ಮಹಲಿಂಗಪುರ

ಏಕ ರೂಪ ನಾಗರೀಕ ಸಂಹಿತೆ ಎಲ್ಲರೂ ಒಪ್ಪಬೇಕು : ಪ್ರಮೋದ್ ಮುತಾಲೀಕ್

ಏಕ ರೂಪ ನಾಗರೀಕ ಸಂಹಿತೆ ಎಲ್ಲರೂ ಒಪ್ಪಬೇಕು : ಪ್ರಮೋದ್ ಮುತಾಲೀಕ್

ಮಹಾಲಿಂಗಪುರ : ಹಿಂದೂ ವಿರೋಧಿ ಎನ್ನುವುದು ಕಾಂಗ್ರೆಸನ ರಕ್ತದ ಕಣ ಕಣದಲ್ಲಿದೆ.ಆದರೂ ದೇಶದ ಜನ ಬದಲಾವಣೆ ಬಯಸಿದ್ದಾರೆ. ಅದಕ್ಕಾಗಿ ಏಕರೂಪ ನಾಗರೀಕ ಸಂಹಿತೆ ದೇಶದ ಎಲ್ಲ ಸಮುದಾಯದ ಜನ ಒಪ್ಪಬೇಕು ಎಂದು ಶ್ರೀ ರಾಮಸೇನಾ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ ಅಭಿಪ್ರಾಯ ವ್ಯಕ್ತಪಡಿಸಿದರು. 

ಅವರು ನಗರದ ಜಿ ಎಲ್ ಬಿ ಸಿ ಅಥಿತಿ ಗ್ರಹದಲ್ಲಿ ಕರೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ ಸಮಾನ ನಾಗರೀಕ ಸಂಹಿತೆಗೆ ನಾವು ಬೆಂಬಲ ಸೂಚಿಸುತ್ತೇವೆ. ಇದು ಜಾರಿಗೆ ಬರಬೇಕು. ಇದಕ್ಕಾಗಿ ಜುಲೈ 18 ರಿಂದ ಸಹಿ ಸಂಗ್ರಹ ಅಭಿಯಾನ ಆರಂಭಿಸುತ್ತೇವೆ. ಅವತ್ತು ಇಡೀ ರಾಜ್ಯದ ಜಿಲ್ಲಾ ಕೇಂದ್ರಗಳಲ್ಲಿ ಅಭಿಯಾನ ಆರಂಭವಾಗುತ್ತಿದ್ದು. ಐದು ಲಕ್ಷ ಜನರ ಸಹಿ ಸಂಗ್ರಹ ಮಾಡಿ ಕೇಂದ್ರ ಸರ್ಕಾರಕ್ಕೆ ಕಳುಹಿಸುತ್ತೇವೆ. ಎಂದು ಹೇಳಿದರು. 

1889 ರಲ್ಲಿ ಗೋವಾದಲ್ಲಿ ಪೋರ್ತಗಿಸರು "ಕಾಮನ್ ಸಿವಿಲ್ ಕೊಡ್ ಜಾರಿಗೆ ತಂದರು"ಆದರೆ 1961 ರಲ್ಲಿ ಗೋವಾ ವಿಮೋಚನೆಯಾಯಿತು,ಆದರೂ ಅಲ್ಲಿ ಕಾಮನ್ ಸಿವಿಲ್ ಕೋಡ್ ಇಂದಿಗೂ ಜಾರಿ ಇದೇ ಅದು ಇಡೀ ದೇಶಕ್ಕೆ ಮಾದರಿಯಾಗಿದೆ ಎಂದರು. 

ಸಂವಿಧಾನದ 44 ನೇ ಕಲಂ ಸಮಾನತೆ ಕಾನೂನು ಉಲ್ಲೇಖ ಮಾಡುತ್ತದೆ. ಆದರೆ ದೇಶಕ್ಕೆ ಸ್ವಾತಂತ್ರ ಬಂದು 76 ವರ್ಷವಾದರು ಸಮಾನ ಕಾನೂನು ಬಂದಿಲ್ಲ. ಇದಕ್ಕೆಲ್ಲ ಕಾಂಗ್ರೇಸಿನ ತುಷ್ಟಿಕರಣದ ರಾಜಕೀಯವೇ ಕಾರಣ. ಕಳೆದ 20 ವರ್ಷಗಳಿಂದ ಹೈಕೋರ್ಟ್‌. ಸುಪ್ರೀಂಕೋರ್ಟ್‌ ಸಹ ಇದರ ಜಾರಿ ಬಗ್ಗೆ ಹೇಳುತ್ತ ಬಂದಿವೆ. ಈಗ ಅದರ ಜಾರಿ ಅವಶ್ಯಕತೆ ಇದೇ ಎಂದರು. 

ನಂತರ ಮಾತನಾಡಿದ ಶ್ರೀ ರಾಮಸೇನಾ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹಾಲಿಂಗ ಗುಂಜಿಗಾಂವಿ ಯಾವ ದೇಶದಲ್ಲಿಯೂ ಎರಡು ಕಾನೂನು ಇಲ್ಲ. ನಮ್ಮ ದೇಶದಲ್ಲಿ ಮಾತ್ರ ಎರಡು ರೀತಿಯ ಕಾನೂನು ನಡೆಯುತ್ತಿದೆ. ಇವತ್ತು ಇಡೀ ದೇಶದಲ್ಲಿ ಈ ಕಾನೂನಿನ ಬಗ್ಗೆ ಸಕಾರಾತ್ಮಕ ಚರ್ಚೆ ಶುರುವಾಗಿದ್ದು. ಇದು ಒಳ್ಳೆಯ ಬೆಳವಣಿಗೆ ಎಂದು ಹೇಳಿದರು. 

ಈ ಸಂಧರ್ಭದಲ್ಲಿ ಶ್ರೀ ರಾಮಸೇನಾ ಬಾಗಲಕೋಟ ಜಿಲ್ಲಾ ಉಪಾಧ್ಯಕ್ಷರಾದ ತಾನಾಜಿ ಕಿರಿಕಿರಿ, ನಗರ ಘಟಕದ ಅಧ್ಯಕ್ಷರಾದ ಸಿದ್ದು ಕೋತ, ಮಹಾಂತೇಶ ಬುಡೇಜಾಡರ, ವಿಷ್ಣುಗೌಡ ಪಾಟೀಲ,ಯಮನಪ್ಪ ಕೋರಿ, ಗಂಗಾಧರ ಗರವ, ಮಹಾಲಿಂಗ ಹೊಸಪೇಟಿ ಸೇರಿ ಹಲವರು ಇದ್ದರು. 


ಸುದ್ದಿ ಓದಿ