ಯರಗಟ್ಟಿ

ಐದು ವರ್ಷದೊಳಗಿನ ಮಕ್ಕಳಿಗೆ ಕಡ್ಡಾಯವಾಗಿ ಲಸಿಕೆ ಹಾಕಿಸಬೇಕು: ಡಾ. ಸಚಿನ್ ಉಪ್ಪಿನ್

ಐದು ವರ್ಷದೊಳಗಿನ ಮಕ್ಕಳಿಗೆ ಕಡ್ಡಾಯವಾಗಿ ಲಸಿಕೆ ಹಾಕಿಸಬೇಕು: ಡಾ. ಸಚಿನ್ ಉಪ್ಪಿನ್

ಲೋಕದರ್ಶನ ವರದಿ 

ಯರಗಟ್ಟಿ 25 : ಪಲ್ಸ್‌ ಪೋಲಿಯೋ ಅಭಿಯಾನವನ್ನು ಸಂಘ ಸಂಸ್ಥೆಗಳು ಯಶಸ್ವಿಗೊಳಿಸಬೇಕು ಎಂದು ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಸಚೀನ ಉಪ್ಪಿನ ಹೇಳಿದರು. ಪಟ್ಟಣದ ತಹಶೀಲ್ದಾರ ಕಚೇರಿಯಲ್ಲಿ ಏರಿ​‍್ಡಸಿದ್ದ ಪಲ್ಸ್‌ ಪೋಲಿಯೋ ಅಭಿಯಾನ ನಿರ್ಮೂಲನೆ ಕುರಿತ  ಸಭೆಯಲ್ಲಿ ಮಾತನಾಡಿದರು. 

ಪಲ್ಸ್‌ ಪೋಲಿಯೋ ಕಾರ್ಯಕ್ರಮವನ್ನು ಜೂ.28 ರಂದು ವಿವಿಧ ಕಡೆಗಳಲ್ಲಿ ನಡೆಸಲಿದ್ದು 28, 30 ರಂದು ಮನೆ ಭೇಟಿ, ಸಂಚಾರಿ ವಾಹನದ ಮೂಲಕ ಅಭಿಯಾನ ನಡೆಯಲಿದ್ದು ಇದಕ್ಕೆ 5 ವರ್ಷದೊಳಗಿನ ಎಲ್ಲ ಮಕ್ಕಳನ್ನು ಕರೆತಂದು ಲಸಿಕೆ ಹಾಕಿಸಿಕೊಂಡು ಪಾಲಕರು ಸಹಕರಿಸಬೇಕಿದೆ ಎಂದರು.  

ನಂತರ ತಹಶೀಲ್ದಾರ ಎಮ್‌. ವ್ಹಿ. ಗುಂಡಪ್ಪಗೋಳ ಮಾತನಾಡಿ ಪೋಲಿಯೋ ಅಭಿಯಾನ ಯಶಸ್ವಿಗೊಳ್ಳಲು ಸರ್ಕಾರದೊಂದಿಗೆ ಸಂಘ ಸಂಸ್ಥೆಗಳ ಸಹಕಾರವೂ ಅಗತ್ಯವಾಗಿದೆ. ಸರ್ಕಾರಿ ಇಲಾಖೆ ಹಾಗೂ ಖಾಸಗಿ ವ್ಯಕ್ತಿಗಳ ವಾಹನಗಳನ್ನು ಅಭಿಯಾನದಂದು ಇಲಾಖೆಗೆ ನೀಡಿ ಸಹಕಾರ ನೀಡಬೇಕು ಎಂದರು.  

ಪ ಪಂ. ಮುಖ್ಯಾಧಿಕಾರಿ ಮಹೇಶ ಭಜಂತ್ರಿ, ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಶ್ರೀಮತಿ ಎಸ್‌. ವ್ಹಿ. ಬೆಂಡಿಗೇರಿ, ಪ ಪಂ. ಕಿರಿಯ ಆರೋಗ್ಯ ನೀರೀಕ್ಷಣಾಧಿಕಾರಿ ನಾಗರಾಜ ಚವಡಪ್ಪನ್ನವರ, ರಾಜ್ಯ ಸಂಪ್ಮೂಲ ವ್ಯಕ್ತಿಗಳಾದ ಎಂ. ಎಂ. ಚೀಲದ, ರಮೇಶ ಮುರಂಕರ, ಗ್ರಾಮ ಆಡಳಿತಾಧಿಕಾರಿಗಳಾದ ಎಲ್‌. ಬಿ. ದಳವಾಯಿ. ಎ. ಬಿ. ಹುಣಶ್ಯಾಳ, ಹೆಸ್ಕಾಂ ಎಸ್‌.ಓ ಮಹಾಂತೇಶ ಯರಗಟ್ಟಿ, ನಸಿಂಗ್ ಆಫೀಸರ್ ಸುನೀಲ ಕಾಶನ್ನವರ ಸೇರಿದಂತೆ ಮತ್ತಿತರರಿದ್ದರು. 


ಸುದ್ದಿ ಓದಿ