ಸ್ವಾಮಿಜೀ ಪ್ರಯಾಣಿಸುತ್ತಿದ್ದ ಕಾರು ಅಪಘಾತದಲ್ಲಿ ಇಬ್ಬರು ಸಾವು : ಸ್ವಾಮಿಜಿ ಸೇರಿ ಇಬ್ಬರಿಗೆ ತೀವ್ರ ಗಾಯ
ಬೆಳಗಾವಿ : ರಸ್ತೆ ಅಪಘಾತ ಒಂದರಲ್ಲಿ ಸ್ವಾಮಿಜಿ ಒಬ್ಬರು ತೀವ್ರವಾಗಿ ಗಾಯಗೊಂಡಿದ್ದು, ಅವರ ಹಿಂಬಾಲಕಬ್ಬಿರು ಮೃತಪಟ್ಟಿರುವ ಘಟನೆ ಕಾಕತಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಇಂದು ನಡೆದಿದೆ.

ಪೂನಾ ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ಕಾಕತಿ ಗ್ರಾಮದ ಬಳಿಯಲ್ಲಿ ಈ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಈ ಘಟನೆಯಲ್ಲಿ ಇಬ್ಬರು ದುರ್ಮರಣಕೀಡಾಗಿದ್ದಾರೆ.
ಎರಡು ಲಾರಿ ಮತ್ತು ಒಂದು ಕಾರು ಮಧ್ಯೆ ಅಪಘಾತ ನಡೆದಿದೆ. ಮಾರುತಿ ಅಲ್ಟೋ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರ ಸ್ವಾಮಿಜಿಗಳು ಸ್ಥಳದಲ್ಲಿಯೇ ಸಾವೊನ್ನೊಪ್ಪಿದ್ದಾರೆ. ಅಲ್ಲದೆ ತಾಲೂಕಿನ
ಶಿವಾಪೂರ ಗ್ರಾಮದ ಮುಪ್ಪಿನ ಕಾಡಸಿದ್ದೇಶ್ವರ ಸ್ವಾಮೀಜಿ ಸೇರಿ ಇಬ್ಬರು ಗಂಭೀರ ಗಾಯಗೊಂಡಿದ್ದು, ಗಾಯಾಳುಗಳನ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ಭೇಟಿ ನೀಡಿದ ಕಾಕತಿ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.