ಕ್ಯಾಂಟರ್- ಬೈಕ್ ನಡುವೆ ಭೀಕರ ಅಪಘಾತ: ಇಬ್ಬರು ಯುವಕರು ದಾರುಣ ಸಾವು
ಕೊಲ್ಹಾರ 24: ಕ್ಯಾಂಟರ್ ಹಾಗೂ ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿ ಇಬ್ಬರು ಯುವಕರು ದಾರುಣವಾಗಿ ಮೃತಪಟ್ಟ ಘಟನೆ ಸೋಮವಾರ ಸಂಜೆ ನಡೆದಿದೆ. ರಾಷ್ಟ್ರೀಯ ಹೆದ್ದಾರಿ 52 ಬೀಳಗಿ ಸಮೀಪದ ಬಾಡಗಂಡಿ ಹತ್ತಿರ ಧಾರವಾಡ ಮಿಶ್ರ ಪೇಡಾ ಸಾಗಿಸುತ್ತಿದ್ದ ಕ್ಯಾಂಟರ್ ಹಾಗೂ ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿ ಬೈಕಿನಲ್ಲಿದ್ದ ಕೊಲ್ಹಾರ ಪಟ್ಟಣ ಪಂಚಾಯಿತಿ ಅಧ್ಯಕ್ಷ ಚನ್ನಮಲ್ಲಪ್ಪ ಗಿಡ್ಡಪ್ಪಗೋಳ ಅವರ ತೃತೀಯ ಸುಪುತ್ರ ಗುರು ಗಿಡ್ಡಪ್ಪಗೋಳ (32) ಹಾಗೂ ಕಲ್ಲಪ್ಪ ಕಾಖಂಡಕಿ ಅವರ ಹಿರಿಯ ಸುಪುತ್ರ ಬಸವರಾಜ ಕಾಖಂಡಕಿ (27) ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದು ಘಟನಾ ಸ್ಥಳಕ್ಕೆ ಬೀಳಗಿ ಪೋಲಿಸರು ಭೇಟಿ ನೀಡಿ ಪರೀಶೀಲನೆ ನಡೆಸಿದರು.