವ್ವನ ಮದುವೆ, ದೇವಾಲಯಗಳಲ್ಲಿ ಅಭಿಷೇಕ, ಉರುಳು ಸೇವೆ ಅಲ್ಲದೆ ಮೆರವಣಿಗೆಯಲ್ಲಿ ಸಾಗಿದ ಜನರಿಗೆ ಭೋಜನ ವ್ಯವಸ್ಥೆ ಸಹ ಮಾಡಲಾಗಿತ್ತು. ಈ ರೀತಿಯಾಗಿ ಹಿಂದು ಸಮುದಾಯದವರು ದೇವರಿಗೆ ಪ್ರಾರ್ಥನೆ ಸಲ್ಲಿಸಿದರೆ, ಮುಸ್ಲಿಂ ಸಮಾಜದವರು ಸಹ ಉಲ್ಮಾ ಕಮಿಟಿ ನೇತೃತ್ವದಲ್ಲಿ ರವಿವಾರ ಮುಂಜಾನೆ ಮನೆಗಳಿಂದ ಹಲವಾರು ಜನರು ಬರಿಗಾಲಲ್ಲಿ ಬಂದು, ಸಂಪ್ರದಾಯದಂತೆ ದುವಾ ಮಾಡುವ ಮೂಲಕ ಮುಂಗಾರು ಮಳೆಗಾಗಿ ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದರು.  

 ಸ್ಥಳೀಯ ಖಾರಿ ಜುಬೇರ್ ಸಾಹಬ್ ಅವರು ಮಳೆಗಾಗಿ ಪ್ರಾರ್ಥನೆ ಸಲ್ಲಿಸುತ್ತ ನಮಗಾಗಿ ಈ ಬ್ರಹ್ಮಾಂಡವನ್ನೆ ಸೃಷ್ಟಿ ಮಾಡಿ ಇಲ್ಲಿರುವ ಪ್ರತಿಯೊಂದು ವಸ್ತುವನ್ನು ಬಳಸಿಕೊಂಡು ನೀನು ನನ್ನ ಶಕ್ತಿ, ಪರಾಕ್ರಮ, ಕೊಡುಗೆ ಮತ್ತು ವಿಸ್ಮಯಗಳನ್ನು ತಿಳಿದು ಶುಧ್ಧ ಭಕ್ತಿಯನ್ನು ಸಮರ​‍್ಿಸು ಸಾಕು ನಿನಗೆ ಪವಿತ್ರ ಸ್ವರ್ಗ ನೀಡುತ್ತೇನೆ ಎಂದು ಹೇಳಿದ್ದಿಯಾ, ನಾವು ನೀನು ನೀಡಿರುವ ಪ್ರತಿಯೊಂದು ವಸ್ತುವನ್ನು ಬಳಸಿಕೊಂಡು ಸುಖದ ಸುಪ್ಪತ್ತಿಗೆಯಲ್ಲಿ ಎಲ್ಲವನ್ನೂ ಮರೆತು ಗರ್ವದ ಜೀವನ ಸಾಗಿಸುತ್ತಿದ್ದು,ನಮ್ಮಿಂದ ಪ್ರಮಾದವಾಗಿದೆ ಕ್ಷಮಿಸು ಮತ್ತು ಇನ್ನೆಂದೂ ಇಂತಹ ತಪ್ಪುಗಳು ಮರು ಕಳುಹಿಸದಂತೆ ನಮ್ಮನ್ನು ಕರುಣಿಸು ನಿನ್ನ ಪರಾಕ್ರಮದ ಮುಂದೆ ನಾವು ತೃನಸಮಾನವೂ ಕೂಡ ಅಲ್ಲ. ಜಲದಿಂದಲೆ ಇಡಿ ಜಗತ್ತಿನ ಬದುಕು ಸಾಗಿ ಬಂದಿದೆ. ನೀರಿಲ್ಲದೆ ಜೀವನಾಧಾರವಾದ ಫಸಲುಗಳು ನಷ್ಟಗೊಂಡು ಪ್ರಾಣಿ, ಪಕ್ಷಿಗಳು ಕೂಡ ತೊಂದರೆಯಲ್ಲಿವೆ ಅವುಗಳ ಸಲುವಾಗಿಯಾದರೂ ಮಳೆ ನೀಡು ಪ್ರಭು ಎಂದು (ಅಲ್ಲಾಹ) ದೇವರಲ್ಲಿ ಬೇಡಿಕ್ಕೊಂಡರು. 

ಊರಿನ ಸಮಸ್ತ ಮುಸ್ಲಿಂ ಸಮಾಜದ ಹಿರಿಯರು, ಖಾರಿ, ಮೌಲ್ವಿ, ಹಾಪೀಜಗಳು, ಚಿಕ್ಕ ಮಕ್ಕಳು ಮತ್ತು ವೃದ್ದರು ಸೇರಿದಂತೆ ಮಳೆಗಾಗಿ ಏರಿ​‍್ಡಸಿದ್ದ ದುವಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. 


ಸುದ್ದಿ ಓದಿ