ಪುತ್ರನ ಸಾವಿನ ಸುದ್ದಿ ತಿಳಿದು ಚಿಕ್ಕಪ್ಪ ಕೂಡಾ ವಿಧಿವಶ : ಸಂಕೇಶ್ವರದಲ್ಲಿ ಮನಕುಲಕುವ ಘಟನೆ, ಒಂದೇ ದಿನ ಒಂದೇ ಕುಟುಂಬದ ಇಬ್ಬರ ಸಾವು

ಪುತ್ರನ ಸಾವಿನ ಸುದ್ದಿ ತಿಳಿದು ಚಿಕ್ಕಪ್ಪ ಕೂಡಾ ವಿಧಿವಶ : ಸಂಕೇಶ್ವರದಲ್ಲಿ ಮನಕುಲಕುವ ಘಟನೆ, ಒಂದೇ ದಿನ ಒಂದೇ ಕುಟುಂಬದ ಇಬ್ಬರ ಸಾವು

ಬೆಳಗಾವಿ/ ಸಂಕೇಶ್ವರ : ಅತ್ತ ಕುಟುಂಬಕ್ಕೆ ಆಸರೆಯಾಗಿ ಮನೆಯನ್ನು ಬೆಳಗಬೇಕಿದ್ದ ಒಬ್ಬನೆ ಇದ್ದ ಪುತ್ರ ಶಿವ ರಾಜ್ಯಾಭಿಷೇಕಕ್ಕೆ ಮಹಾರಾಷ್ಟ್ರಕ್ಕೆ ತೆರಳಿದ್ದನು. ಆ ಪುತ್ರನ ಸಾವಿನ ಸುದ್ದಿ ತಿಳಿದು ಅನಾರೋಗ್ಯದಿಂದ ಬಳಲುತ್ತಿದ್ದ ಚಿಕ್ಕಪ್ಪ ಕೂಡಾ ಸಾವಿನ ಮನೆ ಹಾದಿ ಹಿಡಿದಿರುವ ಮನಕುಲುಕುವ ಘಟನೆ ಜಿಲ್ಲೆಯ ಸಂಕೇಶ್ವರ ಪಟ್ಟಣದಲ್ಲಿ ಜರುಗಿದೆ.

      ಸಂಕೇಶ್ವರ ಪುರಸಭೆ ಸದಸ್ಯ ಹಾಗೂ ಮರಾಠಾ ಸಮಾಜದ ಮುಖಂಡ ದೀಪಕ ಭೀಸೆ ಅವರ ಪುತ್ರ ಓಂಕಾರ್ ಈತ ಛತ್ರಪತಿ ಶಿವಾಜಿ ಮಹಾರಾಜರ ಶಿವ ರಾಜ್ಯಾಭಿಷೇಕ ಕಾರ್ಯಕ್ರಮಕ್ಕಾಗಿ ಮಹಾರಾಷ್ಟ್ರದ ರಾಯಗಡ ಕೋಟೆಗೆ ತೆರಳಿದ್ದರು. 

   ಅತ್ತ ಶುಕ್ರವಾರ ರಾಯಗಡ ಕೋಟೆಯನ್ನು ಹತ್ತುತ್ತಿದ್ದಾಗ ಪುತ್ರ ಓಂಕಾರ ಈತ ಹೃದಯಾಘಾತದಿಂದ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ. ಇತ್ತ ಅನಾರೋಗ್ಯದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಚಿಕ್ಕಪ್ಪ ರವಿ ಭೀಸೆ ಇವರು ಪುತ್ರನ ಸಾವಿನ ಸುದ್ದಿ ತಿಳಿದು ಆರೋಗ್ಯದಲ್ಲಿ ಏರುಪೇರಾಗಿ ಹೃದಯಾಘಾತ ಸಂಭವಿಸಿ ಮೃತಪಟ್ಟಿದ್ದಾರೆ. 

   ಈ ಎರಡು ಘಟನೆಗಳ ಹಿನ್ನೆಲೆಯಲ್ಲಿ ಸಂಕೇಶ್ವರ ನಗರದಲ್ಲಿ ಶೋಕದ ಛಾಯೆ ಮೂಡಿದೆ. ಅಲ್ಲದೆ ಭೀಸೆ ಕುಂಟುಂಬದಲ್ಲಿ ತುಂಬಲಾರದ ನಷ್ಟವಾಗಿದೆ. ಒಬ್ಬನೆ ಪುತ್ರನ ನ್ನು ಹೊಂದಿದ್ದ ಕುಟುಂಕ್ಕೆ ಆಸರೆ ಇಲ್ಲದಂತಾಗಿರುವದು ವಿಧಿಯ ಆಟದ‌ ಮುಂದೆ ಯಾವ ಆಟ ನಡೆಯುವದಿಲ್ಲ ಎನ್ನುವದು ಸ್ಪಷ್ಟವಾಗಿದೆ.

ಸುದ್ದಿ ಓದಿ