ರೋಣ

ವಾಲ್ಮೀಕಿ ನಾಯಕ ಸಂಘ ಸಭೆ

ವಾಲ್ಮೀಕಿ ನಾಯಕ ಸಂಘ ಸಭೆ

ರೋಣ 25: ರೋಣದಲ್ಲಿ ಶರಣ ಬಸವೇಶ್ವರ ಪ್ರೌಢಶಾಲೆಯಲ್ಲಿ  ಮಹರ್ಷಿ ವಾಲ್ಮೀಕಿ ನಾಯಕ ಸಂಘ ರೋಣ ಇವರ ಸಂಯುಕ್ತ ಆಶ್ರಯದಲ್ಲಿ ಆಡಳಿತ ಮಂಡಳಿಯ ಕಾರ್ಯಕಾರಿ ಸಮಿತಿ ಸಭೆ ಜರುಗಿತು. 

ದಿ. ಫೆಬ್ರುವರಿಯ 8, 9 ರಂದು ನಡೆಯಲಿರುವ  ರಾಜನಹಳ್ಳಿಯ ಪ್ರಸನ್ನಾನಂದ ಮಹಾಸ್ವಾಮಿಗಳ ಜಾತ್ರೆಯ ದೇಣಿಗೆ ಸಂಗ್ರಹದ ಪುಸ್ತಕಗಳನ್ನು 31ನೇ ತಾರೀನ ಒಳಗಾಗಿ ತಲುಪಿಸಬೇಕೆಂದು ಸಭೆಯಲ್ಲಿ ಚರ್ಚಿಸಲಾಯಿತು. 

ಬಸವಂತಪ್ಪ ಎಚ್. ತಳವಾರ ಮಾತನಾಡಿ  ರೋಣ ತಾಲೂಕಿನಲ್ಲಿ ಗ್ರಾಮೀಣ ಪ್ರದೇಶದಲ್ಲಿ ವಾಲ್ಮೀಕಿ ಭವನಗಳನ್ನು ಹೆಚ್ಚಿನ ಪ್ರಮಾಣದಲ್ಲಿ ನಿರ್ಮಿಸಿಕೊಡಲಾಗುವುದೆಂದು ಭರವಸೆ ನೀಡಿದರು. 

ಬಸವರಾಜ ತಳವಾರ, ಸಂತೋಷ ಕಡಿವಾಲರ, ಕುಮಾರ ಲ. ಗೌಡಣ್ಣವರ, ಎಸ್.ಬಿ.ಪೂಜಾರ, ಶಿವಕುಮಾರ ತಳವಾರ, ವಾಲ್ಮೀಕಿ ಸಮಾಜದ ಸರ್ವ ಸದಸ್ಯರು ಹಾಗೂ ವಾಲ್ಮೀಕಿ ಸಮಾಜದ ಗುರು-ಹಿರಿಯರು, ಯುವಕರು ಸಭೆಯಲ್ಲಿ ಇದ್ದರು. ಕೊನೆಯಲ್ಲಿ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.

ಸುದ್ದಿ ಓದಿ