ಹಗರಿಬೊಮ್ಮನಹಳ್ಳಿ

ಜಲಾಶಯದಲ್ಲಿ ಮುಳುಗಿ ಇಬ್ಬರು ಯುವಕರು ಸಾವು

ಜಲಾಶಯದಲ್ಲಿ ಮುಳುಗಿ ಇಬ್ಬರು ಯುವಕರು ಸಾವು


ಲೋಕದರ್ಶನ ವರದಿ 

ಹಗರಿಬೊಮ್ಮನಹಳ್ಳಿ 12: ತಾಲೂಕಿನ ಮಾಲವಿ ಜಲಾಶಯಕ್ಕೆ ಭಾನುವಾರ ಕೊಟ್ಟುರು ನಗರದ 7ಜನ ಸ್ನೇಹಿತರು ಜಲಾಶಯ ವೀಕ್ಷಣೆಗೆ ಬಂದು ಇಬ್ಬರು ಯುವಕರು ನಾಪತ್ತೆಯಾಗಿದ್ದು ಸೋಮವಾರ ಶವವಾಗಿ ಪತ್ತೆಯಾಗಿದ್ದಾರೆ. 

ಭಾನುವಾರ ಸಂಜೆ ನಾಪತ್ತೆಯಾಗಿದ್ದು ಅಗ್ನಿಶಾಮಕ ಹಾಗೂ ಪೋಲೀಸ್ ಸಿಬ್ಬಂದಿಗಳು ಭಾನುವಾರ ಶೋಧ ಕಾರ್ಯ ನಡೆಸಿದ್ದರು, ಜೊತೆಗೆ ದಾವಣಗೇರೆಯ ನುರಿತರಿಂದ ಸಿಬ್ಬಂದಿಗಳಿಂದ ಸೋಮವಾರ ಬೆಳೆಗ್ಗೆ ಶೋಧ ಕಾರ್ಯ ಮಾಡಿ ಮೊದಲಿಗೆ ಚರಣ್ ಮೃತದೇಹ ಪತ್ತೆಯಾಗಿದ್ದು ನಂತರ ಹಾಲೇಶ್ ಮೃತ ದೇಹವು ಪತ್ತೆಯಾಗಿದೆ. ಬೆಳೆಗ್ಗೆ 6ಗಂಟೆಯಿಂದ ಶೋಧಕಾರ್ಯ ನಡೆಸಿದ್ದರು. ಹಾಲೇಶ್ ಕೂಡ್ಲಗಿಯ ಅಂಚೆ ಕಚೇರಿಯಲ್ಲ್ಲಿ ಪೋಸ್ಟ್‌ಮ್ಯಾನ್ ಆಗಿ ಹಾಲೇಶ್ ಕಾರ್ಯನಿರ್ವಹಿಸುತ್ತಿದ್ದರು,  ಹಾಗೂ ಖಾಸಗಿ ಶಾಲೆಯ ಶಿಕ್ಷಕನಾಗಿ ಚರಣ್ ಕಾರ್ಯ ನಿರ್ವಹಿಸುತ್ತಿದ್ದರು.  

ಘಟನೆಯ ವಿವಿರ: ಭಾನುವಾರ ಸಂಜೆ 7ಜನ ಸ್ನೇಹಿತರು ಮಾಲವಿ ಜಲಾಶಯಕ್ಕೆ ಬಂದಿದ್ದು, 4 ಜನ ನೀರಿನಲ್ಲಿ ಈಜಾಡಲು ಮುಂದಾಗಿದ್ದಾರೆ, ಇದರಲ್ಲಿ ಇಬ್ಬರು ನೀರಿನಿಂದಾಚೆಗೆ ಒಂದಿದ್ದು ಉಳಿದ ಹಾಲೇಶ್ ಹಾಗೂ ಚರಣ್ ಬಾರದೇ ನಾಪತ್ತೆಯಾಗಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸಿಪಿಐ ಮಂಜಣ್ಣ, ಪಿಎಸೈ ಸರಳ ಹಾಗೂ ಪೋಲೀಸ್ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದು ಸ್ಥಳೀಯ ಸಿಬ್ಬಂದಿಗಳಿಂದ ಶೋಧ ಕಾರ್ಯ ನಡೆಸಿದ್ದರು ಇರ್ವರು ಪತ್ತೆಯಾಗದಿದ್ದಾಗ ದಾವಣಗೇರೆಯ ನುರಿತ ಅಗ್ನಿಶಾಮಕ ಠಾಣೆಯ ಸಿಬ್ಬಂದಿಗಳ ಸಹಾಯದಿಂದ ಸೋಮವಾರ ಬೆಳೆಗ್ಗೆ  ಶೋಧ ಕಾರ್ಯ ನಡೆಸಿ ಜಲಾಶಯದಿಂದ ಇಬ್ಬರ ಶವಗಳನ್ನು ಹೊರ ತೆಗೆಯಲಾಯಿತು. ಪಟ್ಟಣದ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಕೈಗೊಳ್ಳಲಾಗಿದೆ ಎಂದು ಠಾಣೆಯ ಪಿಎಸೈ ಸರಳ ಅವರು ಪತ್ರಿಕೆಗೆ ತಿಳಿಸಿದ್ದಾರೆ. 

ಮೃತ ದೇಹಗಳ ಪತ್ತೆ ಮಾಡುವ ಕಾರ್ಯದಲ್ಲಿ ಪಟ್ಟಣದ ಪೋಲೀಸ್ ಠಾಣೆಯ ಸಿಬ್ಬಂದಿ ಮಲ್ಲೇಶ್ ನಾಯ್ಕ್‌, ರೇವಣ ಸಿದ್ದಪ್ಪ, ಹುಲುಗಪ್ಪ, ಆನಂದ, ಕೊಟ್ರೇಶ್, ಗುರುಬಸವರಾಜ ಹಾಗೂ ದಾವಣಗೇರೆಯ ಅಗ್ನಿಶಾಮಕ ಠಾಣೆಯ ಸಿಬ್ಬಂದಿಗಳಾದ ವೇಂಕಟೇಶ್, ನಾಗರಾಜ, ಧರಣೇಶ್, ಮಂಜುನಾಥ್ ಸೇರಿದಂತೆ ಇನ್ನಿತರರು ಇದ್ದರು. 


ಸುದ್ದಿ ಓದಿ