ಮಹಲಿಂಗಪುರ

ಜೀವನದ ಮೌಲ್ಯಗಳು ಭಗವಂತನ ಸಾಕ್ಷಾತ್ಕಾರದ ದಾರಿಗಳು : ಸಹಜಾನಂದ ಶ್ರೀ.

ಜೀವನದ ಮೌಲ್ಯಗಳು ಭಗವಂತನ ಸಾಕ್ಷಾತ್ಕಾರದ ದಾರಿಗಳು : ಸಹಜಾನಂದ ಶ್ರೀ.

ಮಹಾಲಿಂಪುರ 06 : ಸತ್ಯ, ಶಾಂತಿ, ಧರ್ಮ, ಅಹಿಂಸೆ, ಪ್ರೇಮದಂತಹ ಮೌಲ್ಯಗಳೇ ಭಗವಂತನ ಸಾಕ್ಷಾತ್ಕಾರದ ದಾರಿಗಳು ಎಂದು ಸಿದ್ಧಾರೂಢ ಬ್ರಹವಿದ್ಯಾಶ್ರಮದ ಸಹಜಾನಂದ ಮಹಾಸ್ವಾಮಿಗಳು ಹೇಳಿದರು. 

ಸ್ಥಳೀಯ ಶ್ರೀ ಬಸವಾನಂದ ಬ್ರಹ್ಮವಿದ್ಯಾಶ್ರಮ ಶಾಲಾ ಸಾಂಸ್ಕೃತಿಕ ಭವನದಲ್ಲಿ ಭಾನುವಾರ  ಶ್ರೀ ಸತ್ಯಸಾಯಿ ಸೇವಾ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ 31 ನೇ ವಾರ್ಷಿಕೋತ್ಸವದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಭಕ್ತ ಮತ್ತು ಭಗವಂತ ಹಾಗೂ ಗುಶಿಷ್ಯರ ಸಂಬಂಧವನ್ನು ದೃಷ್ಟಾಂತರಗಳ ಮೂಲಕ ವಿವರಿಸಿ ಸತ್ಯ ಸಾಯಿ ಸಮಿತಿಯ ಕಾರ್ಯವನ್ನು ಶ್ಲಾಘಿಸಿದರು. 

ಸತ್ಯಸಾಯಿ ಸೇವಾ ಸಂಸ್ಥೆಗಳ ಬಾಗಲಕೋಟ ಜಿಲ್ಲಾಧ್ಯಕ್ಷ ಬಸವರಾಜ ಹುಣಸಿಕಟ್ಟಿ ಮಾತನಾಡಿ, ಶ್ರದ್ಧೆ, ಸಬೂರಿ, ಸೇವೆಯ ಮಹತ್ವ ಕುರಿತು ವಿವರಿಸಿದರು. ಸುರೇಶ ಕಬ್ಬೂರ ಮಾತನಾಡಿ,, ಭಕ್ತಿ ಮಾರ್ಗವು ಭಗವಂತನನ್ನು ಸೇರುವ ಸುಲಭ ಮಾರ್ಗ ಎಂದರು. ಸಿ.ಎಂ.ಕಟಗಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ಸಾಯಿ ಸೇವಾ ಸಮಿತಿಯ ಸೇವಾ ಕಾರ್ಯಗಳ ಬಗ್ಗೆ ವಿವರಿಸಿದರು. 

ಮಹಾಲಿಂಗೇಶ್ವರ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಗಳು ಪ್ರಶಾಂತಿ ಧ್ವಜಾರೋಹಣ ನೆರವೇರಿಸಿದರು. ಬೆ 4.45 ರಿಂದ ಓಂಕಾರ, ಸುಪ್ರಭಾತ, ನಗರ ಸಂಕೀರ್ತನೆ, ಸತ್ಯನಾರಾಯಣ ಪೂಜೆ, ಸಾಯಿಭಜನೆ, ಉಪನ್ಯಾಸ ಕಾರ್ಯಕ್ರಮಗಳು ಜರುಗಿದವು. 

ಕಲ್ಲೊಳ್ಳಿ ಭಕ್ತರಿಂದ ವೇದಘೋಷ ಮಾಡಿದರು. ಬಾಲವಿಕಾಸ ಮಕ್ಕಳು ನೃತ್ಯ ಪ್ರಧರ್ಶಿಸಿ ಬಹುಮಾನ ಪಡೆದರು. ಮಹಾಮಂಗಲಾರತಿ, ವಿಭೂತಿ ಪ್ರಸಾದ ವಿತರಣೆ ಮಹಾಪ್ರಸಾದದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು. 

ಸಂಚಾಲಕರಾದ ನಾರಾಯಣ ರಾವಳ, ರವಿರಾಜ ಘಟ್ನಟ್ಟಿ, ಕಣಶೆಟ್ಟಿ, ಕೋರಿ, ಮಹಾಲಿಂಗ, ಕುಮಾರ ಮನವಾಡೆ, ರಾಜುಗೌಡ ಪಾಟೀಲ, ಶಿವಾನಂದ ಗೋಕಾವಿ, ಮಹಾದೇವ ತಿಪಶೆಟ್ಟಿ,  ಇತರರಿದ್ದರು, 

ಸುಪ್ತೀತಾ ವಜ್ರಮಟ್ಟಿ ಪ್ರಾರ್ಥಿಸಿ, ಶಿಕ್ಷಕ ಎಸ್‌.ಐ.ಬಡಿಗೇರ ನಿರೂಸಿದರು. 


ಸುದ್ದಿ ಓದಿ