ವಿಕಶಿತ ಭಾರತ ಪರಿಪೂರ್ಣತೆಗೆ ವಿಬಿಜಿ, ರಾಮ್ ಜಿ, ತುಂಬಾ ಸಹಕಾರಿಯಾಗಿದೆ- ಪಿಡಿಒ ಧರ್ಮಣ್ಣ ಎಚ್
ರಾಣೆಬೆನ್ನೂರು 21 : ವಿಕಸಿತ ಭಾರತ ಪರಿಪೂರ್ಣತೆಗೆ ಗ್ಯಾರಂಟಿ ಫಾರ್ ರೋಜ್ಗಾರ್ ಮತ್ತು ಜೀವನೋಪಾಯ ಮಿಷನ್ ಯೋಜನೆ ಅತ್ಯಂತ ಸಹಕಾರಿಯಾಗಿದೆ ಕೂಲಿ ಕಾರ್ಮಿಕರು ಇದನ್ನು ಸಮರ್ಥವಾಗಿ ಬಳಸಿಕೊಳ್ಳಲು ಮುಂದಾಗಬೇಕು ಎಂದು ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಎಚ್. ಧರ್ಮಣ್ಣ ಕರೆ ನೀಡಿದರು. ಅವರು ತಾಲೂಕಿನ ಲಿಂಗದಹಳ್ಳಿ ಗ್ರಾಮ ಪಂಚಾಯಿತಿಯಿಂದ ಆಯೋಜಿಸಲಾಗಿದ್ದ, ವಿಕಶಿತ ಭಾರತ ಗ್ಯಾರೆಂಟಿ ಫಾರ್ ರೋಜ್ಗಾರ್ ಮತ್ತು ಜೀವನೋಪಾಯ ಅಭಿಯಾನ ಜನ ಜಾಗೃತಿ ಜಾಥಾ
ಉದ್ಘಾಟಿಸಿ ಮಾತನಾಡಿದರು. ತಾಲೂಕು ಸೇರಿದಂತೆ ಜಿಲ್ಲೆಯ ಬಹುತೇಕ ಭಾಗಗಳಲ್ಲಿ ಭೂಮಿಗೆ ಬೀಳದ ಮಳೆಯಿಂದಾಗಿ ರೈತ ಸಮುದಾಯ ಚಿಂತಾ ಕ್ರಾಂತನಾಗಿದ್ದಾನೆ. ಸರ್ಕಾರ ತನ್ನ ಈಗ ಗ್ಯಾರೆಂಟಿ ಯೋಜನೆಯಲ್ಲಿ ಕೂಲಿ ಕಾರ್ಮಿಕರಿಗೆ ಸಮರ್ಥವಾಗಿ ಕೆಲಸ ನೀಡಲಿದೆ. ಕಾರ್ಮಿಕರು ಇದರ ಪ್ರಯೋಜನ ಪಡೆಯಲು ಮುಂದಾಗಬೇಕು ಎಂದರು. ಗ್ರಾಮಾಂತರ ಪ್ರದೇಶಗಳಿಂದ ಯಾರು ಸಹ ಕೆಲಸವಿಲ್ಲದೆ ಕೆಲಸಕ್ಕಾಗಿ ಗುಳೆ ಹೋಗಬಾರದೆನ್ನುವ ಚಿಂತನೆ ನಡೆಸಿ, ಈಗಾಗಲೇ ಯೋಜನೆಯ ಅಡಿಯಲ್ಲಿ ಕ್ರಿಯಾಯೋಜನೆ
ರೂಪಿಸಿದೆ. ಅನುಮೋದನೆ ಹಂತದಲ್ಲಿ ಇದೆ ಶೀಘ್ರದಲ್ಲಿಯೇ ದುಡಿಯುವ ಕೈಗಳಿಗೆ ಪಂಚಾಯಿತಿ ಮೂಲಕ ಕೂಲಿ ಕೆಲಸವು ದೊರೆಯಲಿದೆ ಎಂದರು. ತಾಲೂಕ ಐಈಸಿ ಸಂಯೋಜಕ, ದಿಂಗಾಲೇಶ್ ಅಂಗೂರ ಅವರು ಮಾತನಾಡಿ, ವಿಬಿಜಿ ರಾಮ್ ಜಿ ಯೋಜನೆ ಅಡಿಯಲ್ಲಿ ದಿನನಿತ್ಯವೂ ಮೊದಲಿದ್ದ 370, ರೂ ಗಳ ಬದಲಾಗಿ, 382 ರೂಪಾಯಿಗಳು ದೊರೆಯಲಿದ್ದು, ಪ್ರಸ್ತುತ ಮಣ್ಣು ಮತ್ತು ನೀರಿನ ಸಂರಕ್ಷಣಾ ಕಾಮಗಾರಿಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಈ ಯೋಜನೆಯಲ್ಲಿ 266 ರಿಂದ 318 ದಿವಸಗಳ ಕಾಮಗಾರಿ ದೊರೆಯಲಿದೆ
ಎಂದರು. ಕಾರ್ಯಕ್ರಮದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಪಂಚಾಯತ ಸಿಬ್ಬಂದಿ, ಕೂಲಿ ಕಾರ್ಮಿಕರು ಗ್ರಾಮದ ಮುಖಂಡರು ಮತ್ತಿತರರು ಉಪಸ್ಥಿತರಿದ್ದರು. ಅಭಿಯಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಎಲ್ಲರೂ ಜನ ಜಾಗೃತಿ ಜಾತ ನಡೆಸಿ, ರೋಜ್ಗಾರ್ ಯೋಜನೆ ಕುರಿತು ಮಾಹಿತಿ ನೀಡಿ ಮಾರ್ಗದರ್ಶನ ಮಾಡಿದರು. ಜಾಥಾ ಮುಂಚೂಣಿಯಲ್ಲಿ ಕಾರ್ಯದರ್ಶಿ ಮಂಜುನಾಥ್, ಲೆಕ್ಕ ಸಹಾಯಕ ಪ್ರಕಾಶ್ ಎಸ್ ಬಿ, ಚಂದ್ರಶೇಖರ ಮಠದ, ಎನ್. ಆರ್. ಎಲ್. ಕಾರ್ಯಕರ್ತರು ಪಾಲ್ಗೊಂಡಿದ್ದರು. ಈ ಯೋಜನೆ ಜುಲೈ ಒಂದರಿಂದಲೇ ಜಾರಿಗೆ ಬಂದಿದ್ದು ಕಾರ್ಮಿಕರು ಸಂಬಂಧಿಸಿದವರ ಜೊತೆಗೆ ಸಂಪರ್ಕಿಸಿ ಯೋಜನೆ ಪ್ರಯೋಜನ ಪಡೆಯಬೇಕು ಎಂದು ಕರ ಪತ್ರದಲ್ಲಿ ತಿಳಿಸುವ ಮೂಲಕ ಮೆರವಣಿಗೆ ಜಾತಕದಲ್ಲಿ ಧ್ವನಿವರ್ಧಕದ ಮೂಲಕ ಕರೆ ನೀಡಿದರು.