ಲೋಕ ಚುನಾವಣೆಯಲ್ಲಿ ಅಭೂತಪೂರ್ವ ಬೆಂಬಲ: ಕೃತಜ್ಞತೆ ಅರ್ಪಿಸುವ ಕಾರ್ಯಕ್ರಮ
ಶಿಗ್ಗಾವಿ 29: ಕಳೆದ ಲೋಕ ಚುನಾವಣೆಯಲ್ಲಿ ಮತದಾರ ಪ್ರಭುಗಳು ಅಭೂತಪೂರ್ವ ಬೆಂಬಲ ಸೂಚಿಸಿದ ಹಿನ್ನೆಲೆಯಲ್ಲಿ ಅದರ ಭಾಗವಾಗಿ ಪಕ್ಷದ ಆದೇಶದಂತೆ ಇದೇ ಜೂನ್ 29 ರ ಶನಿವಾರದಿಂದ ಶಿಗ್ಗಾವಿ-ಸವಣೂರ ತಾಲೂಕಿನ ಬ್ಲಾಕ್ ಅಧ್ಯಕ್ಷರುಗಳ ನೇತೃತ್ವದಲ್ಲಿ ಪ್ರತಿ ಗ್ರಾಮಕ್ಕೆ ಮತ್ತು ಪ್ರತಿ ಬೂತಮಟ್ಟಕ್ಕೆ ತೆರಳಿ ಧನ್ಯವಾದ (ಕೃತಜ್ಞತೆ) ಅರ್ಿಸುವ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ಕಾಂಗ್ರೇಸ್ ಮುಖಂಡ ಯಾಸೀರ್ ಅಹ್ಮದ್ಖಾನ್ ಪಠಾಣ್ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಕಾಂಗ್ರೇಸ್ ಸಭೆಯಲ್ಲಿ ಮಾತನಾಡಿದ ಅವರು, ಪಕ್ಷದ ನಿರ್ದೆಶನದ ಮೇರೆಗೆ ಈ ಕಾರ್ಯಕ್ರಮವನ್ನ ಹಮ್ಮಿಕೊಂಡಿದೆ, ಕಳೆದ 30 ವರ್ಷಗಳಲ್ಲಿ ಈ ಭಾರಿಯ ಚುನಾವಣೆಯಲ್ಲಿ ಮತದಾರರು ಕಾಂಗ್ರೇಸ್ ಪಕ್ಷಕ್ಕೆ ನೀರೀಕ್ಷೆಗೂ ಮೀರಿ ತಾಲೂಕಿನಲ್ಲಿ ಬೆಂಬಲ ಸೂಚಿಸಿದ್ದಾರೆ, ಗ್ಯಾರಂಟಿ ಯೋಜನೆಗಳು ತಲುಪಿಲ್ಲ ಅಂದರೇ ಸಭೆ ಮಾಡಿ ಮುಟ್ಟದವರಿಗೆ ಮುಟ್ಟಿಸುವ ಕಾರ್ಯಕ್ರಮ ಮಾಡಲು ಪಕ್ಷ ನಿರ್ಧರಿಸಿದೆ, ಕಾರ್ಯಕ್ರಮಗಳು ಜಿಲ್ಲಾಧ್ಯಕ್ಷರ ನೇತೃತ್ವದಲ್ಲಿಯೂ ನಡೆಯಲಿವೆ, ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ರಾಜ್ಯದ ವಿವಿಧ ಮುಖಂಡರು ಆಗಮಿಸುವ ನೀರೀಕ್ಷೆ ಇದೆ, ಲೋಕ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಪರ 24 ಸಭೆ ಮಾಡಿದ್ದೇವೆ. ಪಕ್ಷದ ಮೇಲೆ ವಿಶ್ವಾಸವಿಟ್ಟು ಮತ ನೀಡಿದ ಮತದಾರರಿಗೆ ಕೃತಜ್ಞತೆ ಸಲ್ಲಿಸುತ್ತೇವೆ ಎಂದರು.
ಯಾರಿಗೆ ಟಿಕೆಟ್ ನೀಡಿದರೂ ಚುನಾವಣೆ ಮಾಡುತ್ತೇವೆ : ಮಾಜಿ ಶಾಸಕ ಅಜ್ಜಂಪೀರ್ ಖಾದ್ರಿ ಅವರ ಪಾದಯಾತ್ರೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಪಠಾಣ್, ಏನೇ ಮಾಡಿದರೂ ನಮ್ಮ ಪಕ್ಷದ ಚಿನ್ಹೆಯೊಂದಿಗೆ ನಡೆದಿದ್ದು ಸಂತಸದಾಯಕ, ಅವರಿಗೆ ಟಿಕೆಟ್ ನೀಡಿದರೂ ನಾವು ಚುನಾವಣೆ ಮಾಡುತ್ತೇವೆ, ನಾನು ಪಕ್ಷದ ಶಿಸ್ತಿನ ಶಿಫಾಯಿ, ಪಕ್ಷದ ನಿರ್ದೇಶನ ಇದ್ದರೆ ಮಾಡಲಬೇಕು, ಪಕ್ಷ ವಿರೋಧ ಚಟುವಟಿಕೆಗಳ ನಡೆಸುವರ ವಿರುದ್ದ ಕ್ರಮದ ಕುರಿತು ಪಕ್ಷ ನಿರ್ಣಯಿಸುತ್ತದೆ ಪಕ್ಷದ ಅಧ್ಯಕ್ಷರ ನೇತೃತ್ವದಲ್ಲಿ ನಡೆಯವ ಕಾರ್ಯಕ್ರಮ ಮಾತ್ರ ಪಕ್ಷದ್ದು. ಹೊರತುಪಡಿಸಿ ನಡೆಯವ ಕಾರ್ಯಕ್ರಮ ಅನಧಿಕೃತ, ಅವರ ಶಾಸಕರು ನಾಲ್ಕು ಬಾರಿ ಶಾಸಕರಾಗಿ ಈಗ ನಡು ನೀರಿನಲ್ಲಿ ಕೈಬಿಟ್ಟು ಹೋಗಿದ್ದಾರೆ ಎಂದು ಕುಟುಕಿದರು.
ಗಡಿ ಅಭಿವೃದ್ದಿ ಪ್ರಾಧಿಕಾರದ ಅದ್ಯಕ್ಷ ಸೋಮಣ್ಣ ಬೇವಿನಮರದ, ಶಿಗ್ಗಾವಿ ತಾಲೂಕಾ ಬ್ಲಾಕ್ ಕಾಂಗ್ರೇಸ್ ಅದ್ಯಕ್ಷ ಬಿ ಸಿ ಪಾಟೀಲ, ಸವಣೂರ ಬ್ಲಾಕ್ ಅದ್ಯಕ್ಷ ಎಂ ಜೆ ಮುಲ್ಲಾ, ಅಲ್ಪಸಂಖ್ಯಾತ ಘಟಕದ ತಾಲೂಕಾದ್ಯಕ್ಷ ಬಾಬರ್ ಭೋವಾಜಿ, ಶಹರ ಘಟಕದ ಅದ್ಯಕ್ಷ ಚಂದ್ರು ಕೊಡ್ಲಿವಾಡ, ಎಸ್ ಎಫ್ ಮಣಕಟ್ಟಿ, ಗುಡ್ಡಪ್ಪ ಜಲದಿ, ಸುಭಾಸ ಮಜ್ಜಗಿ, ಮಾಲತೇಶ ಸಾಲಿ ಸೇರಿದಂತೆ ಕಾಂಗ್ರೇಸ್ ಮುಖಂಡರು ಇದ್ದರು.