ಬೆಳಗಾವಿ

ವಾಯು ವಿಹಾರಕ್ಕೆ ತೆರೆದ ವ್ಯಕ್ತಿಗೆ ಅಪರಿಚಿತ ವಾಹನ ಡಿಕ್ಕಿ, ಚಿಕಿತ್ಸೆ ಫಲಿಸದೇ ವ್ಯಕ್ತಿ ಸಾವು

ವಾಯು ವಿಹಾರಕ್ಕೆ ತೆರೆದ ವ್ಯಕ್ತಿಗೆ ಅಪರಿಚಿತ ವಾಹನ ಡಿಕ್ಕಿ,  ಚಿಕಿತ್ಸೆ ಫಲಿಸದೇ ವ್ಯಕ್ತಿ ಸಾವು


ಪಾಲಬಾವಿ 23:  ವಾಯು ವಿಹಾರಕ್ಕೆಂದು ತೆರಳಿದ್ದ ವ್ಯಕ್ತಿ ಮೇಲೆ ಅಪಚಿತಯ ವಾಹನದಿಂದ ಅಪಘಾತ ಸಂಭವಿಸಿ ವ್ಯಕ್ತಿಯೊಬ್ಬ ಸಾವನ್ನಪ್ಪಿದ ಘಟನೆಯೊಂದು ಕಪ್ಪಲಗುದ್ದಿ ಗ್ರಾಮ ಜರುಗಿದೆ.  ಸುಲ್ತಾನಪುರ- ಕಪ್ಪಲಗುದ್ದಿ ಕೂಡುವ ರಸ್ತೆಯಲ್ಲಿ ಸೆ.22ರಂದು ಮಂಗಳವಾರ ಸಂಜೆ 7ಗಂಟೆಗೆ ವಾಯು ವಿಹಾರ ಮಾಡುವಾಗ ಅಪಘಾತ  ಸಂಭವಿಸಿದೆ.ಕಪ್ಪಲಗುದ್ದಿ ಗ್ರಾಮದ ಸಂತೋಷ ಕೃಷ್ಣಪ್ಪ ಮುನ್ನಾಳ(42) ಎಂಬ ವ್ಯಕ್ತಿಯು ವಾಯು ವಿಹಾರಕ್ಕೆಂದು ತೆರಳಿದ್ದ ಸಂದರ್ಭದಲ್ಲಿ ಅಪಘಾತಕ್ಕಿಡಾಗಿ ಮೃತಪಟ್ಟ ದುರ್ದೈವಿ ಎಂದು ತಿಳಿದು ಬಂದಿದೆ. ಅಪಘಾತದ ಮಾಹಿತಿಳಿದ ತಕ್ಷಣ ಗಾಯಾಳುನನ್ನು ಗೋಕಾಕ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದೋಯುವಾಗ ಮಾರ್ಗ ಮಧ್ಯೆ ಸಾವನಪ್ಪಿದ್ದಾನೆ ಎಂದು ಕುಟುಂಬ ಮೂಲಗಳಿಂದ ತಿಳಿದುಬಂದಿದೆ.  ಮೃತರಿಗೆ ತಂದೆ, ತಾಯಿ, ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ ಅಪಾರ ಬಳಗವಿದೆ. ಮೃತನ ಕಳೆದುಕೊಂಡ ಕುಟುಂಬಸ್ಥರ ಆಕ್ರಂದನವು ಮುಗಿಲುಮುಟ್ಟಿದೆ. ವ್ಯಕ್ತಿಯ ಮೇಲೆ ವಾಹನ ಹರಿಸಿ ಪರರಾಗಿರುವ ಆರೋಪಿಗಳ ಕುರಿತು ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ. ಈ ಕುರಿತು ಹಾರೂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 


ಸುದ್ದಿ ಓದಿ