ಅಂತರರಾಷ್ಟ್ರೀಯ

ಕಾಬೂಲ್‌ ಮೇಲೆ ಅಮೆರಿಕದ ಡ್ರೋನ್‌ ದಾಳಿ; 6 ಮಕ್ಕಳು ಸೇರಿ 9 ಸಾವು

ಕಾಬೂಲ್‌ ಮೇಲೆ ಅಮೆರಿಕದ ಡ್ರೋನ್‌ ದಾಳಿ; 6 ಮಕ್ಕಳು ಸೇರಿ 9 ಸಾವು

ಕಾಬೂಲ್, ಆ 30: ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನಲ್ಲಿ ಭಾನುವಾರ ವಾಹನವನ್ನು ಗುರಿಯಾಗಿಸಿಕೊಂಡು ಅಮೆರಿಕ ನಡೆಸಿದ ವೈಮಾನಿಕ ದಾಳಿಯಿಂದ ಸಾವನ್ನಪ್ಪಿದವರ ಸಂಖ್ಯೆ 9 ಕ್ಕೆ ಏರಿಕೆಯಾಗಿದೆ. ಘಟನೆಯಲ್ಲಿ 6 ಮಕ್ಕಳು ಸೇರಿ ಒಂದೇ ಕುಟುಂಬದ ಎಲ್ಲ ಸದಸ್ಯರು ಹತರಾಗಿದ್ದಾರೆ ಎಂದು ಮೃತ ಸಂಬಂಧಿಕರು ಸಿಎನ್‌ಎನ್‌ಗೆ ತಿಳಿಸಿದರು.

ಕೊಲೆಯಾದವರಲ್ಲಿ ನಾಲ್ಕು ವರ್ಷದ ಮಗು, ಮೂರು ವರ್ಷದ ಮಗು ಮತ್ತು ಎರಡು ವರ್ಷದ ಮಕ್ಕಳು ಸೇರಿದಂತೆ ಆರು ಮಕ್ಕಳಿದ್ದಾರೆ. ಮೃತರ ಕುಟುಂಬ ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕ (ಐಸಿಸ್‌)ಗುಂಪಿನೊಂದಿಗೆ ಸಂಬಂಧ ಹೊಂದಿಲ್ಲದ "ಸಾಮಾನ್ಯ ಕುಟುಂಬ"ವಾಗಿತ್ತು  ಸತ್ತವರಲ್ಲಿ ಒಬ್ಬನ ಸಹೋದರ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾನೆ.

ಅಮೆರಿಕ ಕೇಂದ್ರೀಯ ಕಮಾಂಡ್ ವಕ್ತಾರ ಕ್ಯಾಪ್ಟನ್ ಬಿಲ್ ಅರ್ಬನ್ ಆದೇಶದ ಮೇರೆಗೆ ಕಾಬೂಲ್ ನಲ್ಲಿ ವಾಹನವೊಂದರ ಮೇಲೆ ಭಾನುವಾರ ಡ್ರೋನ್ ಸ್ಟ್ರೈಕ್ ನಡೆಸಲಾಗಿದೆ. ಈ ಮೂಲಕ ಕಾಬೂಲ್‌  ವಿಮಾನ ನಿಲ್ದಾಣಕ್ಕೆ ಇದ್ದ ಐಸಿಸ್‌ ದಾಳಿಯ ಭೀತಿ ದೂರಾದಂತಾಗಿದೆ.

ಎರಡು ವಾಹನಗಳು ಮತ್ತು ವಸತಿ ಕಟ್ಟಡದ ಒಂದು ಭಾಗವನ್ನು ಧ್ವಂಸಗೊಳಿಸಿದ ವಾಯುದಾಳಿಯಲ್ಲಿ ಕನಿಷ್ಠ ನಾಲ್ಕು ಮಕ್ಕಳು ಮೃತಪಟ್ಟಿದ್ದಾರೆ ಎಂದು ಅಫ್ಘಾನ್ ಮಾಧ್ಯಮ ಭಾನುವಾರ ವರದಿ ಮಾಡಿದೆ.

ಅಫ್ಘಾನಿಸ್ತಾನದ ನಂಗರ್‌ಹಾರ್ ಪ್ರಾಂತ್ಯದಲ್ಲಿ ಶನಿವಾರ ನಡೆಸಿದ ವೈಮಾನಿಕ ದಾಳಿಯಲ್ಲಿ ಇಬ್ಬರು ಐಎಸ್-ಕೆ ನಾಯಕರು ಸಾವನ್ನಪ್ಪಿದ್ದರು ಮತ್ತು ಇನ್ನೊಬ್ಬರು ಗಾಯಗೊಂಡಿದ್ದರು ಎಂದು ಅಮೆರಿಕ ಸೇನೆಯ ಮೇಜರ್ ಜನರಲ್ ವಿಲಿಯಂ ಟೇಲರ್ ಹೇಳಿದ್ದಾರೆ.

ಸುದ್ದಿ ಓದಿ