ಶಿಗ್ಗಾವ್

ಮಹಾರಾಜ ರಾಮಗಿರಿ ಸ್ವಾಮೀಜಿ ವಿರುದ್ದ ಕಠಿಣ ಕ್ರಮ ಜರುಗಿಸುವಂತೆ ಒತ್ತಾಯ

ಮಹಾರಾಜ ರಾಮಗಿರಿ ಸ್ವಾಮೀಜಿ ವಿರುದ್ದ ಕಠಿಣ ಕ್ರಮ ಜರುಗಿಸುವಂತೆ ಒತ್ತಾಯ

ಶಿಗ್ಗಾವಿ,03 : ಪ್ರವಾದಿ ಮೊಹಮ್ಮದ ಮತ್ತು ಇಸ್ಲಾಂ ಧರ್ಮದ ವಿರುದ್ದ ಅವಹೇಳನಾಕಾರಿ ಹೇಳಿಕೆ ನೀಡಿರುವ ಮಹಾರಾಷ್ಟ್ರ ಧಾರ್ಮಿಕ ಮುಖಂಡ ಮಹಾರಾಜ ರಾಮಗಿರಿ ವಿರುದ್ದ ಕಠಿಣ ಕ್ರಮ ಜರುಗಿಸುವಂತೆ ಒತ್ತಾಯಿಸಿ ಅಂಜುಮನ್ ಇಸ್ಲಾಂ ಸಮೀತಿ ಶಿಗ್ಗಾವಿವತಿಯಿಂದ ತಹಶಿಲ್ದಾರರ ಮೂಲಕ  ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು. 

ಮನವಿ ನೀಡಿ ಅಂಜುಮನ್ ಸಮಿತಿ ಉಪಾಧ್ಯಕ್ಷ  ಮಜೀದ ಮಾಳಗಿಮನಿ ಮಾತನಾಡಿ ಭಾರತ ದೇಶದಲ್ಲಿ ಅನೇಕ ಧರ್ಮ ಭಾಷೆ ಸಂಸ್ಕೃತಿ ಹೊಂದಿರುವ ಭಾರತ ದೇಶ  ಇದರಿಂದ ಭಾರತ ದೇಶ ಬೇರೆ ರಾಷ್ಟ್ರಗಳಿಗೆ ಒಂದು ಮಾದರಿಯಾಗಿದೆ. ಇಲ್ಲಿ ಎಲ್ಲಾ ಧರ್ಮ ಭಾಷೆ ಸಂಸ್ಕೃತಿ ಸೌಹಾರ್ದಯುತವಾಗಿ ಅನೇಕ ಶತಮಾನಗಳಿಂದ ಜೀವನ ನಡೆಸುತ್ತಿದ್ದಾರೆ. ಹಿಂತಾ ದೇಶದಲ್ಲಿ ಕೆಲವೊಂದು ಕೆಟ್ಟು ಹುಳಗಳನ್ನು ಕಾನೂನು ಸೂಕ್ತ ಕ್ರಮ ಕೈಗೊಂಡು ಬಂಧಿಸಬೇಕೆಂದು ಅಗ್ರಹಿಸಿದರು. 

ಹಾವೇರಿ ವಖ್ಪ್‌ ಸಮೀತಿ ಸದಸ್ಯ ಹಾಗೂ ಅಂಜುಮನ್ ಸಮಿತಿ ಖಜಾಂಚಿ ಮೊಹಮ್ಮದ ಹನೀಫಅಂಬೂರಮಾತನಾಡಿ ಭಾರತದ ಸಂವಿಧಾನ ಎಲ್ಲಾ ಧರ್ಮ ಭಾಷೆ ಸಂಸ್ಕೃತಿಗೇ ಗೌರವಯುತ ಸ್ಥಾನವನ್ನು ಕೊಟ್ಟಿದೆ ಅಲ್ಲದೇ ಇಸ್ಲಾಂ ಧರ್ಮದ ಗುರು ಮೊಹಮ್ಮದ್ ಪೈಗಂಬರ್ ಬಗ್ಗೆ ಅವಹೇಳನ ಮಾತು ನಾಡಿದ ರಾಮಗೇರಿ ಮಹಾರಾಜ ಸ್ವಾಮಿಯನ್ನು ತಕ್ಷಣ ಬಂಧಿಸಿ ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದರು. 

ಈ ಸಂದರ್ಭದಲ್ಲಿ ಅಂಜುಮನ ಸಂಸ್ಥೆ ಅಹ್ಮದಬಾಷಾ ಗುಲಾಮದ್ದೀನ, ಅಲ್ಲಾಭಕ್ಷ ಸೌದಾಗರ, ಅತ್ತಾವುಲ್ಲಾಖಾನ ಖಾಜೇಖಾನವರ, ಮಹಮ್ಮದ ಸಾಧಿಕ್ ಮಲ್ಲೂರ, ಅನೀಸ ಬೀರಂಖಾನವರ, ಮಕಸೂದ್ ಉಪ್ಪಿನ, ಅಬ್ದುಲ್ ಗೌಸ ಮಾಲ್ದಾರ, ಮುಸ್ತಾಕ ಮುಲ್ಲಾ ,ಕಯುಮ್ ಎಳವಟ್ಟಿ ,ಅಹಮದ್ ಪಾಟೀಲ ಸೇರಿದಂತೆ ವಿವಿಧ ಮುಸ್ಲೀಂಪರ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು. 


ಸುದ್ದಿ ಓದಿ