ಅಂತರರಾಷ್ಟ್ರೀಯ

ಅಫ್ಗಾನಿಸ್ತಾನ ಸೇನಾ ನೆಲೆ ಮೇಲೆ ಅಮೆರಿಕ ಡ್ರೋನ್‌ ದಾಳಿ; 2 ಉಗ್ರರು ಹತ

ಅಫ್ಗಾನಿಸ್ತಾನ ಸೇನಾ ನೆಲೆ ಮೇಲೆ ಅಮೆರಿಕ ಡ್ರೋನ್‌ ದಾಳಿ; 2 ಉಗ್ರರು ಹತ

ಕಾಬೂಲ್,  ಆ 2: ಅಫ್ಗಾನಿಸ್ತಾನ ಕಾಬೂಲ್‌ ವಿಮಾನನಿಲ್ದಾಣದಲ್ಲಿ ತಾಲಿಬಾನಿಗರ  ಆತ್ಮಾಹುತಿ ದಾಳಿಗೆ ಪ್ರತಿಯಾಗಿ ಅಮೆರಿಕ ಸೇನೆ ಶುಕ್ರವಾರ ನಡೆಸಿದ್ದ ಡ್ರೋನ್‌  ದಾಳಿಯಲ್ಲಿ ಇಬ್ಬರು ಪ್ರಮುಖ ಐಸಿಸ್‌-ಕೆ ಮುಖಂಡರು ಬಲಿಯಾಗಿದ್ದಾರೆ ಎಂದು ಪೆಂಟಗನ್‌  ತಿಳಿಸಿದೆ.

ಈ ಕುರಿತು ಶನಿವಾರ ಮಾಧ್ಯಮಗಳಿಗೆ ಮಾಹಿತಿ  ನೀಡಿರುವ ಪೆಂಟನ್‌ ವಕ್ತಾರ ಜಾನ್‌ ಕಿರ್ಬಿ, ಪೂರ್ವ ಅಫ್ಗಾನಿಸ್ತಾನದ ನಾನಗರ್‌ಹಾರ್‌  ಪ್ರದೇಶದಲ್ಲಿ ನಡೆಸಿದ ಡ್ರೋನ್‌ ದಾಳಿಯಲ್ಲಿ ಇಸ್ಲಾಮಿಕ್‌ ಸ್ಟೇಟ್‌ ತಂಡದ ಇಬ್ಬರು  ಹತರಾಗಿದ್ದು, ಓರ್ವ ಗಾಯಗೊಂಡಿದ್ದಾನೆ ಎಂದು ಮಾಹಿತಿ ನೀಡಿದರು.

ತಾಲಿಬಾನಿಗರು ವಿಮಾನನಿಲ್ದಾಣದಲ್ಲಿ ನಡೆಸಿದ ಆತ್ಮಾಹುತಿ ದಾಳಿಯಲ್ಲಿ 200ಕ್ಕೂ ಹೆಚ್ಚು ನಾಗರಿಕರು ಮೃತಪಟ್ಟಿದ್ದರು.

ಕಳೆದೆರಡು ದಿನಗಳಲ್ಲಿ ವಿಮಾನನಿಲ್ದಾಣದ ಹೊರಭಾಗದಲ್ಲಿ ನಡೆದ ಆತ್ಮಾಹುತಿ ದಾಳಿಯಲ್ಲಿ 200ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದರು.

ಅಫ್ಗಾನಿಸ್ತಾನದಲ್ಲಿ ಸಿಲುಕಿರುವ ಪ್ರಜೆಗಳನ್ನು ಸ್ಥಳಾಂತರಿಸಲು  ಅಮೆರಿಕ ನಡೆಸಿರುವ ಕಾರ್ಯಾಚರಣೆ ಆ.31ರಂದು ಕೊನೆಗೊಳ್ಳಲಿರುವ ಹಿನ್ನೆಲೆಯಲ್ಲಿ  ವಿಮನನಿಲ್ದಾಣದಲ್ಲಿ ಅತಿಯಾದ ಜನಸಂಧಣಿ ತಡೆಯಲು ತಾಲೀಬಾನ್‌ ಶನಿವಾರ ಹೆಚ್ಚಿನ ಭದ್ರತಾ  ಪಡೆಗಳನ್ನು ನಿಯೋಜಿಸಿತ್ತು.

ಅಫ್ಗಾನಿಸ್ತಾನದಿಂದ ಬ್ರಿಟೀಷ್‌ ಪ್ರಜೆಗಳನ್ನು  ಸ್ಥಳಾಂತರಿಸುವ ಕಾರ್ಯಾಚರಣೆ ಅಂತ್ಯಗೊಂಡಿದ್ದು, 15000 ಪ್ರಜೆಗಳನ್ನು ಹೊತ್ತ ಕೊನೆಯ  ಬ್ರಿಟೀಷ್‌ ವಿಮಾನ ನಿನ್ನೆ ಹಾರಾಟ ಆರಂಭಿಸಿದೆ. ಇನ್ನು ಬ್ರಿಟೀಷ್‌ ಸೇನಾ ಪಡೆಗಳು  ಹಿಂದಿರುಗಲು ಸಿದ್ಧತೆ ನಡೆಸಲಿದ್ದು, ವಾರಾಂತ್ಯದಲ್ಲಿ ಸಣ್ಣ ಪ್ರಮಾಣದ ಅಫ್ಗಾನ್  ಪ್ರಜೆಗಳನ್ನು ಕೂಡ ತಮ್ಮೊಂದಿಗೆ ಕರೆದೊಯ್ಯಲಿದೆ. 

ಸುದ್ದಿ ಓದಿ