ಹಗರಿಬೊಮ್ಮನಹಳ್ಳಿ

ಉಡಿ ತುಂಬುವ ಉತ್ಸವ : ಕೋಣನ ಮೆರವಣಿಗೆ

ಉಡಿ ತುಂಬುವ ಉತ್ಸವ : ಕೋಣನ ಮೆರವಣಿಗೆ

ಹಗರಿಬೊಮ್ಮನಹಳ್ಳಿ 25: ತಾಲೂಕಿನ ಮಾಲವಿ ಗ್ರಾಮದ ಮುದ್ದಿ ಬಸವೇಶ್ವರ ಜಾತ್ರೆಯ ಪ್ರಯುಕ್ತ ನೆಡೆದ ಗ್ರಾಮದೇವತೆ ಊರಮ್ಮ ದೇವಿ ಉಡಿ ತುಂಬುವ ಉತ್ಸವದಲ್ಲಿ ವಿವಿಧ ವಾದ್ಯಗಳೊಂದಿಗೆ ಕೋಣನ ಮೆರವಣಿಗೆ ಮಾಡಲಾಯತು. 

ಈ ವೇಳೆ ಬಡಿಗೇರು ಕಾಳಚಾರಿ ಶ್ರೀ ಊರಮ್ಮ ದೇವಿಯ ಕೇಲು  

ಹೊತ್ತುಕೊಂಡು ನಾಗಮ್ಮ ಕೊಟ್ರಮ್ಮ, ಹುಲಿಗೆಮ್ಮ, ಹನುಮವ್ವ ಇತರ ಜೋಗ್ತಿಯರ ಹಾಗೂ ಸಹಸ್ರರು ಭಕ್ತರ ಉದೋ ಉಧೋ ಎಂಬ ಉದ್ಘಾರದೊಂದಿಗೆ ಉಡಿ ತುಂಬುವ ದೇವಿ ಉತ್ಸವ  ಜರುಗಿತು.ಗ್ರಾಮಸ್ಥರು ದೇವಾಲಯಕ್ಕೆ ಭೇಟಿ ನೀಡಿ ಊರಮ್ಮ ದೇವಿ ದುರುಗಮ್ಮ ದೇವಿಯರಿಗೆ ಹೂವು ಹಣ್ಣು ಕಾಯಿಯೊಂದಿಗೆ ಭಕ್ತಿ ಸಮರ​‍್ಿಸಿ ದೇವಿಯರ ಕೃಪೆಗೆ ಪಾತ್ರರರಾದರು. 

ಉತ್ಸವದಲ್ಲಿ ದೈವಸ್ಥ ಕೆ.ಎಂ ಕೊಟ್ರಸ್ವಾಮಿ, ಉಪ್ಪಾರ ಬಸವರಾಜ ಬಣಕಾರ ದೇವಪ್ಪ, ಗುರುಪಾದ ಗೌಡ, ಎಸ್ ಎಂ ಮಂಜಯ್ಯ, ಬಡಿಗೇರು ಜಗದೀಶ್, ಪಿಚ್ಚಿ ಕೊಟ್ರೇಶಪ್ಪ, ಹೊಸಹಳ್ಳಿ ಹನುಮಂತಪ್ಪ, ಹ್ಯಾಳೇದು ಮಲ್ಲೇಪ್ಪ, ಭೀರ​‍್ಪ ಚಿಮ್ನಹಳ್ಳಿ, ಕಂಚಗಾರ ಮದ್ದಾನಪ್ಪ ಎಸ್‌ಡಿಎಂಸಿ ಅಧ್ಯಕ್ಷ ಹರಿಜನದ ಕೊಟ್ರೇಶ್, ಹರಿಜನದ ಬಸವರಾಜ, ನಾಗಪ್ಪ, ರಮೇಶ, ಹುಲೇಪ್ಪ, ಭೀಮಪ್ಪ, ಮಹಿಳೆಯರು ಸೇರಿದಂತೆ ಗ್ರಾಮಸ್ಥರು ಭಾಗವಹಿಸಿದ್ದರು. 


ಸುದ್ದಿ ಓದಿ