ವರಲಕ್ಷ್ಮೀ ಕ್ರೆಡಿಟ್ ಸಹಕಾರ ಸಂಘವು 5ಕೋಟಿ 6 ಲಕ್ಷ 53 ಸಾ.ನಿವ್ವಳ ಲಾಭ
ಲೋಕದರ್ಶನ ವರದಿ
ವರಲಕ್ಷ್ಮೀ ಕ್ರೆಡಿಟ್ ಸಹಕಾರ ಸಂಘವು 5ಕೋಟಿ 6 ಲಕ್ಷ 53 ಸಾ.ನಿವ್ವಳ ಲಾಭ
ಕಂಪ್ಲಿ 11 : ವರಲಕ್ಷ್ಮೀ ಕ್ರೆಡಿಟ್ ಸಹಕಾರ ಸಂಘವು ಕಳೆದ 23 ವರ್ಷಗಳಿಂದ ಸಂಘದ ಸದಸ್ಯರ ಸ್ವಾವಲಂಬಿ ಬದುಕಿಗೆ ಪ್ರೇರಣೆಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಸಂಘದ ಅಧ್ಯಕ್ಷ ಹೆಚ್.ಜಗದೀಶ ಹೇಳಿದರು. ಪಟ್ಟಣದ ವೀರಶೈವ ಸಂಘದ ಪೇಟೆ ಬಸವೇಶ್ವರ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ವರಲಕ್ಷ್ಮೀ ಕ್ರೆಡಿಟ್ ಸಹಕಾರ ಸಂಘದ 23ನೇ ವಾರ್ಷಿಕ ಮಹಾಜನ ಸಭೆ ಉದ್ಘಾಟಿಸಿ ಮಾತನಾಡಿ, ಕಂಪ್ಲಿ ಸೇರಿದಂತೆ ಬಳ್ಳಾರಿ, ವಿಜಯನಗರ, ಕೊಪ್ಪಳ, ರಾಯಚೂರು ಜಿಲ್ಲೆಗಳಲ್ಲಿ ಒಳಗೊಳ್ಳುವ ಜೊತೆಗೆ ತಾಲೂಕು ಕೇಂದ್ರಗಳಲ್ಲಿ ಶಾಖೆಗಳನ್ನು ಸ್ಥಾಪಿಸಲಾಗಿದೆ. ಸಂಘವು 13439 ಸದಸ್ಯರೊಂದಿಗೆ ಸುಮಾರು 9ಕೋಟಿ 68 ಲಕ್ಷ ಶೇರು ಬಂಡವಾಳ ಹೊಂದಿದೆ. ಸುಮಾರು 18 ಕೋಟಿ 48 ಲಕ್ಷ ಠೇವಣಿ ಸಂಗ್ರಹವಾಗಿದೆ. ವಾಹನ, ಬಂಗಾರ, ಜಾಮೀನು ಸೇರಿದಂತೆ ವಿವಿಧ ಸಾಲದಂತೆ ಸುಮಾರು 107 ಕೋಟಿ 5 ಲಕ್ಷ 99 ಸಾವಿರ ಸಾಲ ವಿತರಿಸಲಾಗಿದ್ದು, ಶೇ. 90ರಷ್ಟು ವಸೂಲಾತಿ ಸಾಧನೆ ಮಾಡಿದೆ. ಸಂಘವು 2025-26ನೇ ಸಾಲಿನಲ್ಲಿ ಸುಮಾರು 5 ಕೋಟಿ 6 ಲಕ್ಷ 53 ಸಾವಿರ 595 ರೂ.ಗಳ ನಿವ್ವಳ ಲಾಭ ಹೊಂದಿದೆ. ಪ್ರತಿಯೊಬ್ಬರ ಸಹಕಾರದೊಂದಿಗೆ ಸಂಘವು ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ ಎಂದರು.ನಂತರ ಮುಖ್ಯ ಕಾರ್ಯನಿರ್ವಾಹಕ ಎಂ.ಲೋಕೇಶ್ವರ ರೆಡ್ಡಿ ಇವರು ವಾರ್ಷಿಕ ವರದಿಯನ್ನು ಮಂಡಿಸಿದರು. ಈ ಸಂದರ್ಭದಲ್ಲಿ ಉಪಾಧ್ಯಕ್ಷ ಟಿ.ಕೊಟ್ರೇಶ, ನಿರ್ದೇಶಕರಾದ ಹೆಚ್.ಮಂಜುನಾಥ, ಡಿ.ವೀರ್ಪ, ವಾಲಿ ಕೊಟ್ರ್ಪ, ಕೆ.ಸಣ್ಣ ಗವಿಸಿದ್ದಪ್ಪ, ಚಂದ್ರಶೇಖರ ಬಣಗಾರ, ಜಿ.ವೀರನಗೌಡ, ಕವಿತಾಳ ಚನ್ನಪ್ಪ, ಡಾ.ವೀನಗೌಡ ಎಸ್.ಪಾಟೀಲ್, ಕೆ.ಉಷಾರಾಣಿ, ಪಕ್ಕೀರ್ಪ, ಎನ್.ಯಂಕಪ್ಪ, ಎನ್.ಅಯ್ಯಪ್ಪ, ಹಾಗೂ ಸಿಬ್ಬಂದಿಗಳಾದ ವಿಜಯ, ಆರ್ ಮಂಜು, ಡಿ.ಜಿ.ಪಾಟೀಲ್, ಎನ್ ವಿರೇಶ, ಬಿ ಶಿವಪ್ಪ ಹೆಚ್ ಬೀರ್ಪ, ವಿಜಯಲಕ್ಷೀ ಎನ್ ಅನುರೂಪ ಕೆ ಬುಡ್ಡಪ್ಪ ಸೇರಿದಂತೆ ಅನೇಕರಿದ್ದರು.
ಸೆ.003 ಸ್ಥಳೀಯ ವೀರಶೈವ ಸಂಘದ ಸಭಾಂಗಣದಲ್ಲಿ ನಡೆದ ಮಹಾಜನ ಸಭೆಯಲ್ಲಿ ಅಧ್ಯಕ್ಷ ಹೆಚ್.ಜಗದೀಶ್ ಮಾತನಾಡಿದರು.