ವಾಲ್ಮೀಕಿ ಅವರ ಸಂದೇಶಗಳು ಜಗತ್ತಿಗೆ ಆದರ್ಶ: ಹನುಮಂತಪ್ಪ
ಬಳ್ಳಾರಿ 28: ಮಹರ್ಷಿ ವಾಲ್ಮೀಕಿ ಅವರು ರಾಮಾಯಣದಲ್ಲಿ ನೀಡಿರುವ ಸಂದೇಶಗಳು ಜಗತ್ತಿಗೆ ಆದರ್ಶ ಎಂದು 22 ನೇ ವಾರ್ಡಿನ ಪಾಲಿಕೆ ಸದಸ್ಯ ಹನುಮಂತಪ್ಪ ಅವರು ತಿಳಿಸಿದರು.
ಗಾಂಧಿನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಹರ್ಷಿ ರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.
ಒಬ್ಬ ಗುರು ಒಂದು ಸಮುದಾಯಕ್ಕೆ ಇದ್ದರೆ ಆ ಸಮುದಾಯವನ್ನು ಅಭಿವೃದ್ಧಿ ಪಡಿಸಲು ಮತ್ತು ಉತ್ತಮ ಮಾರ್ಗದರ್ಶನ ನೀಡಲು ಒಂದು ವೇದಿಕೆ ಸಿಗುತ್ತದೆ. ಹಕ್ಕುಗಳು, ಗುರಿಗಳು ಹಾಗೂ ಜವಾಬ್ದಾರಿಗಳನ್ನು ತಿಳಿಸಲು ಸಹಾಯವಾಗುತ್ತದೆ ಎಂದರು.
ಮಾಜಿ ಸಚಿವ ಬಿ ಶ್ರೀರಾಮುಲು ನಗರ ಶಾಸಕರಾದ ಭರತ್ ರೆಡ್ಡಿ ಅವರು ಭಾಗವಹಿಸಿ ಮಹರ್ಷಿಗಳ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ನಾಡಿನ ಜನತೆಗೆ ಮಹರ್ಷಿ ವಾಲ್ಮೀಕಿ ಜಯಂತಿಯ ಶುಭಾಶಯಗಳು ಕೋರಿದರು.
ಜಿ ರುದ್ರಪ್ಪ, ಬಸವರಾಜ್, ಹುಲುಗಪ್ಪ ಮಹಾನಂದಿ ಕೊಟ್ಟಂ, ರಾಮಲಿಂಗಪ್ಪ, ವೆಂಕಟೇಶ, ಆನಂದ,ಗೋಪಾಲ,ರಾಮಯ್ಯ, ರಾಮಂಜನಿ, ದುರ್ಗಣ್ಣ, ವಾಲ್ಮೀಕಿ ಸಮುದಾಯದ ಮುಖಂಡರು ಸದಸ್ಯರು ಇತರರು ಭಾಗವಹಿಸಿದ್ದರು.