ಭೂಗತ ಪಾತಕಿ ಬನ್ನಂಜೆ ರಾಜನಿಗೆ ಅನಾರೋಗ್ಯ : ಬಿಮ್ಸ್ ನಲ್ಲಿ ಚಿಕಿತ್ಸೆ, ಬಿಗಿ ಪೊಲೀಸ ಬಂದೋಬಸ್ತ್
ಬೆಳಗಾವಿ : ಅಂಕೋಲಾದ ಖ್ಯಾತ ಉದ್ಯಮಿ ನಾಯಕ ಅವರ ಹತ್ಯೆ ಪ್ರಕರಣದಲ್ಲಿ ಬೆಳಗಾವಿಯ ಹಿಂಡಲಾ ಜೈಲಿನಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಕುಖ್ಯಾತ ಭೂಗತ ಲೋಕದ ಪಾತಕಿ ಬನ್ನಂಜೆ ರಾಜನಿಗೆ ಅನಾರೋಗ್ಯ ಉಂಟದ ಹಿನ್ನೆಲೆ ಜೈಲು ಅಧಿಕಾರಿಗಳು, ಸಿಬ್ಬಂದಿಗಳು ಬೆಳಗಾವಿಯ ಬಿಮ್ಸ್ ಆಸ್ಪತ್ರೆಗೆ ಗುರುವಾರ ಕರೆತಂದು ಚಿಕಿತ್ಸೆಗೆ ಒಳಪಡಿಸಿದರು.
ಕಾರವಾರ ಜಿಲ್ಲೆಯ ಅಂಕೋಲಾದ ಖ್ಯಾತ ಉದ್ಯಮಿ ನಾಯಕ ಅವರ ಹತ್ಯೆ ಮಾಡಿರುವ ಆರೋಪದ ಹಿನ್ನಲೆ ಜೀವಾವಧಿ ಶಿಕ್ಷೆಗೆ ಒಳಗಾಗಿರುವ ಬನ್ನಂಜೆ ರಾಜ್ ಅವರಿಗೆ ಅನಾರೋಗ್ಯ ಉಂಟಾಗಿ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ. ಈ ಹಿನ್ನಲೆಯಲ್ಲಿ ಹಿಂಡಲಗಾ ಜೈಲ್‌ನಿಂದ ಜೈಲು ಸಿಬ್ಬಂದಿಗಳು ಮತ್ತು ಪೊಲೀಸ ಬಗಿ ಬಂದೋಬಸ್ತನಲ್ಲಿ ಬಿಮ್ಸ್ ಆಸ್ಪತ್ರೆಗೆ ಕರೆತರಲಾಗಿತ್ತು.
ಈ ಹಿನ್ನೆಲೆಯಲ್ಲಿ ಬೆಳಗಾವಿ ಬಿಮ್ಸ್ ಆಸ್ಪತ್ರೆ ಆವರಣದಲ್ಲಿ ಬೀಗಿಯಾದ ಪೊಲೀಸ ಬಂದೋಬಸ್ತನ್ನು ಮಾಡಲಾಗಿತ್ತು. ಬಳಿಕ ಬಿಮ್ಸ್ ಆಸ್ಪತ್ರೆಯಲ್ಲಿ ಬನ್ನಂಜೆ ರಾಜ್‌ನಿಗೆ ಸಿಟಿ ಸ್ಕಾö್ಯನ್ ಮಾಡಿಸಿ ಮತ್ತೆ ಹಿಂಡಲಗಾ ಜೈಲಿಗೆ ಕರೆದುಕೊಂಡು ಹೋಗಲಾಯಿತು. ಕಳೆದ ಕೆಲವು ವರ್ಷಗಳಿಂದ ಕುಖ್ಯಾತ ಪಾತಕಿ ಬನ್ನಂಜೆ ರಾಜಾ ಬೆಳಗಾವಿ ಹಿಂಡಲಗಾ ಜೈಲನಲ್ಲಿ ಇದ್ದಾರೆ.