ಪದಾಧಿಕಾರಿಗಳ ಅವಿರೋಧ ಆಯ್ಕೆ
ಮಹಾಲಿಂಗಪುರ 12: ಪಟ್ಟಣದ ಓಂ ಶಿವಬಸವ ಕ್ರೆಡಿಟ್ ಸೌಹಾರ್ದ ಸಹಕಾರಿ ನಿ. ಬ್ಯಾಂಕಿನ ಆಡಳಿತ ಮಂಡಳಿಗೆ ಅಕ್ಟೋಬರ್ 31ರಂದು ಬ್ಯಾಂಕಿನ ಕಚೇರಿಯಲ್ಲಿ ಚುನಾವಣೆ ನಡೆಯಿತು,
ನ.11ರಂದು ನಡೆದ ಪದಾಧಿಕಾರಿಗಳ ಆಯ್ಕೆಯಲ್ಲಿ ಸಾಮಾನ್ಯ ವರ್ಗದ ಚಂದ್ರಶೇಖರ.ಬಾಳಪ್ಪ.ಗೊಂದಿ ಅಧ್ಯಕ್ಷರಾಗಿ ಮತ್ತು ಉಪಾಧ್ಯಕ್ಷರಾಗಿ ಬಸವರಾಜ.ಚನ್ನಬಸಪ್ಪ.ಘಟನಟ್ಟಿ ಇವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ
ಒಟ್ಟು ಅವಿರೋಧವಾಗಿ ಆಯ್ಕೆಯಾದ 15 ಅಭ್ಯರ್ಥಿಗಳ ವಿವರ, ಸಾಮಾನ್ಯ ವರ್ಗದ ಚಂದ್ರಶೇಖರ ಗೊಂದಿ, ಮಹಾಲಿಂಗ ಕುಳ್ಳೋಳ್ಳಿ, ಚನ್ನಪ್ಪ ಪಟ್ಟಣಶೆಟ್ಟಿ, ಮಹಾದೇವ ಬಂಡಿ, ಬಾಬುರಾವ ಅಮಲಜೇರಿ, ಮಹಾಲಿಂಗಪ್ಪ ಅವರಾದಿ, ರಾಹುಲ ಅವರಾದಿ, ಬಸವರಾಜ ರಾಯರ, ಬಸವರಾಜ ಘಟನಟ್ಟಿ, ಹಿಂದುಳಿದ ವರ್ಗ (ಅ) ಅಶೋಕ ಅಂಗಡಿ, ಕು. ಮೇಘಾ. ಬಾಬುರಾವ. ಕಮತಗಿ, ಮಹಿಳಾ ಸೌಮ್ಯ. ಶಶಿಧರ.ನಕಾತಿ, ಕು.ಮಂದಾರಾ.ಬಾಬುರಾವ.ಕಮತಗಿ, ಪರಿಶಿಷ್ಟ ಜಾತಿ ಶಂಕರ.ಲಮಾಣಿ, ಪ.ಪಂಗಡ ಆನಂದ ಮೇದಾರ ಇವರು ಐದು ವರ್ಷಗಳ ಅವಧಿಗೆ ಈ ಕೆಳಕಾಣಿಸಿದ ಅಭ್ಯರ್ಥಿಗಳು ಅವಿರೋಧವಾಗಿ ಕರ್ನಾಟಕ ಸೌಹಾರ್ದ ಸಹಕಾರಿಗಳ ನಿಯಮಗಳು 5 (ಎಲ್) ರಲ್ಲಿನ ಉಪಬಂಧಾನುಸಾರ ಕ್ರಮಬದ್ಧವಾಗಿ ಆಯ್ಕೆಯಾಗಿದ್ದಾರೆಂದು ರಿಟನಿಂರ್ಗ್ ಆಫೀಸರ್ ಎಸ್.ಆರ್. ಬಾಡಗಿ ಅವರು ಪ್ರಮಾಣಪತ್ರ (ಘೋಷಣಾ) ಪತ್ರದಲ್ಲಿ ತಿಳಿಸಿದ್ದಾರೆ.