ಇಬ್ಬರು ಅಂತರರಾಜ್ಯ ಕಳ್ಳರ ಬಂಧನ : 8.25 ಲಕ್ಷ ಮೌಲ್ಯದ 23 ದ್ವಿಚಕ್ರ ವಾಹನಗಳ ವಶಕ್ಕೆ : ಗೋಕಾಕ, ಅಂಕಲಗಿ ಪೊಲೀಸರ ಕಾರ್ಯಾಚರಣೆ
ಬೆಳಗಾವಿ : ಜಿಲ್ಲೆಯ ಗೋಕಾಕ ನಗರ ಹಾಗೂ ತಾಲೂಕಿನ ಅಂಕಲಗಿ ಪ್ರದೇಶದಲ್ಲಿ ನಡೆದಿದ್ದ ದ್ವಿಚಕ್ರವಾಹನಗಳ ಕಳ್ಳತನ ಪ್ರಕರಣವನ್ನು ಭೇದಿಸಿರುವ ಗೋಕಾಕ ಪೊಲೀಸರು ಇಬ್ಬರು ಅಂತರಾಜ್ಯ ಕಳ್ಳರನ್ನು ಬಂಧಿಸಿ, ಬಂಧಿತರಿAದ ಸುಮಾರು ೮.೨೫ ಲಕ್ಷ ಮೌಲ್ಯದ ೨೩ ದ್ವಿಚಕ್ರವಾಹನಗಳನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಮಹಾರಾಷ್ಟç ಕೊಲ್ಲಾಪೂರ ಜಿಲ್ಲೆಯ ಕಳಂಭ ಗ್ರಾಮದ ಸಂತೋಷ ರಾಮಚಂದ್ರ ನಿಶಾನೆ ಹಾಗೂ ಜಿಲ್ಲೆಯ ಗೋಕಾಕ ತಾಲೂಕಿನ ತೆಳಗಿನಟ್ಟಿ ಗ್ರಾಮದ ಭರಮಪ್ಪ ಯಲ್ಲಪ್ಪ ಕೊಪ್ಪದ ಈ ಇಬ್ಬರು ಈ ಕಳ್ಳತನ ಪ್ರಕರಣದಲ್ಲಿ ಬಂಧಿತರಾಗಿದ್ದಾರೆ. ಇತ್ತಿಚೆಗೆ ಗೋಕಾಕ ನಗರದ ಹಾಗೂ ಅಂಕಲಗಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮನೆಯ ಮುಂದೆ ಹಾಗೂ ರಸ್ತೆಯ ಬದಿಗೆ ನಿಲ್ಲಿಸಿದ ದ್ವಿಚಕ್ರ ವಾಹನಗಳ ಕಳ್ಳತನ ಪ್ರಕರಣಗಳು ಹೆಚ್ಚಾಗಿದ್ದು, ಈ ಕುರಿತು ಅಂಕಲಗಿ ಮತ್ತು ಗೋಕಾಕ ಶಹರ, ಹಾಗೂ ಗೋಕಾಕ ಗ್ರಾಮೀಣ ಪೊಲೀಸ ಠಾಣೆಗಳಲ್ಲಿ ಹಲವು ಪ್ರಕರಣಗಳು ದಾಖಲಾಗಿದ್ದವು. ಅಲ್ಲದೇ ದಿ. ೨೩ರಂದು ಕುಂದರಗಿ ಗ್ರಾಮದ ಶ್ರೀ ಲಕ್ಷಿö್ಮÃ ದೇವಸ್ಥಾನದ ಎದುರಿಗೆ ಇರುವ ಪಾಶ್ಚಾಪೂರ ಅಂಕಲಗಿ ರಸ್ತೆಯ ಬದಿಗೆ ನಿಲ್ಲಿಸಿದ ದ್ವಿಚಕ್ರ ವಾಹನಗಳ ಕಳ್ಳತನವಾದ ಬಗ್ಗೆ ಅಂಕಲಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಕಳುವಾದ ದ್ವಿಚಕ್ರ ವಾಹನಗಳ ಪತ್ತೆಗಾಗಿ ಬೆಳಗಾವಿ ಎಸ್.ಪಿ. ಡಾ. ಸಂಜೀವ ಪಾಟೀಲ ಅವರು ಗೋಕಾಕ ವೃತ್ತದ ಸಿಪಿಐ ಗೋಪಾಲ ಆರ್. ರಾಠೋಡ ನೇತೃತ್ವದಲ್ಲಿ ತಂಡವನ್ನು ರಚಿಸಿದ್ದರು. ಈ ತನಿಖಾ ತಂಡವು ಬೆಳಗಾವಿ ಹೆಚ್ಚುವರಿ ಎಸ್‌ಪಿ ಎಮ್.ವೇಣುಗೋಪಾಲ, ಗೋಕಾ ಡಿಎಸ್‌ಪಿ ಡಿ.ಎಚ್.ಮುಲ್ಲಾ ಇವರ ಮಾರ್ಗದರ್ಶನದಲ್ಲಿ ದ್ವಿಚಕ್ರ ವಾಹನಗಳ ಕಳ್ಳತನ ಪ್ರಕರಣಗಳ ತನಿಖೆ ನಡೆಸಿ ದಿ. ೨೪ರಂದು ಇಬ್ಬರು ಅಂತರರಾಜ್ಯ ಮೋಟಾರ್ ದ್ವಿಚಕ್ರ ವಾಹನಗಳ ಕಳ್ಳರನ್ನು ಬಂಧಿಸಿದ್ದಾರೆ.
ಮಹಾರಾಷ್ಟöçದ ಕೊಲ್ಲಾಪೂರ, ಕರವೀರ, ಇಂಚಲಕರAಜಿ, ಹಾಥಕಣಗಲಾ, ಹಾಗೂ ಕರ್ನಾಟಕದ ಬೆಳಗಾವಿ, ಗೋಕಾಕ, ಅಂಕಲಗಿ, ನಿಪ್ಪಾಣಿ, ಹುಕ್ಕೇರಿ, ಸಂಕೇಶ್ವರ, ಹಾಗೂ ವಿವಿದೆಡೆ ಕಳ್ಳತನವಾಗಿದ್ದ ಅಂದಾಜು ೮,೨೫,೦೦೦ ರೂ. ಮೌಲ್ಯದ ಒಟ್ಟು ೨೩ ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದುಕೊಂಡು ಯಶಸ್ವಿಯಾಗಿರುತ್ತಾರೆ.
ಅಂತರರಾಜ್ಯ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾದ ಗೋಕಾಕ ಸಿಪಿಐ ಗೋಪಾಲ ಆರ್. ರಾಠೋಡ, ಅಂಕಲಗಿ ಪಿ.ಎಸ್.ಐ ಎಚ್.ಡಿ.ಯರಝರ್ವಿ, ಗೋಕಾಕ ಶಹರ ಪಿಎಸ್‌ಐ ಎಮ್.ಡಿ.ಘೋರಿ ಹಾಗೂ ಗೋಕಾಕ ಗ್ರಾಮೀಣ ಪೊಲೀಸ ಠಾಣೆ ಕಿರಣಯ ಮೋಹಿತ ಮತ್ತು ಸಿಬ್ಬಂದಿ ಜನರಾದ ಬಿ.ವಿ.ನೇರ್ಲಿ, ವಿಠಲ ನಾಯಕ, ಡಿ.ಜಿ.ಕೊಣ್ಣೂರ, ಎಸ್.ವಿ.ಕಸ್ತೂರಿ, ಎಮ್.ಬಿ.ತಳವಾರ, ಎಸ್.ಎಚ್.ದೇವರ, ಎಸ್.ಬಿ.ಚಿಪ್ಪಲಕಟ್ಟಿ, ಎಸ್.ಬಿ.ಯಲ್ಲಪ್ಪಗೌಡರ, ಪಿ.ಕೆ.ಹೆಬ್ಬಾಳ, ಎಮ್.ಎಮ್.ಹಾಲೊಳ್ಳಿ, ಎ.ಆರ್.ಮಾಳಗಿ ಇವರ ಕಾರ್ಯವನ್ನು ಎಸ್.ಪಿ. ಡಾ. ಸಂಜೀವ ಪಾಟೀಲ ಅವರು ಮುಕ್ತ ಕಂಠದಿAದ ಶ್ಲಾಘಿಸಿರುತ್ತಾರೆ.