ಶಿಗ್ಗಾವ್

ಗುಜರಾತಿನಲ್ಲಿ ಬಿಜೆಪಿಗೆ ಅಭೂತಪೂರ್ವ ಗೆಲುವು: ವಿಜಯೋತ್ಸವ

ಗುಜರಾತಿನಲ್ಲಿ ಬಿಜೆಪಿಗೆ ಅಭೂತಪೂರ್ವ ಗೆಲುವು: ವಿಜಯೋತ್ಸವ

ಶಿಗ್ಗಾವಿ : ಗುಜರಾತಿನಲ್ಲಿ ಭಾರತೀಯ ಜನತಾ ಪಾರ್ಟಿ ಅಭೂತಪೂರ್ವ ಗೆಲುವನ್ನು ಗಳಿಸಿದ್ದಕ್ಕಾಗಿ ಪಟ್ಟಣದ  ಕಿತ್ತೂರ ರಾಣಿ ಚೆನ್ನಮ್ಮ ವೃತ್ತದಲ್ಲಿ ಶಿಗ್ಗಾವಿ ಮಂಡಳ ವತಿಯಿಂದ ಮಂಡಲದ ಅಧ್ಯಕ್ಷ ಶಿವಾನಂದ ಮ್ಯಾಗೇರಿ ಅಧ್ಯಕ್ಷತೆಯಲ್ಲಿ ವಿಜಯೋತ್ಸವ ಆಚರಿಸಲಾಯಿತು. 

         ನಂತರ ಅಭೂತಪೂರ್ವ ಗೆಲುವಿಗೆ ಸಾಕ್ಷಿಯಾದ ಗುಜರಾತಿನ ಪ್ರಜೆಗಳಿಗೆ ಅಭಿನಂದನೆಗಳು ತಿಳಿಸಿ ಹಾಗೂ ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತರಿಗೆ ಅಭಿನಂದನೆ ತಿಳಿಸಿ ಮಾತನಾಡಿ ದೇಶವನ್ನು ಗೆಲ್ಲುವ ಶಕ್ತಿ ಗುಜರಾತದಲ್ಲಿದೆ  ನರೇಂದ್ರ ಮೋದೀಜೀ ನಾಯಕತ್ವದಲ್ಲಿ  ಭ್ರಷ್ಟಾಚಾರರಹಿತ ಆಡಳಿತ, ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎನ್ನುವ ಉದ್ದೇಶದೊಂದಿಗೆ ಎಲ್ಲ ದೇಶಗಳು ಮೆಚ್ಚುಗೆಯನ್ನು ಹಾಗೂ ಮೋದೀಜೀಯವರ ದೂರದೃಷ್ಟ್ರೀಯ ಅಂತ್ಯೋದಯ ಪರಿಕಲ್ಪನೆಯನ್ನು ಹೊಂದಿರುವ ಆಡಳಿತವನ್ನು ಎಲ್ಲರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಅಲ್ಲದೇ ಬರುವ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಮೋದೀಜೀಯವರ ನೇತೃತ್ವದಲ್ಲಿ ಅತಿ ಹೆಚ್ಚು ಸ್ಥಾನ ಪಡೆದು ಭಾರತೀಯ ಜನತಾ ಪಕ್ಷ ಆಡಳಿತ ನಡೆಸಲಿದೆ ಎಂದರು. 

 ಪುರಸಭೆ ಸದಸ್ಯ ದಯಾನಂದ್ ಅಕ್ಕಿ, ಪ್ರಧಾನ ಕಾರ್ಯದರ್ಶಿ ರೇಣುಕನಗೌಡ ಪಾಟೀಲ್, ಜಿಲ್ಲಾ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಪ್ರತಿಕ ಕೊಳೆಕರ್, ಮುತ್ತು ಎಲಿಗಾರ್, ಪ್ರಶಾಂತ್ ಬಡ್ಡಿ, ರಾಘವೇಂದ್ರ ಅತಡ್ಕರ, ಮುನ್ನಾಬಿಸ್ತಿ, ರಾಜು ಹಿರೇಮಠ, ಮಂಡಲ ಮಹಿಳಾ ಪ್ರಧಾನ ಕಾರ್ಯದರ್ಶಿ ಸಂಜನಾ ರಾಯ್ಕರ್, ರತ್ನಾ ಬನ್ನಿಕೊಪ್ಪ, ಭಾರತೀ ರಾಮಾಪುರಮಠ ಹಾಗೂ ಭಾಜಪ ಕಾರ್ಯಕರ್ತರು ಉಪಸ್ಥಿತರಿದ್ದರು. 


ಸುದ್ದಿ ಓದಿ