ಈಜಲು ನದಿಗೆ ಹೋದ ಐವರಲ್ಲಿ ಇಬ್ಬರು ಬಾಲಕರು ನೀರು ಪಾಲು :ಮುಗಿಲಮುಟ್ಟಿದ ಕುಟುಂಬಸ್ಥರ ಆಕ್ರಂದನ
ಬೆಳಗಾವಿ : ಶಾಲೆಗಳಿಗೆ ಬೇಸಿಗೆ ರಜೆ ಬಿದ್ದ ಹಿನ್ನೆಲೆಯಲ್ಲಿ ಹಿಡಕಲ್ ಜಲಾಶಯದ ಹಿನ್ನೀರಿಗೆ ಇಜಲು ತೆರಳಿದ್ದ ಐವರು ಬಾಲಕರಲ್ಲಿ ಇಬ್ಬರು ನೀರು ಪಾಲಾಗಿರುವ ಘಟನೆ ಹುಕ್ಕೇರಿ ತಾಲೂಕಿನ ಹಳೆಗುಡನಟ್ಟಿ ಬಳಿ ಸೋಮವಾರ ಮಧ್ಯಾಹ್ನ ನಡೆದಿದ್ದು ಮಕ್ಕಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ.
ಈ ಘಟನೆಯಲ್ಲಿ ಕೃಷ್ಣಾ ವಿಠಲ ಖಾನಾಪೂರೆ (14) ಹಾಗೂ ಪ್ರಜ್ವಲ ಗೋಕಾರ (14) ಈ ಇಬ್ಬರು ಮೃತಪಟ್ಟ ದುರ್ಧೈವಿಗಳಾಗಿದ್ದಾರೆ. ಇವರಿಬ್ಬರು ದಾದಾಬಾನಟ್ಟಿಯ ಆರ್.ಸಿ ಸೆಂಟರ್ ಗ್ರಾಮದವರಾಗಿದ್ದಾರೆ.
ಶಾಲೆಗಳಿಗೆ ಬೇಸಿಗೆಯ ರಜೆ ಬಿದ್ದ ಹಿನ್ನೆಲೆಯಲ್ಲಿ ಆರ್.ಸಿ ಸೆಂಟರ್ ಗ್ರಾಮದ ಐವರು ಬಾಲಕರು ಹಳೇ ಗುಡನಟ್ಟಿ ಗ್ರಾಮದ ದೇವಸ್ಥಾನ ಬಳಿಯ ಹಿಡಕಲ್ ಜಲಾಶಯ ಹಿನ್ನೀರಿನಲ್ಲಿ ಈಜಲು ನದಿಗೆ ಇಳಿದಿದ್ದರು. ಈ ಐವರನ್ನು ಮೂವರು ಪ್ರಾಣಾಪಾಯದಿಂದ ಪಾರಾಗಿದ್ದು, ಇಬ್ಬರು ಜಲಸಮಾಧಿಯಾಗಿದ್ದಾರೆ.