ತಾಲೂಕಾ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘಕ್ಕೆ ಅವಿರೋಧ ಆಯ್ಕೆ
ತಾಲೂಕಾ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘಕ್ಕೆ ಅವಿರೋಧ ಆಯ್ಕೆ
ಮುದ್ದೇಬಿಹಾಳ 14: ಪಟ್ಟಣದ ಎಪಿಎಂಸಿ ಬಡಾವಣೆಯಲ್ಲಿರುವ ತಾಲೂಕಾ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘದ 2025ರಿಂದ 30 ರವೆಗೆ ಐದು ವರ್ಷದ ಅವಧಿಯ ಆಡಳಿತ ಮಂಡಳಿಯ ನಿರ್ದೇಶಕರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ 12 ಜನ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ ಎಂದು ಚುನಾವಣಾಧಿಕಾರಿ ರವಿ ಎನ್ ಆಲೂರವರು ಸೋಮವಾರ ಅಧಿಕೃತವಾಗಿ ಘೋಷಿಸಿದರು.
ಇದೇ ದಿ, 4 ರಿಂದ 11ರಂದು ಬೆಳಿಗ್ಗೆ 11 ರಿಂದ ಮದ್ಯಾಹ್ನ 3 ಗಂಟೆಯವರಗೆ ಅಭ್ಯರ್ಥಿಗಳ ನಾಮಪತ್ರ ಸಲ್ಲಿಸಲು ಅವಕಾಶ ನೀಡಲಾಗಿತ್ತು. ದಿ, 12 ರಂದು ನಾಮಪತ್ರ ಪರಿಶಿಲನೆ, ದಿ, 13 ಸೋಮವಾರದಂದು ಮದ್ಯಾಹ್ನ 3 ಗಂಟೆಯವಬರಿಗೂ ನಾಮಪತ್ರ ಹಿಂಪಡೆಯುವ ಅವಕಾಶ ನೀಡಲಾಗಿತ್ತು. ಈ ಸಂದರ್ಭದಲ್ಲಿ ತಾಲೂಕಿ ಕೃಷಿ ಪತ್ತಿನ ಸಹಕಾರ ಸಂಘಗಳಿಂದ ಒಟ್ಟು ಅ ವರ್ಗದಲ್ಲಿ ಒಟ್ಟು 4 ಸ್ಥಾನಕ್ಕೆ 16 ಜನ ಅಭ್ಯರ್ಥಿಗಳು ನಾಮಪತ್ರ ಸಲ್ಲಿದ್ದರು. ಇದರಲ್ಲಿ 12 ಜನ ನಾಮಪತ್ರ ಹಿಂಪಡೆದ ಕಾರಣ ಬಸವರಾಜ ಮಲ್ಲಪ್ಪ ಇಸ್ಲಾಂಪೂರ, ಸುರೇಶ ಕಲ್ಲಪ್ಪ ಹಳಿಮನಿ, ಮಲ್ಲನಗೌಡ ನಿಂಗನಗೌಡ ಬಿರಾದಾರ, ನೀಲಕಂಠಗೌಡ ಕಲ್ಲನಗೌಡ ಗೌಡರ 4 ಜನ ಅವಿರೋಧವಾಗಿ ಆಯ್ಕೆಗೊಂಡರು. ಅದರಂತೆ ಬ ವರ್ಗದಿಂದ 8 ಬಿಡಿ ಸದಸ್ಯರ ಆಯ್ಕೆಗೆ ಸಾಮಾನ್ಯ ಸದಸ್ಯರ ಎರಡು ಸ್ಥಾನಕ್ಕೆ ಗುರಲಿಂಗಪ್ಪ ಶಂಕ್ರ್ಪ ಹಡ್ಲಗೇರಿ, ಹಾಗೂ ಬಸವರಾಜ ಚನ್ನಪ್ಪ ಬಗಲಿ ಇಬ್ಬರು, ಮಹಿಳಾ ಮೀಸಲು ಕ್ಷೇತ್ರದ ಸ್ಥಾನಕ್ಕೆ ಮಲ್ಲಮ್ಮ ಶಿವನಗೌಡ ಪಾಟೀಲ, ವನಮಾಲಾ ಸಾಹೇಬಗೌಡ ಮೇಟಿ ಇಬ್ಬರು, ಹಿಂದುಳಿದ ವರ್ಗ ಅ, ಹಿಂದುಳಿದ ವರ್ಗದ ಬ ಸ್ಥಾನಕ್ಕೆ ಮುತ್ತಪ್ಪ ಕರಬಸಪ್ಪ ಮುತ್ತಣ್ಣವರ, ಹಾಗೂ ಮನೋಹರ ಸೋಮಪ್ಪ ಮೇಟಿ ಅವರು ತಲಾ ಒಂದರಂತೆ, ಪರಿಶಿಷ್ಟ ಜಾತಿ, ಪರಿಶಿಷ್ ಪಂಗಡದ ಕ್ಷೇತ್ರದಿಂದ ಚಿದಾನಂದ ಮಂಗಳಪ್ಪ ಸೀತಿಮನಿ, ಗುರಣ್ಣ ಬಿ ಹತ್ತೂರ, ತಲಾ ಒಬ್ಬರಂತೆ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.
ಈ ವೇಳೆ ಒಟ್ಟು 12 ಸ್ಥಾಕ್ಕೆ 42 ಜನ ಅಭ್ಯರ್ಥಿಗಳು ನಾಮಪತ್ರ ಸಲ್ಲಿದ್ದರು. ಈ ಹಿನ್ನೇಲೆಯಲ್ಲಿ ಚುನಾವಣೆಯೂ ಬಿರುಸಿನಿಂದ ಕೂಡಿ ಜಿದ್ದಾಜಿದ್ದೆಗೆ ಕಾರಣವಾಗಿತ್ತು ಈ ವಿಷಯ ತಿಳಿದ ಶಾಸಕ ಹಾಗೂ ಕರ್ನಾಟಕ ರಾಜ್ಯ ಸಾಭೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಸಿ ಎಸ್ ನಾಡಗೌಡ(ಅಪ್ಪಾಜಿ) ಅವರು ಇದೇ ಮೊದಲ ಬಾರಿ ಟಿಎಪಿಸಿಎಂಎಸ್ ಚುನಾವಣೆಯಲ್ಲಿ ಮದ್ಯಸ್ಥಿತಿಕೆ ವಹಿಸಿಕೊಂಡು ಪಕ್ಷಾತೀತ ಹಾಗೂ ಜಾತ್ಯಾತೀತವಾಗಿ ಎಲ್ಲ ಅಭ್ಯರ್ಥಿಗಳ ಮನೋಲಿಸಿದ ಪರಿಣಾಮ 30 ಜನ ಅಭ್ಯರ್ಥಿಗಳು ನಾಮಪತ್ರ ಹಿಂಡೆದ ಕಾರಣ 12 ಜನ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಗೊಂಡರು.
ಶಾಸಕ ಹಾಗೂ ಕರ್ನಾಟಕ ರಾಜ್ಯ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಸಿ ಎಸ್ ನಾಡಗೌಡ(ಅಪ್ಪಾಜಿ) ಅವರು ಚುನಾವಣೆಯಲ್ಲಿ ಆಯ್ಕೆಗೊಂಡ ನೂತನ ಆಡಳಿತ ಮಂಡಳಿ ನಿರ್ಧೇಶಕರಿಗೆ ಸನ್ಮಾನಿಸಿ ಗೌರವಿಸಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು. ಇಂತಹ ಸ್ಥಳಿಯ ಸಂಸ್ಥೆಯ ಚುನಾವಣೆಗಳಲ್ಲಿ ಯಾವೂದೇ ವೈಮಸ್ಸುಗಳಿಗೆ ಕಾರಣವಾಗಬಾರದು ಹಾಗೂ ಸ್ನೇಹ ಬಾಂಧ್ಯವದಿಂದ ಜೀವನ ನಡೆಸುವಂತಾಗಬೇಕು ಎಂಬ ಸದುದ್ದೇಶದಿಂದ ಈ ಹಿಂದೆ ನಾಲತವಾಡದ ಪ್ರತಿಷ್ಠಿತ ಕುಟುಂಬದ ಜೆ ಎಸ್ ದೇಶಮುಖ ಹಾಗೂ ಕವಡಿಮಟ್ಟಿ ಗೌಡರ ಅಣತಿಯಂತೆ ಟಿಎಪಿಸಿಎಂಎಸ್ ಸೇರಿದಂತೆ ಸ್ಥಳಿಯ ಸಂಸ್ಥೆಯ ಚುನಾವಣೆಗಳನ್ನು ಅವಿರೋಧವಾಗಿ ಆಯ್ಕೆ ಮಾಡುವ ಕಾಲವೊಂದಿತ್ತು. ನಾನೂ ಕೂಡ ಟಿಎಪಿಸಿಎಂಎಸ್ ಚುನಾವಣೆ ಮೂಲಕವೇ ನನ್ನ ರಾಜಕೀಯ ಜೀವನ ಪ್ರಾರಂಭಗೊಂಡಿತು. ಆದಾದನಂತರ ಇಂತಹ ಚುನಾವಣೆಗಳಲ್ಲಿ ವನಾನು ಯಾವೂದೇ ಮಧ್ಯಸ್ಥಿಕೆ ವಹಿಸಿರಲಿಲ್ಲ. ಆದರೇ ಟಿಎಪಿಸಿಎಂಎಸ್ ಸಂಸ್ಥೆಯ ಅಭಿವೃದ್ಧಿಯ ಹಿತದೃಷ್ಠಿಯಿಂದ ಈ ಬಾರಿ ಜಾತ್ಯಾತೀತವಾಗಿ ಪಕ್ಷಾತೀತವಾಗಿ ಎಲ್ಲರನ್ನು ಕರೆದು ಮನವೊಲಿಸಿ ಅಂತಿಮವಾಗಿ 12 ಜನರನ್ನು ಅವಿರೋಧವಾಗಿ ಆಯ್ಕೆ ಗೊಂಡಿದ್ದಾರೆ. ಈ ಚುನಾವಣೆಯಲ್ಲಿ ಅವಿರೋಧ ಆಯ್ಕೆಗೆ ಬಹಳಷ್ಟು ಜನ ಮುಖಂಡರು ಜಾತ್ಯಾತೀತವಾಗಿ ಪಕ್ಷಾತೀತವಾಗಿ ಸಹಕರಿಸಿದ್ದಾರೆ ಅವರೆಲ್ಲಿರಿಗೂ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದರು.
ಜತೆಗೆ ಟಿಎಪಿಸಿಎಂ ಸಂಸ್ಥೆಯ ಅಢಿಯಲ್ಲಿ ಬರುವ ಎಲ್ಲ ಸಹಕಾರಿ ಸಂಘಗಳು ರೈತರಿಗೆ ಸದಾ ಅನುಕೂಲವಾಗಿವಂತೆ ಯೋಜನೆಗಳನ್ನು ರೂಪಿಸಿ ರೈತರಿಗೆ ಆಶ್ರಯದಾತವಾಗಿ ಕಾರ್ಯನಿರ್ವಹಿಸಲಿ ಎಂದರು.ಈ ವೇಳೆ ತಾಳಿಕೋಟಿ ಭಾಗದ ಕಾಂಗ್ರೇಸ್ ಹಿರಿಯ ಮುಖಂಡ ಬಿ ಎಸ್ ಪಾಟೀಲ(ಯಾಳಗಿ), ತಾಲೂಕಾ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಗುರು ತಾರನಾಳ,, ಪಿಎಲ್ ಡಿ ಬ್ಯಾಂಕಿನ ಅಧ್ಯಕ್ಷ ಬಿ ಕೆ ಬಿರಾದಾರ, ಸಂಗನಗೌಡ ಪಾಟೀಲ(ಕವಡಿಮಟ್ಟಿ) ಪ್ರಭುಗೌಡ ಮದರಕಲ್ಲ, ಕಾಂಗ್ರೇಸ್ ಮುಖಂಡ ಸಿ ಬಿ ಅಸ್ಕೀ, ಬಾಪುಗೌಡ ಪೀರಾಪೂರ, ಸಂತೋಷ ನಾಯಕ, ಎ ಆರ್ ಓ ಸಂತೋಷ ಇಲಕಲ್ಲ ಸೇರಿದಂತೆ ಹಲವರು ಇದ್ದರು.