ಮಹಲಿಂಗಪುರ

ಪ್ರಾಥಮಿಕ ಕೃಷಿ ಪತ್ತಿನ ಸಂಘದ ಚುನಾವಣೆಯಲ್ಲಿ ಅವಿರೋಧ ಆಯ್ಕೆ

ಪ್ರಾಥಮಿಕ ಕೃಷಿ ಪತ್ತಿನ ಸಂಘದ ಚುನಾವಣೆಯಲ್ಲಿ ಅವಿರೋಧ ಆಯ್ಕೆ

ಮಹಾಲಿಂಗಪುರ 11: ಬಾಗಲಕೋಟ ಜಿಲ್ಲೆಯ ಮುಧೋಳ ತಾಲೂಕಿನ ಸಮೀಪದ ರನ್ನ ಬೆಳಗಲಿ ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ (ನಿ) ಆಡಳಿತ ಮಂಡಳಿಗೆ ಸಾಲಗಾರ ಸಾಮಾನ್ಯ, ಹಿಂದುಳಿದ ವರ್ಗ 'ಅ' ಮತ್ತು 'ಬ' ಕ್ಷೇತ್ರಕ್ಕಾಗಿ ರವಿವಾರ ಚುನಾವಣೆ ನಡೆಯಿತು. 

ಈ ಸಂದರ್ಭದಲ್ಲಿ ಸಾಲಗಾರ ಸಾಮಾನ್ಯ ಕ್ಷೇತ್ರದಿಂದ ಗಿರಿಶ ಅ. ಶಿರೋಳ, ಚಿನ್ನಪ್ಪ ಮ. ಪೂಜೇರಿ, ನಿಂಗಪ್ಪ ಹ. ಆರೇನಾಡ್, ಶಂಕರ ನಿಂ.ಆರೇನಾಡ್, ಶಿವಯ್ಯ ರಾ.ಮೆಟಗುಡ್ಡ, ಸಾಲಗಾರ ಹಿಂದುಳಿದ ವರ್ಗ 'ಅ' ಯಮನಪ್ಪ ರಾ. ಚಂದಪ್ಪನ್ನವರ, 'ಬ' ವರ್ಗದಿಂದ ಫರ್ಮಾನಂದ ಭೀ. ಸನಹಟ್ಟಿ ಆಯ್ಕೆಯಾಗಿದ್ದಾರೆ. 

ಅವಿರೋಧವಾಗಿ ಸಾಲಗಾರ ಮಹಿಳಾ ಕ್ಷೇತ್ರದಿಂದ ರುಕ್ಮವ್ವ ಮಹಾಲಿಂಗಪ್ಪ. ಲಾಗದವರ, ಲಕ್ಷ್ಮಿ. ಶಿವಲಿಂಗಪ್ಪ ಹುನ್ನೂರ್, ಸಾಲಗಾರ ಪರಿಶಿಷ್ಟ ಜಾತಿ ಸಂತಪ್ಪ ದುಂಡಪ್ಪ. ಮಲಾವಡಿ/ ಚಾಂಬರ್, ಸಾಲಗಾರ ಪರಿಶಿಷ್ಟ ಪಂಗಡ ಭೀಮವ್ವ ಸಿದ್ದಪ್ಪ. ನ್ಯಾಮಗೌಡ ಆಯ್ಕೆಯಾಗಿದ್ದಾರೆ ಎಂದು ರಿಟನಿಂರ್ಗ್ ಆಫೀಸರ್ ಶಿವಾನಂದ ಎನ್‌. ಬ್ಯಾಳಿ ತಿಳಿಸಿದ್ದಾರೆ. 

ಆಯ್ಕೆಯಾದ ನೂತನ ಆಡಳಿತ ಮಂಡಳಿಗೆ ಗಣ್ಯರು, ಬ್ಯಾಂಕ್ ಶೇರುದಾರರು, ಅಧಿಕಾರಿ ವರ್ಗ ಹಾಗೂ ಸಿಬ್ಬಂದಿಗಳು ಶುಭ ಕೋರಿದ್ದಾರೆ. 


ಸುದ್ದಿ ಓದಿ