ಬಳ್ಳಾರಿ

ಟ್ರಾನ್ಸ್‌ ಜೆಂಡರ್ಸ್‌ ಸಮುದಾಯಕ್ಕೆ ವಸತಿ ಕಲ್ಪಿಸುವಂತೆ ಒತ್ತಾಯ: ಚಾಂದಿನಿ

ಟ್ರಾನ್ಸ್‌ ಜೆಂಡರ್ಸ್‌ ಸಮುದಾಯಕ್ಕೆ ವಸತಿ ಕಲ್ಪಿಸುವಂತೆ ಒತ್ತಾಯ: ಚಾಂದಿನಿ

ಬಳ್ಳಾರಿ 31: ನಗರದಲ್ಲಿರುವ ಲಿಂಗತ್ವ ಅಲ್ಪ ಸಂಖ್ಯಾತರು - ಟ್ರಾನ್ಸ್‌ ಜೆಂಡರ್ಸ್‌ ಸಮುದಾಯಕ್ಕೆ ವಸತಿಯನ್ನು ಕಲ್ಪಸಿಕೊಡುವಂತೆ ನಗರದಲ್ಲಿ ಬೃಹತ್ ರ್ಯಾಲಿ ಮೂಲಕ ಬುಧುವಾರ ಜಿಲ್ಲಾಧಿಕಾರಿಗಳಿಗೆ ಪ್ರಗತಿ ಸದಾ ಸೇವಾ ಸಂಘದಿಂದ ಮನವಿ ಪತ್ರವನ್ನು ಸಲ್ಲಿಸಿದರು. 

ಈ ವೇಳೆ ಪ್ರಗತಿ ಸದಾ ಸೇವಾ ಸಂಘದ ಅಧ್ಯಕ್ಷರಾದ ಪರ್ವೀನ್ ಬಾನು ಮಾತನಾಡಿ, ಲಿಂಗತ್ವ ಹಾಗೂ ಲೈಂಗಿಕ ಅಲ್ಪ ಸಂಖ್ಯಾತ ಸಮುದಾಯದವರು ಆರ್ಥಿಕ ಸಂಕಷ್ಟದಲ್ಲಿದ್ದು ವಾಸಿಸಲು ಮನೆ ಇಲ್ಲದೆ ಹೀನಾಯ ಸ್ಥಿತಿಯಲ್ಲಿ ಬದುಕು ನಡೆಸುತ್ತಿದ್ದೇವೆ, ಬಾಡಿಗೆ ಮನೆ ಸಿಗುತ್ತಿಲ್ಲ, ಒಂದು ವೇಳ ಬಾಡಿಗೆಯ ಮನೆ ಸಿಕ್ಕರೆ ಊರ ಹೊರಗೆ ದೊರೆಯುತ್ತದೆ. ಬಾಡಿಗೆ ಕೂಡ ಜಾಸ್ತಿ ಇರುತ್ತದೆ. ಕೆಲಸವಿಲ್ಲದೆ ಹಾಗೂ ಬಿಕ್ಷಾಟಣೆ ಮಾಡಿ ಬಂದ ಹಣದಲ್ಲಿ ಬಾಡಿಗೆ ಕಟ್ಟಲು ತೀರ ಕಷ್ಟವಾಗುತ್ತಿದೆ. ಲಿಂಗತ್ವ ಹಾಗೂ ಲೈಂಗಿಕ ಅಲ್ಪ ಸಂಖ್ಯಾತ ಸಮುದಾಯದವರು ವಾಸಿಸಲು ಮನೆ ಇಲ್ಲದ ಕಾರಣ ಪ್ರಗತಿ ಸದಾ ಸೇವಾ ಸಂಘ ನಮ್ಮ ಟ್ರಾನ್ಸ್‌ ಜೆಂಡರ್ಸ್‌ ಸಮುದಾಯದವರಿಗೆ ವಿಷೇಶ ಯೋಜನೆಯಡಿಯಲ್ಲಿ ವಸತಿ ಕಲ್ಪಿಸಿಕೊಡಬೇಕೆಂದು ಅನೇಕ ಬಾರಿ ನಾವು ಸಂಬಂದಪಟ್ಟ ಅಧಿಕಾರಿಗಳಿಗೆ ಅರ್ಜಿಯನ್ನು ಸಲ್ಲಿಸಿದ್ದು, ಆ ಅಧಿಕಾರಿಗಳ ಕಡೆಯಿಂದ ಯಾವುದೇ ರೀತಿಯಾಗಿ ಸರಿಯಾದ ಸ್ಪಂದನೆ ಸಿಕ್ಕಿಲ್ಲ.ಸಿಗಲಿಲ್ಲ ಹಾಗಾಗಿ ಬಳ್ಳಾರಿ ಜಿಲ್ಲೆಯಲ್ಲಿ  ಸಮುದಾಯದವರು ಸೇರಿ ವಸತಿಗೊಸ್ಕರ ನಮ್ಮ ಶಕ್ತಿ ಪ್ರದರ್ಶಿಸಲು ಘೋಷಣೆಗಳು ಕೂಗುವ ಮುಖಾಂತರ ನಮ್ಮ ಕ್ಲಿನಿಕ್ ಹಳೇ ರಾಯದುರ್ಗ ಬಸ್ಟ್ಯಾಂಡ್, ಬೆಂಗಳೂರು ಮುಖ್ಯ ರಸ್ತೆಯ ಮಾರ್ಗವಾಗಿ ಬ್ರೂಸ್‌ಪೇಟೆ ಪೋಲಿಸ್ ಠಾಣೆ ಮಾರ್ಗದಿಂದ ಮೋತಿ ಸರ್ಕಲ್, ರಾಯಲ್ ಸರ್ಕಲ್ ಹಾಗೂ ಜಿಲ್ಲಾಧಿಕಾರಿಗಳ ಕಛೇರಿಯವರೆಗೆ ರ್ಯಾಲಿ ಮಾಡುವ ಮೂಲಕ ವಸತಿಗಾಗಿ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಿದ್ದೇವೆ. ಆದಷ್ಟು ಬೇಗ ಅಧಿಕಾರಿಗಳು ಸರ್ಕಾರ ಎಚ್ಚೆತ್ತುಕೊಂಡು ನಮಗೆ ವಾಸಿಸಲು ಮನೆಗಳನ್ನು ಸಮುದಾಯ ಭವನ ನಿರ್ಮಿಸುವಂತೆ ಮನವಿ ಮಾಡುತಿದ್ದೇವೆ. ಈ ನಮ್ಮ ಮೂಲಭೂತ ಸೌಕರ್ಯಗಳು ಕಲ್ಪಿಸದೆ ಹೋದ ಸಂದರ್ಭದಲ್ಲಿ ಮುಂದಿನ ದಿನಗಳಲ್ಲಿ ರಾಜ್ಯಮಟ್ಟದಲ್ಲಿ  ಉಗ್ರವಾದ ಹೋರಾಟವನ್ನು ಹಮ್ಮಿಕೊಳ್ಳುತ್ತೇವೆ ಎಂದು ತಿಳಿಸಿದರು. 

ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಗಂಗಣ್ಣ, ಕಾರ್ಯದರ್ಶಿ  ಚಾಂದಿನಿ, ಅಂಬಿಕಾ, ರಾಣಿ, ಸಂಧ್ಯಾ, ಶೋಭಾ, ಸೇರಿದಂತೆ ಹಲವಾರು ಜನ ಸಂಘದ ವಿವಿಧ ಪದಾಧಿಕಾರಿಗಳು ಸದಸ್ಯರು ಭಾಗವಹಿಸಿದ್ದರು. 


ಸುದ್ದಿ ಓದಿ