ಆದಿ ಬಣಜಿಗ ಸಮಾಜದ ಸಾಧಕರಿಗೆ ಸನ್ಮಾನ
ಆದಿ ಬಣಜಿಗ ಸಮಾಜದ ಸಾಧಕರಿಗೆ ಸನ್ಮಾನ
ಕಲಬುರಗಿ 08 : ಜಿಲ್ಲಾ ಆದಿಬಣಜಿಗ ಸಮಾಜದ ವತಿಯಿಂದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಆದಿಬಣಜಿಗ ಸಮಾಜದ ಸಾಧಕರಿಗೆ ಹಾಗೂ ಗಣ್ಯರಿಗೆ ನಗರದಜಗತ್ ಮೈಲಾರಲಿಂಗೇಶ್ವರ ದೇವಸ್ಥಾನದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ರಾಜ್ಯ ಸರ್ಕಾರದ ಪ್ರತಿಷ್ಠಿತ "ಸಹಕಾರರತ್ನ" ಪ್ರಶಸ್ತಿ ಪುರಸ್ಕೃತರಾದ ಕಲಬುರಗಿ-ಯಾದಗಿರಿ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಸೋಮಶೇಖರ್‌ಗೋನಾಯಕ, ರಾಜ್ಯಗುತ್ತಿಗೆದಾರ ಸಂಘದ ಪ್ರಭಾರಿ ಅಧ್ಯಕ್ಷರಾದ ಜಗನ್ನಾಥ್ ಶೇಗಜಿ, ಕಲಬುರಗಿ ಕೇಂದ್ರಕಾರಾಗೃಹದ ಸಂದರ್ಶಕರ ಮಂಡಳಿ ನೂತನ ಸದಸ್ಯರಾದಕರುಣಾದೇವಿ ಶಾಮರಾಯಗೌಡ ಪಾಟೀಲ್, ಗುಲಬರ್ಗಾ ನ್ಯಾಯವಾದಿಗಳ ಸಂಘದ ಅಧ್ಯಕ್ಷರಾದ ಗುಪ್ತಲಿಂಗ ಪಾಟೀಲ್ ಹಾಗೂ ರಾಜ್ಯ ಅತ್ಯುತ್ತಮ ಕನ್ನಡ ಶಾಲೆ ಪ್ರಶಸ್ತಿ ಪುರಸ್ಕೃತ ಶಾಲೆಯ ಲಕ್ಹ್ಮೀಪುತ್ರರಾಂಪೂರೆ ಝಳಕಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಇದೆ ಸಂಧರ್ಭದಲ್ಲಿ ಸಮಾಜದಜಿಲ್ಲಾ ಹಾಗೂ ತಾಲೂಕು ಘಟಕದ ನೂತನ ಪದಾಧಿಕಾರಿಗಳಿಗೂ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಸಮಾಜದ ಹಿರಿಯ ಮುಖಂಡರಾದ ಬಸವರಾಜ ಜಿ. ಕೊನೆಕ, ಸೋಮಶೇಖರ್ ಟೆಂಗಳಿ, ಸಮಾಜದ ಜಿಲ್ಲಾ ಅಧ್ಯಕ್ಷರಾದ ಶಿವಪುತ್ರ್ಪ ಬರುಡೆ, ಉಪಾಧ್ಯಕ್ಷರಾದ ಶಿವಪುತ್ರ್ಪ ಮುನ್ನಳಿ, ಅಮೃತಗೌಡ ಪಾಟೀಲ್ ಕೊಳಕೂರ್, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ರಾಜೇಂದ್ರಕರೆಕಲ್, ರಾಜು ನವಲ್ದಿ, ಮಹಾದೇವಪ್ಪ ಪಾಟೀಲ್‌ತಂಬಾಕವಾಡಿ, ಪ್ರಕಾಶ್ ಪಾಟೀಲ್ ಹಿರಾಪುರ, ಶಿವಪುತ್ರ್ಪ ಮೇಗಪ್ಪಗೊಳ್ಳ, ಶಾಂತಕುಮಾರ್ ದುಧನಿ, ಅಣ್ಣಾರಾವ ಬಿರಾದಾರ, ಶಾಂತಪ್ಪ ಪಾಟೀಲ್, ಶರಣಬಸಪ್ಪಚಿಕ್ಕಲಿ, ಬಸವರಾಜ ನೆಲ್ಲೂರ್, ಶಿವರಾಜ ಕೋಟನೂರ್, ನಂದಿಕೂರಗ್ರಾಪಂ ಮಾಜಿಅಧ್ಯಕ್ಷ ಶಾಮರಾವ್ ಪಾಟೀಲ್, ನಿವೃತ್ತಜೈಲರ್ ಬಸವರಾಜ್ ಜಿ. ಪಾಟೀಲ್, ವಿರೇಶ್ ಪಾಟೀಲ್ ಉಪಳಾಂವ, ಮಾಜಿಕುಡಾ ಆಯುಕ್ತ ದಯಾನಂದ ಪಾಟೀಲ್, ರೈತ ಮುಖಂಡದಯಾನಂದ್ ಪಾಟೀಲ್, ರಾಜಕುಮಾರ್‌ಉದನೂರ, ರವಿ ದೇಗಾಂವ, ಗುಂಡೆರಾವ್ ಪದ್ಮಾಜಿ, ಚಂದ್ರು ಬೆಳಮಗಿ, ಮಹಿಳಾ ಅಭಿವೃದ್ಧಿ ನಿಗಮದ ಮಾಜಿಅಧ್ಯಕ್ಷರಾದ ಶಶಿಕಲಾ ಟೆಂಗಳಿ, ವಿಜಯಲಕ್ಹ್ಮೀ ಪಾಟೀಲ್ ಸೇರಿದಂತೆಅನೇಕರುಇದ್ದರು.