ಸರ್ಕಾರಿ ನೌಕರರ ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರಕ್ಕೆ ಒತ್ತಾಯ
ವಿಜಯನಗರ,12 : 11.07.2024 ರಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ವಿಜಯನಗರ ಜಿಲ್ಲಾ ಶಾಖೆವತಿಯಿಂದ ವಿಜಯನಗರ ಕ್ಷೇತ್ರದ ಜನಪ್ರಿಯಾ ಶಾಸಕರಾಗಿರುವ ಮಾನ್ಯ ಶ್ರೀ ಹೆಚ್.ಆರ್.ಗವಿಯಪ್ಪನವರಿಗೆ ಮತ್ತು ಶ್ರೀ ಎಂ.ಎಸ್.ದಿವಾಕರ ಭಾ.ಆ.ಸೇ. ಮಾನ್ಯ ಜಿಲ್ಲಾಧಿಕಾರಿಗಳು ವಿಜಯನಗರ ಜಿಲ್ಲೆ ಇವರಿಗೆ ಸರ್ಕಾರಿ ನೌಕರರ ಪ್ರಮುಖ 3 ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸರ್ಕಾರಕ್ಕೆ ಶಿಫಾರಸ್ಸು ಮಾಡಲು ಮನವಿ ಪತ್ರವನ್ನು ನೀಡಲಾಯಿತು.
ಸರ್ಕಾರಕ್ಕೆ ಸಲ್ಲಿಕೆಯಾಗಿರುವ 7ನೇ ವೇತನದ ಆಯೋಗ ವರದಿಯನ್ನು ಯಥಾವತ್ತಾಗಿ ಅನುಷ್ಠಾನಗೊಳಿಸುವ ಬಗ್ಗೆ. ನೌಕರರಿಗೆ ಮಾಕರವಾದ ಎನ್.ಪಿ.ಎಸ್. ಯೋಜನೆಯನ್ನು ರದ್ದುಪಡಿಸಿ ಹಳೆ ಪಿಂಚಣಿ ಯೋಜನೆಯನ್ನು ಮರುಸ್ಥಾಪಿಸುವ ಬಗ್ಗೆ. ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯನ್ನು ಜಾರಿಗೊಳಿಸುವ ಬಗ್ಗೆ.
ಸರ್ಕಾರಿ ನೌಕರರ ನ್ಯಾಯಯುತ 03 ಬೇಡಿಕೆಗಳನ್ನು ಈಡೇರಿಸದಿದ್ದರೆ ದಿನಾಂಕ : 07.07.2024 ರಂದು ನಡೆದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಕಾರ್ಯಕಾರಣಿ ತೀರ್ಮಾನದಂತೆ ವಿಜಯನಗರ ಜಿಲ್ಲಾ ನೌಕರರು ಅನಿವಾರ್ಯವಾಗಿ ಬೇಡಿಕೆ ಈಡೇರುವವರೆಗೆ ಅನಿರ್ಧಿಷ್ಠಿತ ಅವಧಿಗೆ ತಮ್ಮ ಸರ್ಕಾರಿ ಕರ್ತವ್ಯಕ್ಕೆ ಗೈರು ಹಾಜರಾಗುತ್ತೇವೆಂದು ಮಾನ್ಯ ಶಾಸಕರು ಹಾಗೂ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರಾದ ಜಿ.ಮಲ್ಲಿಕಾರ್ಜುನ ಗೌಡ್ರು, ಜಿಲ್ಲಾ ಕಾರ್ಯದರ್ಶಿ ಶ್ರೀ ಕಡ್ಲಿ ವೀರಭದ್ರೇಶ, ಜಿಲ್ಲಾ ಗೌರವ ಅಧ್ಯಕ್ಷರಾದ ಹೆಚ್.ಜೀವಣ್ಣ, ರಾಜ್ಯ ಪರಿಷತ್ ಸದಸ್ಯರಾದ ಎಸ್.ಬಸವರಾಜ್, ಜಿಲ್ಲಾ ಖಜಾಂಜಿ ರಾಘವೇಂದ್ರ ಹೆಗ್ಡಿಯಾಳ್, ಜಿಲ್ಲಾ ಉಪಾಧ್ಯಕ್ಷರುಗಳಾದ ಪ್ರಶಾಂತ್ ಜೋಷಿ, ಕಾಳಪ್ಪ ಗೌಡ್ರು, ಶ್ರೀಮತಿ ಲತಾ, ನಾಗಭೂಷಣ ಶೆಟ್ರು, ಹನುಮಂತಪ್ಪ, ಪಂಪಣ್ಣ, ಪರಶುರಾಮ್, ಕೃಷ್ಣದುಂದಪ್ಪನವರು, ಶಿಕ್ಷಕರ ಸಂಘದ ಅಧ್ಯಕ್ಷರಾದ ಕೆ.ಬಸವರಾಜ್, ಕಾರ್ಯದರ್ಶಿ ಮಲ್ಲಯ್ಯ ಮೋಟಗಿ, ದೈಹಿಕ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷರಾದ ಝಾಕೀರ್ ಹುಸೇನ್, ತಾಲೂಕು ಅಧ್ಯಕ್ಷರಾದ ನಿಸಾರ್, ಶಿವಕುಮಾರ್, ಎನ್.ಪಿ.ಎಸ್. ನೌಕರರ ಸಂಘದ ಅಧ್ಯಕ್ಷರಾದ ಹೆಚ್.ಎಂ.ಗುರುಬಸವರಾಜ್, ಪ್ರಕಾಶ್ ಕುಲಕರಣಿ, ಪ್ರೌಢ ಶಾಲಾ ಸಹ ಶಿಕ್ಷಕರ ಸಂಘದ ಶೇಖರ್ ಗಿರಡ್ಡಿ, ಡಿ.ಗ್ರೂಪ್ ನೌಕರರ ಸಂಘದ ಜಿಲ್ಲಾಧ್ಯಕ್ಷ ಅಜಯ್ ಮದಕರಿ, ಸೇರಿದಂತೆ ನೂರಾರು ಸರ್ಕಾರಿ ನೌಕರರು ಹಾಜರಿದ್ದರು.
ಮನವಿ ಸ್ವೀಕರಿಸಿ ಮಾತನಾಡಿದ ಮಾನ್ಯ ಶಾಸಕರಾದ ಹೆಚ್.ಆರ್.ಗವಿಯಪ್ಪರವರು, ಸರ್ಕಾರಿ ನೌಕರರ ಬೇಡಿಕೆಗಳು ನ್ಯಾಯಯುತವಾಗಿದ್ದು ಬೇಡಿಕೆಗಳನ್ನು ಈಡೇರಿಸುವಂತೆ ಹಣಕಾಸು ಸಚಿವರಾಗಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯರವರ ಗಮನಕ್ಕೆ ತರುತ್ತೇನೆಂದು ನೆರದಿದ್ದ ನೌಕರರಿಗೆ ಭರವಸೆ ನೀಡಿದರು.
ಹಾಗೂ ಮನವಿ ಸ್ವೀಕರಿಸಿದ ಮಾನ್ಯ ಜಿಲ್ಲಾಧಿಕಾರಿಗಳು ಮಾತನಾಡಿ ಸರ್ಕಾರಿ ನೌಕರರ ಬೇಡಿಕೆಗಳನ್ನು ಸರ್ಕಾರಕ್ಕೆ ಕಳುಹಿಸಲಾಗುವುದು ಎಂದು ತಿಳಿಸಿದರು.