ಪವರ್ ಸ್ಟಾರ್ ಪುನೀತ್ಗೆ ಗೀತೆಗಳ ನುಡಿನಮನ
ಮಹಾಲಿಂಗಪುರ 13: ಇತ್ತೀಚೆಗೆ ಪಟ್ಟಣದ ಗಾಂಧಿ ಕ್ರೀಡಾಂಗಣದಲ್ಲಿ, ದಿವಂಗತ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಸ್ಮರಣೆಯಲ್ಲಿ ಜರುಗಿದ, ಅಪ್ಪು ನಟನೆಯ ಚಲನಚಿತ್ರ ಗೀತೆಗಳ ನುಡಿನಮನ ಕಾರ್ಯಕ್ರಮದ ವೇದಿಕೆಯ ಮೇಲೆ, ಒಂದು ಹಾಡಿನ ಮುಕ್ತಾಯದ ಒಳಗೆ ಅಂದರೆ ಕೇವಲ ಮೂರೇ ನಿಮಿಷಗಳಲ್ಲಿ, ಅಪ್ಪು ಅವರ ಭಾವಚಿತ್ರವನ್ನು ತಮ್ಮ ಕಲಾ ಕೈಚಳಕದಲ್ಲಿ ಅಂತರಾಷ್ಟ್ರೀಯ ಖ್ಯಾತಿ ಹೊಂದಿರುವ ಡಿ.ಕೆ. ರಂಗನಾಥ್ ಅವರು ಮೂಡಿಸಿ ಜನರ ಮನಸ್ಸನ್ನು ಸೂರೆಗೊಂಡು, ದಿವಂಗತರಿಗೆ ತಮ್ಮ ಮೂಲಕವೂ ಶ್ರದ್ಧಾಂಜಲಿಯನ್ನು ಅರ್ಿಸಿದರು.