ರೋಣ

ಸಂಭ್ರಮದಿಂದ ಜರುಗಿದ ವರ ವೀರಭದ್ರೇಶ್ವರ ಜಾತ್ರಾ ಮಹೋತ್ಸವ

ಸಂಭ್ರಮದಿಂದ ಜರುಗಿದ  ವರ ವೀರಭದ್ರೇಶ್ವರ ಜಾತ್ರಾ ಮಹೋತ್ಸವ

ರೋಣ 12: ತಾಲೂಕಿನ ಕುರುಡಗಿ ಗ್ರಾಮದಲ್ಲಿ ಗ್ರಾಮದ ಆರಾಧ್ಯ ದೇವರಾದ ಶ್ರೀ ವರ ವೀರಭದ್ರೇಶ್ವರ ಜಾತ್ರಾ ಮಹೋತ್ಸವ ನೂರಾರು ಭಕ್ತರ ಸಮ್ಮುಖದಲ್ಲಿ ಸಡಗರ ಸಂಭ್ರಮದಿಂದ ಜರುಗಿತು.   ಇದಕ್ಕೂ ಮುನ್ನ ಬೆಳಗ್ಗೆ ಜಾತ್ರಾ ಮಹೋತ್ಸವ ಪ್ರಯುಕ್ತ ಶ್ರೀ ವರ ವೀರಭದ್ರೇಶ್ವರ ಮೂರ್ತಿಗೆ ರುದ್ರಾಭಿಷೇಕ, ವಿಶೇಷ ಅಲಂಕಾರಿಕ ಪೂಜೆ, ಅಗ್ನಿ ಪ್ರವೇಶ, ಧಾರ್ಮಿಕ ಕಾರ್ಯದಲ್ಲಿ ನೂರಾರು ಭಕ್ತರು ಪಾಲ್ಗೊಳ್ಳುವ ಮೂಲಕ ಭಕ್ತಿ ಭಾವ ಮೆರೆದರು. 

ಬೆಳಿಗ್ಗೆ ದೇವಸ್ಥಾನದಿಂದ ಪ್ರಾರಂಭವಾದ ಶ್ರೀ ವೀರಭದ್ರೇಶ್ವರ ದೇವರ ಪಲ್ಲಕ್ಕಿ ಮೆರವಣೆಗೆಯು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ದೇವಸ್ಥಾನಕ್ಕೆ ಬಂದ ನಂತರ ಅಗ್ನಿಕುಂಡ ಪ್ರವೇಶಿಸುವ ಮುನ್ನ ಸಂಪ್ರದಾಯದಂತೆ ಪೂಜಾ ವಿಧಿವಿಧಾನಗಳನ್ನು ನೇರೆವೇರಿಸುವ ಮೂಲಕ ಅಗ್ನಿಕುಂಡ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.  

ಜಾತ್ರಾ ಮಹೋತ್ಸವದ ನಿಮಿತ್ತವಾಗಿ ಗ್ರಾಮ ಪಂಚಾಯತ ಅಧ್ಯಕ್ಷ ವೀರ​‍್ಪ ರಾಮಣ್ಣನವರ ಅಭಿಮಾನಿ ಬಳಗದ ವತಿಯಿಂದ ಕಟ್ಟಡ ಕಾರ್ಮಿಕರಿಗೆ ಉಚಿತ ಈ ಶ್ರಮ ಕಾರ್ಡ್‌ ವಿತರಣೆ,ಉಚಿತ ಆರೋಗ್ಯ ತಪಾಸಣೆ ಶಿಬಿರ, ವಿವಿಧ ಸ್ವ ಸಹಾಯ ಸಂಘಗಳಿಗೆ ಸಾಲ ಚೆಕ್ ವಿತರಣೆ, ಎಲ್‌.ಕೆ. ಜಿ. ಮಕ್ಕಳಿಗೆ ಶಾಲಾ ಉಚಿತ ಕಿಟ್ ವಿತರಣೆ ಕಾರ್ಯಕ್ರಮ, ರಂಗೋಲಿ ಸ್ಪರ್ಧೆ, ಹಾಗೂ ಶ್ರೀ ವರ ವಿರೇಶ್ವರ ಯುವಕ ಮಂಡಳದ ವತಿಯಿಂದ ರಾಜ್ಯ ಮಟ್ಟದ ಹೊನಲು ಬೆಳಕಿನ 65 ಕೆ.ಜಿ ಒಳಗಿನ ಮ್ಯಾಟ್ ಮೇಲಿನ ಕಬಡ್ಡಿ ಪಂದ್ಯಾವಳಿ ಜರುಗಿದವು.  

ಇದೇ ಸಂದರ್ಭದಲ್ಲಿ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಶಿಲ್ಪಾ ಕವಲೂರ, ಶೌಕತ್ ಅಲಿ ನಧಾಪ, ಯಲ್ಲಪ್ಪ ಕುರಿಯವರ, ಸಮಾಜ ಸೇವಕ ವಿರೇಶ ಕಲಹಾಳ, ಪ್ರಭು ಗುರಿಕಾರ, ಮೈಬುಸಾಬ ಮುಜಾವರ, ಸಂಗನಗೌಡ ದೊಡ್ಡ ರುದ್ರಗೌಡ್ರ, ಗುರುಬಸಯ್ಯ ಹಿರೇಮಠ, ಸಂಗಪ್ಪ ಕುರಿಯವರ, ಮಾರುದ್ರಯ್ಯ ಪೂಜಾರ, ರವಿ ರಾಮಣ್ಣವರ, ದೇವಪ್ಪ ಮಾದರ, ಮುತ್ತು ಪೂಜಾರ, ಡಾ.ನಿರ್ಮಲಾ ನಾಶಿಪುಡಿ, ಸಾವಿತ್ರಿ ಹಿರೆಹೋಳಿ, ದೀಪಾ ಎಸ್‌.ಎಮ್‌.ಇಂದ್ರವ್ವ ಅಬ್ಬಿಗೇರಿ, ಲಲಿತಾ ಚೋಳನಗೌಡ್ರ, ನೂರಜಾನ ನಧಾಪ  ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ಭಕ್ತರು ಹಾಗೂ ಗುರು-ಹಿರಿಯರು ಪಾಲ್ಗೊಂಡಿದ್ದರು. 


ಸುದ್ದಿ ಓದಿ