ಅಜ್ಞಾತ ವಾಹನ ಹಾಯ್ದು ಇಬ್ಬರು ರೈತರು ಸ್ಥಳದಲ್ಲಿ ಸಾವು : ಇನ್ನಿಬ್ಬರಿಗೆ ಗಂಭೀರ ಗಾಯ, ಜಮೀನಿಗೆ ಹೊರಟಿದ್ದ ರೈತರ ಮೇಲೆ ಜವರಾಯನ ವಕ್ರದೃಷ್ಠಿ

ಅಜ್ಞಾತ ವಾಹನ ಹಾಯ್ದು ಇಬ್ಬರು ರೈತರು ಸ್ಥಳದಲ್ಲಿ ಸಾವು : ಇನ್ನಿಬ್ಬರಿಗೆ ಗಂಭೀರ ಗಾಯ, ಜಮೀನಿಗೆ ಹೊರಟಿದ್ದ ರೈತರ ಮೇಲೆ ಜವರಾಯನ ವಕ್ರದೃಷ್ಠಿ

ಬೆಳಗಾವಿ : ಅಜ್ಞಾತ ವಾಹನವೊಂದು ಹರಿದು ಇಬ್ಬರು ರೈತರು ಮೃತಪಟ್ಟಿರುವ ದಾರುಣ ಘಟನೆ ಜಿಲ್ಲೆಯ ಖಾನಾಪೂರ ತಾಲೂಕಿನ ಗೋದೊಳ್ಳಿ ಗ್ರಾಮದ ಬಳಿ ಗುರುವಾರ ತಡರಾತ್ರಿ ಸಂಭವಿಸಿದೆ.

   ಈ ದುರ್ಘಟನೆಯಲ್ಲಿ ಗೋಧೋಳಿ ಗ್ರಾಮದ ಮಹಾಬಲೇಶ್ವರ ಶಿಂಧೆ(65), ಪುಂಡಲಿಕ್ ರೆಡೇಕರ (72 ) ಮೃತಪಟ್ಟ ದುರ್ಧೈವಿಗಳಾಗಿದ್ದಾರೆ. ಪುಂಡಲಿಕ್ ಅವರ ಹಿರಿಯ ಸಹೋದರ ಕೃಷ್ಣ ರೇಡೆಕರ (74) ತೀವ್ರವಾಗಿ ಗಾಯಗೊಂಡಿದ್ದು ಅವರನ್ನು ಬೆಳಗಾವಿ ಆಸ್ಪತ್ರೆಗೆ ದಾಖಲಾಗಿದ್ದಾರೆ. 

  ಇನ್ನೊರ್ವರಾದ ಮಂಜುನಾಥ (47) ಇವರು ಕೂಡಾ ಈ ದುರ್ಘಟನೆಯಲ್ಲಿ ಗಾಯಗೊಂಡಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.

    ಗೋದೊಳ್ಳಿ ಗ್ರಾಮದ ನಾಲ್ವರು ರೈತರು ತಮ್ಮ ಜಮೀನಿನಲ್ಲಿ ಬೆಳೆದಿದ್ದ ಕಬ್ಬಿಗೆ ನೀರು ಹಾಯಿಸಲು ಹೊರಟಿದ್ದರು. ಆ ಸಂದರ್ಭದಲ್ಲಿ ವಾಹನ ಇವರಿಗೆ ಡಿಕ್ಕಿ ಹೊಡೆದು ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಘಟನೆ ವಿವರ : ಈ ಬಗ್ಗೆ ಸಿಕ್ಕಿರುವ ಮಾಹಿತಿ ಏನೆಂದರೆ ಗೋಧೋಳಿ ಭಾಗದಲ್ಲಿ ಕರಡಿ ಸೇರಿದಂತೆ ಕಾಡುಪ್ರಾಣಿಗಳ ಓಡಾಟ ಹೆಚ್ಚಾಗಿದೆ. ಈ ಭಾಗದ ರೈತರಿಗೆ ರಾತ್ರಿ ವೇಳೆ ವಿದ್ಯುತ್ ಪೂರೈಕೆಗೆ ತೊಂದರೆಯಾಗಿದೆ.  ಹೀಗಾಗಿ ಈ ಭಾಗದ ರೈತರು ಒಂದೆಡೆ ಸೇರಿ ರಾತ್ರಿ ವೇಳೆ ಹೊಲಗಳಿಗೆ ಹೋಗುತ್ತಾರೆ.  

   ಅದೇ ರೀತಿ ಗುರುವಾರ ರಾತ್ರಿ ಐದಾರು ಜನ ರೈತರು ಒಂದೆಡೆ ಸೇರಿ ರಾತ್ರಿ 12 ಗಂಟೆ ಸುಮಾರಿಗೆ ಜಮೀನಿನಲ್ಲಿ ಬೋರ್ ವೆಲ್ ಪೈಪ್ ಬದಲಾಯಿಸಿ ಹುಬ್ಬಳ್ಳಿ-ಗೋವಾ ಹೆದ್ದಾರಿಯಲ್ಲಿ ರಸ್ತೆ ಬದಿ ಕುಳಿತು ವೀಳ್ಯದೆಲೆ ತಿನ್ನುತ್ತಿದ್ದಾಗ ಗೋವಾದಿಂದ ಹುಬ್ಬಳ್ಳಿ ಕಡೆಗೆ ಹೋಗುತ್ತಿದ್ದ ಅಪರಿಚಿತ ವಾಹನ ಇವರಿಗೆ ಡಿಕ್ಕಿ ಹೊಡೆದಿದೆ. 

   ಈ ಘಟನೆಯಲ್ಲಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಬೆಳಗಾವಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.  ಕೂಡಲೇ ಗ್ರಾಮದಲ್ಲಿ ಈ ಸುದ್ದಿ ಹಬ್ಬಿದ್ದು, ಘಟನೆ ಹಿನ್ನೆಲೆಯಲ್ಲಿ ಗ್ರಾಮಸ್ಥರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ.

   ರಾತ್ರಿ ಈ ಸುದ್ದಿ ತಿಳಿದ ಮಾಜಿ ಶಾಸಕ ಅರವಿಂದ ಪಾಟೀಲ ಸ್ಥಳಕ್ಕೆ ಭೇಟಿ ನೀಡಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಸೂಕ್ತ ಚಿಕಿತ್ಸೆ ನೀಡುವಂತೆ ಒತ್ತಾಯಿಸಿದರು.

ಸುದ್ದಿ ಓದಿ