ಮುದ್ದೆಬಿಹಾಲ್

ಮುತೈದೆಯರಿಗೆ ಉಡಿತುಂಬುವ ಕಾರ್ಯಕ್ರಮ

ಮುತೈದೆಯರಿಗೆ ಉಡಿತುಂಬುವ ಕಾರ್ಯಕ್ರಮ

ಮುದ್ದೇಬಿಹಾಳ 20: ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಯರಿಗೆ ಪೂಜ್ಯನೀಯ ಸ್ಥಾನ ನೀಡಲಾಗಿದೆ. ತಾಯಂದಿರು  ತಮ್ಮ ಮಕ್ಕಳಿಗೆ ದೇಶದ ಸಂಸ್ಕೃತಿ, ಆಚಾರ ವಿಚಾರ, ಉತ್ತಮ ಸಂಸ್ಕಾರ ಜೊತೆಗೆ ದೇಶಾಭಿಮಾನ ಮೈಗೂಡಿಸಿಕೊಳ್ಳುವಂತೆ ಪ್ರೇರೆಪಿಸಬೇಕಿದೆ ಎಂದು ಕಾಂಗ್ರೇಸ್ ಮುಖಂಡ ಸಿ ಬಿ ಅಸ್ಕಿ ಹೇಳಿದರು. 

ತಾಲೂಕಿನ ಬಳವಾಟ ಗ್ರಾಮದ ಕಂಠಿ ಬಸವೇಶ್ವರ ದೇವಸ್ಥಾನ ಆವರಣದಲ್ಲಿ ಹಿರೇಮಠ ಪರ್ವತಾಶ್ರಮ ಸಹಯೋಗದಲ್ಲಿ ಢಾ, ಸೋಮಶೇಖರ ಶಿವಾಚಾರ್ಯರ ನೇತೃತ್ವದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸದಾನಂದ ಸದಾನಂದ ಶಿವಾಚಾರ್ಯರ 3ನೇ ಸ್ಮರಣೋತ್ಸವ ಧರ್ಮಸಭೇ ಹಾಗೂ 501 ಮುತೈದೆಯರಿಗೆ ಉಡಿತುಂಬುವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. 

ಇಂದು ಆಧುನಿಕ ವೈಜ್ಞಾನಿಕ ಯುಗದಲ್ಲಿ ಪಾಶ್ಚಾತ್ಯ ಸಂಸ್ಕೃತಿ ಅನುಕರಣೆಯಿಂದಾಗಿ ನಿಜವಾದ ಭಾರತೀಯ ಸಂಸ್ಕೃತಿ ಮರೆಯುತ್ತಿರುವ ಕಾಲಘಟ್ಟದಲ್ಲಿ ಮಹಿಳೆಯವರಿಗೆ ಉಡಿ ತುಂಬುವ ಪದ್ಧತಿ ಭಾರತೀಯ ಸಂಸ್ಕೃತಿಯ ಪ್ರತೀಕ. ಇಂತಹ ಸಂಪ್ರದಾಯವನ್ನು ಇಂದಿಗೂ ಪಾಲಿಸಿಕೊಂಡು ಬಂದಿರುವುದು ಹೆಮ್ಮೆಯ ಸಂಗತಿ.ರಾಜ್ಯದಲ್ಲಿ ಬಸವಾದಿ ಹಲವಾರು ಶರಣರು, ಸಂತರು, ಅನೇಕ ಪವಾಡಗಳನ್ನು ನಡೆಸುವ ಮೂಲಕ  ಧರ್ಮ ರಕ್ಷಣೆಯಲ್ಲಿ ತೊಡಸಿಕೊಳ್ಳುವ ಮೂಲಕ ಸಮಾನತೆ ಸಂದೇಶ ಸಾರಿದ್ದಾರೆ ಅದರಂತೆ ಮಠಗಳು ಸಂಸ್ಕಾರ ಪರಂಪರೆ ಸೇರಿದಂತೆ ಧರ್ಮ ಉಳಿಸುವಲ್ಲಿ ಮಹತ್ತರ ಪಾತ್ರವಹಿಸುತ್ತವೆ ಈ ನಿಟ್ಟಿನಲ್ಲಿ ನಾವೇಲ್ಲ ಪವಾಡಪುರುಷರ ಮಠಗಳನ್ನು ಉಳಿಸಿ ಬೆಳೆಸುವಲ್ಲಿ ಪ್ರಾರಮಾಣಿಕವಾಗಿ ಪ್ರೆಯತ್ನಿಸಬೇಕು ಎಂದರು. 

ಇಂದು ಆಧುನಿಕ ವೈಜ್ಞಾನಿಕ ಯುಗದಲ್ಲಿ ಪಾಶ್ಚಾತ್ಯ ಸಂಸ್ಕೃತಿ ಅನುಕರಣೆಯಿಂದಾಗಿ ನಿಜವಾದ ಭಾರತೀಯ ಸಂಸ್ಕೃತಿ ಮರೆಯುತ್ತಿದ್ದೇವೆ 

ಎಂದರು. ಹಾವೇರಿ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಮಾತನಾಡಿ, ‘ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ನೈತಿಕತೆ ಮೈಗೂಡಿಸಿಕೊಂಡರೆ ಅತ್ಯುತ್ತಮ ಸಮಾಜ ನಿರ್ಮಾಣ ಸಾಧ್ಯ’ ಎಂದರು. 

ಈ ವೇಳೆ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ನಾಟಕ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು, ಆಲಮೇಲದ ಚಂದ್ರಶೇಖರ ಶಿವಾಚಾರ್ಯರು, ತಡವಲಗಾದ ಅಭಿನವ ರಾಚೋಟೇಶ್ವರ ಶಿವಾಚಾರ್ಯರು, ಡಾ, ಸೋಮಶೇಖರ ಶಿವಾಚಾರ್ಯರು, ಮಲ್ಲಯ್ಯ ಹಿರೇಮಠ, ಗುಡಿಹಾಳದ ಶ್ರೀಶೈಲ ಹಿರೇಮಠ, ಶ್ರೀ ಬಸಲಿಂಗಯ್ಯಾ ಹಿರೇಮಠ, ಸಿದ್ದನಗೌಡ ಬಿರಾದಾರ, ಗ್ರಾಮ ಪಂಚಾಯಿತಿ ಅಧ್ಯಕ್ಷ ಬಸನಗೌಡ ಸಾಸನೂರ ವಿವೇಕಾನಂದ ಬಿರಾದಾರ, ಹಣಮಂತ ಭಜಂತ್ರಿ ಸೇರಿದಂತೆ ಹಲವರು ಇದ್ದರು. 


ಸುದ್ದಿ ಓದಿ