ಶಿಗ್ಗಾವ್

ಸಿ ಬಿ ಯಲಿಗಾರ ಸೇವಾ ಸಂಸ್ಥೆಯ ಅಧ್ಯಕ್ಷ ಶಶಿಧರ್ ಯಲಿಗಾರವರಿಗೆ ಸನ್ಮಾನ

ಸಿ ಬಿ ಯಲಿಗಾರ ಸೇವಾ ಸಂಸ್ಥೆಯ ಅಧ್ಯಕ್ಷ ಶಶಿಧರ್ ಯಲಿಗಾರವರಿಗೆ ಸನ್ಮಾನ

ಲೋಕದರ್ಶನ ವರದಿ

ಶಿಗ್ಗಾವಿ 02: ಪಟ್ಟಣದ ತಾಲೂಕ ಕ್ರೀಡಾಂಗಣದಲ್ಲಿ ತಾಲೂಕ ಆಡಳಿತದ ವತಿಯಿಂದ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕಾರ್ಯಕ್ರಮಕ್ಕೆ ಬಂದವರಿಗೆ ಉಪಹಾರದ ಜೊತೆಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ ಸಿ ಬಿ ಯಲಿಗಾರ ಸೇವಾ ಸಂಸ್ಥೆಯ ಅಧ್ಯಕ್ಷ ಶಶಿಧರ ಯಲಿಗಾರ ಅವರಿಗೆ ದಲಿತ ಸಂಘಟನೆ ಸೇರಿದಂತೆ ವಿವಿಧ ಸಂಘಟನೆಯ ಪದಾಧಿಕಾರಿಗಳು ಸನ್ಮಾನಿಸಿ ಗೌರವಿಸಿದರು.

 ಪುರಸಭೆ ಸದಸ್ಯ ಸುಭಾಷ್ ಚೌವಾಣ ಮುಖಂಡರುಗಳಾದ ಅಶೋಕ ಕಾಳೆ, ಸುರೇಶಣ್ಣ ಹರಿಜನ, ಪರುಶುರಾಮ ಇಳಗೇರ,  ಗೌಸ್ ಅಗಸನಮಟ್ಟಿ, ಕುಶಾಲ್ ಕಾಳೆ, ಫಕೀರಪ್ಪ ಕುಂದೂರ, ಮಜೀದ್ ಮಾಳಗಿಮನಿ, ಸೇರಿದಂತೆ ಇತರರು ಉಪಸ್ಥಿತರಿದ್ದರು. 

ಸುದ್ದಿ ಓದಿ