ಹಗರಿಬೊಮ್ಮನಹಳ್ಳಿ

ಪಾರದರ್ಶಕ ಆಡಳಿತ, ಭ್ರಷ್ಟಚಾರ ಮುಕ್ತ ಆಡಳಿತ ಎಎಪಿಯ ಪ್ರಮುಖ ಸಂಕಲ್ಪ; ಡಾ. ಹನುಮಂತಪ್ಪ

ಪಾರದರ್ಶಕ ಆಡಳಿತ, ಭ್ರಷ್ಟಚಾರ ಮುಕ್ತ ಆಡಳಿತ ಎಎಪಿಯ ಪ್ರಮುಖ ಸಂಕಲ್ಪ; ಡಾ. ಹನುಮಂತಪ್ಪ

ಹಗರಿಬೊಮ್ಮನಹಳ್ಳಿ 24: ಪಾರದರ್ಶಕತೆ ಹಾಗೂ ಭ್ರಷ್ಟಾಚಾರ ಮುಕ್ತ ಆಡಳಿತ ನೀಡುವುದು ಎಎಪಿ ಪಕ್ಷದ ಪ್ರಮುಖ ನಿಲುವು ಹಾಗೂ ಸಂಕಲ್ಪ ಆಗಿದೆ ಎಂದು ಹರಿಬೊಮ್ಮನಹಳ್ಳಿ ಕ್ಷೇತ್ರದ ಆಮ್‌ಆದ್ಮಿ ಪಾರ್ಟಿಯ ಸಂಭವನೀಯ ಅಭ್ಯರ್ಥಿ ಡಾ. ವಿ.ಎಚ್‌.ಹನುಮಂತಪ್ಪ ಹೇಳಿದರು. 

ನಗರದ ಬಸವೇಶ್ವರ ಸರ್ಕಲ್‌ನಲ್ಲಿ ಎಎಪಿ ಪಕ್ಷದ ಸದಸ್ಯತ್ವ ನೊಂದಣಿ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿ ಕ್ಷೇತ್ರದಲ್ಲಿ ಪಕ್ಷಕ್ಕೆ ಸೇರುವವರಿಗೆ ಸದಸ್ಯತ್ವ ನೊಂದಣಿ ಅಭಿಯಾನ ಶರುಮಾಡಿದ್ದು, ಪ್ರಸ್ತುತ ಕ್ಷೇತ್ರದಲ್ಲಿನ 40 ಗ್ರಾಮಗಳಲ್ಲಿ ನೊಂದಣಿ ಮಾಡಲಾಗಿದೆ. ಹಣ ಬಲದಿಂದ ರಾಜಕೀಯ ಮಾಡುವುದಲ್ಲ, ಸರ್ವತೋಮುಖ ಅಭಿವೃಧ್ಧಿಗೆ ಸಜ್ಜನ ಪ್ರಮಾಣಿಕ ವ್ಯೆಕ್ತಿಗಳ ಅವಶ್ಯಕತೆ ಇದೆ, ಇಡೀ ರಾಜ್ಯದಲ್ಲಿ ಉತ್ತಮ ಆಡಳಿತ ಯಂತ್ರ ರೂಪಿಸಿ ರೈತಪರ, ಜನಪರ ಆಡಳಿತ ನಡೆಸುವ ಸಲುವಾಗಿ ಎಎಪಿ ಪಕ್ಷಕ್ಕೆ ಸೇರೆ​‍್ಡಗೊಂಡು ಉತ್ತಮ ಆಡಳಿತ ನೀಡುವಲ್ಲಿ ಸಫಲತೆ ಕಾಣುವುದಾಗಿದೆ, ಎಎಪಿ ಪಕ್ಷವು  ಮಿಸ್ಡ್‌ಕಾಲ್ ಜೊತೆಗೆ ಪಕ್ಷದ ತತ್ವ ಸಿದ್ದಾಂತಗಳನ್ನು ತಿಳಿಸಿ ನೊಂದಣಿಯನ್ನು ಮಾಡಲಾಗುವುದು. ತುಂಗಭದ್ರೆ ಸನಿಹವಿದ್ದರೂ ಕುಡಿಯುವ ನೀರಿಗೆ ಪರದಾಡುವುದನ್ನು ತಪ್ಪಿಸುವ ವೈಜ್ಞಾನಿಕ ರೂಪರೇಷಗಳನ್ನು ತಯಾರಿಸಿ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವಲ್ಲಿ ಸತತ ಹಾಗೂ ಪ್ರಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು. 

ಆಮ್‌ಆದ್ಮಿ ಪಾರ್ಟಿಯ ವಲಯ ಪ್ರಭಾರಿ ರುದ್ರಯ್ಯ ನವಲಿ ಹಿರೇಮಠ ಮಾತನಾಡಿ ಪಕ್ಷದಲ್ಲಿ ವಿದ್ಯಾವಂತರು ಇದ್ದು, ಅಭಿಯಾನ ಮಡುವ ಮೂಲಕ ಪಕ್ಷದ ಉದ್ದೇಶಗಳನ್ನು ಜನರಿಗೆ ತಿಳಿಸಲಾಗುವುದು, ಇಂದಿನ ದಿನಗಳಲ್ಲಿ ಪಕ್ಷಕ್ಕೆ ಎಲ್ಲೆಡೆಯಿಂದಲೂ ಅಭೂತಪೂರ್ವ ಅಭಿನಂದನೆಗಳು ಲಭಿಸುತ್ತಿದ್ದು ಉತ್ತಮ ಶಿಕ್ಷಣ, ಉತ್ತಮ ಚಿಕಿತ್ಸೆ, ಮನೆ ಬಾಗಿಲಿಗೆ ಸೇವೆಗಳು, ವಿಶ್ವದರ್ಜೆಯ ಆಸ್ಪತ್ರೆಗಳ ವಿಷಯದಲ್ಲಿ ವಿಶೇಷ ಆಸಕ್ತಿ ಹೊಂದಿದ್ದು ಸಮಗ್ರ ಅಭಿವೃಧ್ದಿ ಪಕ್ಷದ ಅಜಂಡವಾಗಿದೆ ಎಂದು ತಿಳಿಸಿದರು. 

ಆಮ್‌ಆದ್ಮಿ ಪಾರ್ಟಿಯ ಜಿಲ್ಲಾಧ್ಯಕ್ಷ ಕಾಳಿದಾಸ ಮಾತನಾಡಿ ರೈತರ ಪಂಪ್‌ಸೆಟ್‌ಗಳಿಗೆ ಮೀಟರ್ ಅಳವಡಿಕೆ ಮಾಡಲು ಬಿಡುವುದಿಲ್ಲ. ಮೀಟರ್ ಅಳವಡಿಸಲು ಬಂದರೆ ಅಂತಹ ಅಧಿಕಾರಿಗಳನ್ನು ಕಟ್ಟಿಹಾಕುತ್ತೇವೆ. ದೆಹಲಿ ಹಾಗೂ ಪಂಜಾಬ್ ರಾಜ್ಯದಲ್ಲಿ ಪಕ್ಷ ಆಡಳಿತಕ್ಕೆ ಬಂದಿದ್ದು, ಉತ್ತಮ ಆಡಳಿತ ನಿರ್ವಹಿಸುತ್ತಿದೆ. ಕೇಂದ್ರ ಸರಕಾರ ರೈತವಿರೋಧಿ ದೋರಣೆಗಳನ್ನು ಅನುಸರಿಸುತ್ತಿದೆ ಎಂದು ಕಿಡಿಕಾರಿದರು.  

ಈ ಸಂದರ್ಭದಲ್ಲಿ ಮರಿಯಮ್ಮನಹಳ್ಳಿ ರೇವಣ್ಣ, ತಾಲೂಕು ಸಂಚಾಲಕ ರಾಜೇಶ್, ಕಾಳಮ್ಮ, ಹಾಲಪ್ಪ, ವಿ.ಬಿ.ಮಲ್ಲಪ್ಪ, ನಾಗಶೆಟ್ಟಿ ಪತ್ರೆಪ್ಪ, ಪಿ.ಎಂ.ಶಶಿಧರ, ಮದೀನ್ ಇತರರಿದ್ದರು. 


ಸುದ್ದಿ ಓದಿ