ಮಹಲಿಂಗಪುರ

ದಿನೇ ದಿನೇ ನಿರೂದ್ಯೋಗ ಹೆಚ್ಚಾಗುತ್ತಿದೆ : ಡಾ.ಎ.ಆರ್. ಬೆಳಗಲಿ

ದಿನೇ ದಿನೇ ನಿರೂದ್ಯೋಗ ಹೆಚ್ಚಾಗುತ್ತಿದೆ : ಡಾ.ಎ.ಆರ್. ಬೆಳಗಲಿ

ಗಾಂಧಿ ಕ್ರೀಡಾಂಗಣದಲ್ಲ ಡಾ. ಬೆಳಗಲಿ ನೇತ್ರತ್ವದಲ್ಲಿ ಭಾರತ ಜೋಡೊ ಕರಪತ್ರ ವಿತರಣೆ

 ಸೈದಾಪುರ್ ಸಮೀರವಾಡಿ 15: ಸಮೀಪದ  ಮಹಾಲಿಂಗಪುರದಲ್ಲಿ ದಿನೇ ದಿನೇ ನಿರುದ್ಯೋಗ ಹೆಚ್ಚಾಗುತ್ತಿದೆ. ಜನ ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ. ಈ ಸ್ಥಿತಿ ಹೊರಬರಬೇಕಾದರೆ ರಾಹುಲ್ ಗಾಂಧಿಯವರು ನಡೆಸುತ್ತಿರುವ ಪಕ್ಷಾತೀತ ಪಾದಯಾತ್ರೆಯಲ್ಲಿ ಎಲ್ಲರೂ ಭಾಗವಹಿಸಿ ಎಂದು ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಡಾ.ಎ.ಆರ್ ಬೆಳಗಲಿ ಹೇಳಿದರು.

ಮಂಗಳವಾರ ಬೆಳಿಗ್ಗೆ ಗಾಂಧಿ ಕ್ರೀಡಾಂಗಣದಲ್ಲಿ ಡಾ.ಬೆಳಗಲಿ ನೇತ್ರತ್ವದಲ್ಲಿ ಹಮ್ಮಿಕೊಂಡ ಭಾರತ ಜೋಡೋ ಯಾತ್ರೆಯ ಕರಪತ್ರ ವಿತರಣೆ ಸಂದರ್ಭದಲ್ಲಿ ಮಾತನಾಡಿದರು. ಜನಸಾಮಾನ್ಯರು ನೆಮ್ಮದಿಯಿಂದ ಕಳೆದುಕೊಂಡಿದ್ದಾರೆ,  ಈ ಎಲ್ಲ ಸಮಸ್ಯೆಗಳ ಪರಿಹಾರಕ್ಕೆ ಭಾರತ ಜೋಡೋ ಯಾತ್ರೆಯಲ್ಲಿ ಯುವಜನತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಕರೆ ನೀಡಿದರು. ಪುರಸಭೆ ಮಾಜಿ ಅಧ್ಯಕ್ಷ ಬಸವರಾಜ ರಾಯರ, ಮಹಾದೇವ ಕಡಬಲ್ಲವರ, ಎಸ್.ಎಂ ಉಳ್ಳೆಗಡ್ಡಿ, ರವಿ ನಿಲಾರಿ,ಯಾಸೀನ ಪಾಂಡು,ಪರಸು ಪಾತ್ರೋಟ, ಶಿರಾಜ ಬನಹಟ್ಟಿ, ಅವಿನಾಶ ಜಾಧವ, ಸೇರಿದಂತೆ ಹಲವರು ಇದ್ದರು 

ಸುದ್ದಿ ಓದಿ