ಬಳ್ಳಾರಿ ಜಿಲ್ಲೆಯಾದ್ಯಂತ ವರಮಹಾಲಕ್ಷ್ಮೀ ಹಬ್ಬದ ಸಂಭ್ರಮ
ಬಳ್ಳಾರಿ 18: ನಗರ ಸೇರಿದಂತೆ ಜಿಲ್ಲೆಯಾದ್ಯಂತ ಶುಕ್ರವಾರ ವರ ಮಹಾಲಕ್ಷ್ಮೀ ಹಬ್ಬವನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು. ಶ್ರಾವಣ ಮಾಸದಲ್ಲಿ ಎರಡನೇ ಶುಕ್ರವಾರದಲ್ಲಿ ಬರುವ ವರ ಮಹಾಲಕ್ಷ್ಮೀ ಹಬ್ಬ ಹಿನ್ನೆಲೆ, ಮಹಿಳೆಯರು ಲಕ್ಷ್ಮೀ ದೇವಿ ಮೂರ್ತಿಯನ್ನು ಪ್ರತಿಷ್ಠಾಪಿಸಿ, ಚಿನ್ನಾಭರಣ, ನಾನಾ ಬಗೆಯ ಹೂವುಗಳಿಂದ ಅಲಂಕರಿಸಿ, ವಿಶೇಷ ಪೂಜೆ ಸಲ್ಲಿಸಿ, ಆರತಿ ಬೆಳಗಿ ಭಕ್ತಿ ಸಮರ್ಿಸಿದರು. ಹೋಳಿಗೆ, ಚಕ್ಕಲಿ, ಕೋಡುಬಳೆ, ಕಾರ್ಚಿಕಾಯಿ, ಪಾಯಸ, ಕಡುಬು, ಹೋಳಿಗೆ ಸೇರಿದಂತೆ ನಾನಾ ಬಗೆಯ ಪದಾರ್ಥಗಳನ್ನು ಸಿದ್ಧಪಡಿಸಿ ವರಮಹಾಲಕ್ಷ್ಮೀ ದೇವಿಗೆ ನೈವೇದ್ಯ ಮಾಡಿ, ಭಕ್ತಿ ಸಮರ್ಿಸಿದರು.
ಬಹುತೇಕ ಭಕ್ತರು ಹೊಸ ಹೊಸ ಬಟ್ಟೆ ಧರಿಸಿ ಲಕ್ಷ್ಮೀ ದೇವಿ ಎದುರು, ನಗ, ನಾಣ್ಯಗಳನ್ನು ಮುಂದಿಟ್ಟು, ಪೂಜಿಸಿದರೆ, ಕೆಲವರು ನೋಟ್ ಗಳ ಮಾಲೆ ಮಾಡಿ ಹಾರ ಹಾಕಿ ವಿಶೇಷ ಅಲಂಕಾರ ಮಾಡಿ ಪೂಜೆ ಸಲ್ಲಿಸಿದರು. ಹಬ್ಬ ಹಿನ್ನೆಲೆ ಮನೆಯನ್ನು ತಳಿರು ತೋರಣಗಳಿಂದ ಹಾಗೂ ರಂಗೋಲಿಯಿಂದ ಶೃಂಗರಿಸಿ,ಹಬ್ಬವನ್ನು ಅತ್ಯಂತ ಸಂಭ್ರಮದಿಂದ ಆಚರಿಸಿದರು. ಸಂಜೆ ವರ ಮಹಾಲಕ್ಷ್ಮೀ ದೇವಿಯ ಹಾಡುಗಳನ್ನು ಭಕ್ತಿಯಿಂದ ಪಠಿಸಿ ಆರತಿ ಮಾಡಿ ಹಬ್ಬವನ್ನು ಸಠ್ರಮಿಸಿದರು. ನಗರದ ಅಧಿದೇವತೆ ಕನಕ ದುರ್ಗಮ್ಮ ದೇವಿ ದೇಗುಲದಲ್ಲಿ ವರ ಮಹಾಲಕ್ಷ್ಮೀ ಹಬ್ಬದ ವಿಶೇಷ ಪೂಜೆಗಳು ನಡೆದವು. ಹಬ್ಬ ಹಿನ್ನೆಲೆ ಕನಕ ದುರ್ಗಮ್ಮ ದೇವಿಗೆ ಚಿನ್ನಾಭರಣಗಳನ್ನು ವಿಶೇಷ ಅಲಂಕಾರ ಮಾಡಲಾಗಿತ್ತು. ನಗರ ಸೇರಿದಂತೆ ನಾನಾ ಕಡೆಯಿಂದ ಆಗಮಿಸಿದ ನೂರಾರು ಭಕ್ತರು ದೇಗುಲಕ್ಕೆ ಆಗಮಿಸಿ ದೇವಿ ದರ್ಶನ ಪಡೆದು ಭಕ್ತಿ ಸಮರ್ಿಸಿದರು.