ರೋಣ

ಯಲ್ಲಾಲಿಂಗೇಶ್ವರ ಮಠದಲ್ಲಿ ತುಲಾಭಾರ ಕಾರ್ಯಕ್ರಮ

ಯಲ್ಲಾಲಿಂಗೇಶ್ವರ ಮಠದಲ್ಲಿ ತುಲಾಭಾರ ಕಾರ್ಯಕ್ರಮ

ರೋಣ 23:  ಅಬ್ಬಿಗೇರಿ ಗ್ರಾಮದಲ್ಲಿ ಯಲ್ಲಾಲಿಂಗೇಶ್ವರ ಮಠದಲ್ಲಿ ತುಲಾಭಾರ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ  ಬಸವರಾಜ ಶರಣರ ಹಿರೇಮಠ ತುಲಾಭಾರ ಕಾರ್ಯಕ್ರಮ ನಡೆಯಿತು.ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಅಭಿನವ ನಾಗಲಿಂಗ ಮಹಾಸ್ವಾಮಿಗಳು ಸಾನಿಧ್ಯ ವಹಿಸಿದ್ದರು. ಅಪ್ಪಯ್ಯ ಮಹಾಸ್ವಾಮಿಗಳು ಅಧ್ಯಕ್ಷತೆ ವಹಿಸಿದ್ದರು,ಯಲ್ಲಾಲಿಂಗೇಶ್ವರ ಮಠದ ಸ್ವಾಮಿಗಳು ಹಿರೇಮಠ ವಹಿಸಿದರು. ಶರಣಬಸವೇಶ್ವರ ಸ್ವಾಮಿಗಳು ಗಜೇಂದ್ರಗಡ, ಇಮಾಮಸಾಬ  ಉದ್ಘಾಟಕರಾಗಿ,ಮೀಥುನ ಜಿ. ಪಾಟೀಲ ಪುರಸಭೆ ಉಪಾಧ್ಯಕ್ಷರು ನೇರವೇರಿಸಿದರು.   

ಮುಖ್ಯ ಅತಿಥಿಗಳಾಗಿ ಬಸವಂತಪ್ಪ ಎಚ್ ತಳವಾರ ಮಾಜಿ ಅಧ್ಯಕ್ಷರು ಗದಗ ಜಿಲ್ಲಾ ಬಿಜೆಪಿ ಎಸ್‌.ಟಿ. ಮೋರ್ಚಾ ಹಾಗೂ ರೋಣ ತಾಲೂಕ ಮಹರ್ಷಿ ವಾಲ್ಮೀಕಿ ನಾಯಕ ಸಂಘದ ಅಧ್ಯಕ್ಷರು ವಹಿಸಿದ್ದರು. ಬಸವರಾಜ ಮಲ್ಲಾಪೂರ, ಡಿ.ಎ. ಉಪಾಧ್ಯ,ವಿ.ಎಸ್‌. ಹಿರೇಮಠ, ಅನ್ನಪ್ಪಗೌಡ ದೇಸಾಯಿ,ರೇಣುಕಾ ವೀರಾಪೂರ,ಗ್ರಾಮ ಪಂಚಾಯತ ಅಧ್ಯಕ್ಷರು, ಶಿವಾನಂದ ಹಿರೇಮಠ,ಎಫ್‌.ಐ. ಕುರಿ, ಅಭಿಷೇಕ ನವಲಗುಂದ,ಎಸ್‌.ಎಸ್‌.ರಡ್ಡೇರ, ಈ ಸಭೆಗೆ ಗ್ರಾಮದ ಗುರು-ಹಿರಿಯರು ಸರ್ವ ಪಂಚಾಯತ ಸದಸ್ಯರು ಉಪಾಧ್ಯಕ್ಷರು, ಯುವಕರು ಮಹಿಳೆಯರು ಸಭೆಯಲ್ಲಿ ಇದ್ದರು. ಈ ಕಾರ್ಯಕ್ರವನ್ನುದ್ದೇಶಿಸಿ ಮೀಥುನ ಜಿ. ಪಾಟೀಲ ಮಾತನಾಡಿ ಬಸವರಾಜ ಹಿರೇಮಠ ಅವರ ಪ್ರಥಮವಾಗಿ ಅವರ ತುಲಾಬಾರವು ಮಲ್ಲಿಕಾರ್ಜುನ ಶಿಂಧೆ ಯವರು ನೇರೆವೇರಿಸಿದ್ದಾರೆ.ಅವರೆಲ್ಲರಿಗೂ ದೇವರು ಒಳ್ಳೆಯದು ಮಾಡಲಿ ಈ ಮಠಕ್ಕೆ ಪ್ರ-ಪ್ರಥಮ ಬಾರಿಗೆ ಕಾರ್ಯಕ್ರಮಕ್ಕೆ ಬಂದಿರುವುದಾಗಿ, ಯಾವುದೇ ಧಾರ್ಮಿಕ ಕಾರ್ಯಕ್ರಮಗಳು ನಡೆಯಬೇಕಾದರೆ ಎಲ್ಲರೂ ಕೂಡಿಕೊಂಡು ಕಾರ್ಯಕ್ರಮ ಮಾಡಿದರೆ ಯಶಸ್ವಿಯಾಗುತ್ತದೆ ಎಂದು ಹೇಳಿದರು. ಬಸವಂತಪ್ಪ ಎಚ್ ತಳವಾರ ಮಾತನಾಡಿ ಯಲ್ಲಾಲಿಂಗೇಶ್ವರ ಮಠದಲ್ಲಿ ಬಸವರಾಜ ಹಿರೇಮಠ ರವರ ತುಲಾಬಾರ ನಡೆದಿರುವುದು ನಮಗೆಲ್ಲ ಬಹಳ ಸಂತೋಷವಾಗಿದೆ. ಯಾವುದೇ ಧಾರ್ಮಿಕ ಕಾರ್ಯಕ್ರಮಗಳು ನಡೆಯಬೇಕಾದರೆ ಎಲ್ಲರನ್ನು ಸೇರಿಸಿಕೊಂಡು ಕಾರ್ಯಕ್ರಮವನ್ನು ಯಶಸ್ವಿಯಾಗಿ ಮಾಡಬೇಕಾಗುತ್ತದೆ.ಅದರಂತೆ ಯಲ್ಲಾಲಿಂಗೇಶ್ವರ ಮಠಕ್ಕೆ ಈ ಮೊದಲು ನಾನು ಸಾಕಷ್ಟು ಕಾರ್ಯಕ್ರಮಕ್ಕೆ ಬಂದಿದ್ದೇನೆ. ಈ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಲಿ ಯಾವುದೇ ಧಾರ್ಮಿಕ ಕಾರ್ಯಕ್ರಮ ನಡೆಯಬೇಕಾದರೆ ಧಾನ-ಧರ್ಮವನ್ನು ಮಾಡಬೇಕು ಸಾಕಷ್ಟು ಜನ ಶ್ರೀಮಂತರು ಹಣವನ್ನು ಗಳಿಸಿರುತ್ತಾರೆ,ಅವರು ಧಾನ ಮಾಡುವದು ಆಗುವದಿಲ್ಲ.ಅವರ  ಹಣವು ಯಾವದೋ ಒಂದು ರೀತಿಯಲ್ಲಿ ವ್ಯರ್ಥವಾಗಿ  ಹೋಗುತ್ತದೆ ಅದು ಅವರಿಗೆ ಗೊತ್ತಾಗುವದಿಲ್ಲ. ಆದ್ದರಿಂದ ಯಾವುದೇ ಕಾರ್ಯಕ್ರಮ ನಡೆಯಲಿ ಧಾನ-ಧರ್ಮ ಮಾಡಬೇಕು ಈ ಧಾನ-ಧರ್ಮದಿಂದ ಕಡುಬಡವರಿಗೆ ಸಹಾಯ ಮಾಡಿದರೆ ಮನಸ್ಸಿಗೆ ಶಾಂತಿ ಸಿಗುತ್ತದೆ ಎಂದು ಯುವಕರಿಗೆ ಕರೆ ನೀಡಿದರು.     

ಈ ತುಲಾಬಾರವು ಮಲ್ಲಿಕಾರ್ಜುನ ಶಿಂಧೆಯವರು ಯಶಸ್ವಿಯಾಗಿ ಮಾಡಿದ್ದಾರೆ ಅವರಿಗೆ ದೇವರು ಒಳ್ಳೆಯದು ಮಾಡಲಿ ಸಿರಿ ಸಂಪತ್ತು ಕೊಟ್ಟು ಅವರನ್ನ ಕಾಪಾಡಲಿ ಎಂದು ದೇವರಲ್ಲಿ ಬೇಡಿಕೊಳ್ಳುತ್ತೇನೆ,ಯಾವುದೇ ಕಾರ್ಯಕ್ರಮವಾಗಲಿ ಎಲ್ಲರೂ ಕೂಡಿಕೊಂಡು ಒಗ್ಗಟ್ಟಿನಿಂದ ಕಾರ್ಯಕ್ರಮವನ್ನು ಯಶಸ್ವಿಯಾಗಿ ಮಾಡಬೇಕು ಎಂದು ಯುವಕರಿಗೆ ಕರೆ ನೀಡಿದರು.   ದಿವ್ಯ ಸಾನಿಧ್ಯ ವಹಿಸಿದ ಅಭಿನವ ಮಹಾ ಸ್ವಾಮಿಗಳು ಆಶೀರ್ವಚನ ನೀಡಿದರು ಈ ತುಲಾಬಾರವು ಕಾರ್ಯಕ್ರಮವು ಯಶಸ್ವಿಯಾಗಿ ಮಾಡಿದ್ದೀರಿ ತುಲಾಬಾರ ಮಾಡಿದ ಗಣ್ಯ ವ್ಯಕ್ತಿಗಳಿಗೆ ದೇವರು ಒಳ್ಳೆಯದು ಮಾಡಲಿ ಎಂದು ಆರ್ಶೀವಾದ ಮಾಡಿದರು. ಶರಣ ಬಸವೇಶ್ವರ ಮಹಾಸ್ವಾಮಿಗಳು ಗಜೇಂದ್ರಗಡ ಆರ್ಶಿವಾದ ಮಾಡಿದರು. ಯಾವುದೇ ವ್ಯಕ್ತಿ ಧಾನ-ಧರ್ಮದಿಂದ ಮಾಡಿದರೆ ದೇವರು ಅವರಿಗೆ ಒಳ್ಳೆ ಕೆಲಸಗಳನ್ನು ಮಾಡುತ್ತಾನೆ. ತುಲಾಭಾರದಲ್ಲಿ ಮಾಡಿದ ವ್ಯಕ್ತಿಗಳಿಗೆ ಅವರಿಗೆ ದೇವರು ಒಳ್ಳೆಯದು ಮಾಡಲಿ ಎಂದು ಶುಭ ಹಾರೈಸಿದರು. ಬಸವರಾಜ ಹಿರೇಮಠ ತುಲಾಬಾರ ಸ್ವೀಕರಿಸಿದ ನಂತರ ಅವರು ಮಾತನಾಡಿ ಮಲ್ಲಿಕಾರ್ಜುನ ಶಿಂಧೆಯವರು ತುಲಾಬಾರವನ್ನು ಮಾಡಿದ್ದಾರೆ ದೇವರು ಅವರಿಗೆ ದೇವರು ಒಳ್ಳೆಯದು ಮಾಡಲಿ ಈ ಕಾರ್ಯಕ್ರಮದಲ್ಲಿ ಬಂದ ಎಲ್ಲ ಗಣ್ಯ ಮಾನ್ಯರು ನಮ್ಮ ಕಾರ್ಯಕ್ರಮ ಯಶಸ್ವಿಯಾಗಿ ಮಾಡಿದ್ದೀರಿ. ನಿಮಗೆಲ್ಲರಿಗೂ ದೇವರು ಆಶೀರ್ವಾದ ಮಾಡಲಿ ಎಂದು ದೇವರಲ್ಲಿ ಬೇಡಿಕೊಳ್ಳುವುದಾಗಿ, ಈ ಕಾರ್ಯಕ್ರಮದ ನಿರೂಪಣೆಯನ್ನು ಬಸವರಾಜ ಪಲ್ಲೇದವರು ನಡೆಸಿಕೊಟ್ಟರು ವಂದನಾರೆ​‍್ನಯೊಂದಿಗೆ ಕಾರ್ಯಕ್ರಮ ಮುಕ್ತಾಯ ಗೊಳಿಸಿದರು. 


ಸುದ್ದಿ ಓದಿ