ವಿವಿಧ ಅಭಿವೃದ್ಧಿ ನಿಗಮಗಳ ಫಲಾನುಭವಿಗಳ ಪಾರದರ್ಶಕವಾಗಿ ಆಯ್ಕೆ: ನಾಡಗೌಡ
ಮುದ್ದೇಬಿಹಾಳ 12: ನಿಜವಾದ ಕಡುಬಡವರಿಗಾಗಿ ವಿವಿಧ ರೀತಿಯ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ ಈ ಹಿನ್ನೆಲೆ ಯಾವೂದೇ ಮಧ್ಯವರ್ತಿಗಳ ಮತ್ತು ಕಮೀಷನ್ ಪಡೆಯುವ ದಲ್ಲಾಳಿಗಳನ್ನು ತಪ್ಪಿಸಲು ಸರ್ಕಾರದ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ಸಮರ್ಕ ತಲುಪಿಸುವ ಉದ್ದೇಶದಿಂದ ಈ ಬಾರಿ ಚೀಟಿ ಎತ್ತಿ ಲಾಟರಿ ಮೂಲಕ ಪಾರದರ್ಶಕವಾಗಿ ಫಲಾನುಭವಿಗಳನ್ನು ಆಯ್ಕೆ ಮಾಡುವುದು ಇದರ ಮುಖ್ಯ ಉದ್ದೇಶವಾಗಿದೆ ಎಂದು ಶಾಸಕ ಸಿ.ಎಸ್.ನಾಡಗೌಡ(ಅಪ್ಪಾಜಿ) ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸಾಯಂಕಾಲ ವಿವಿಧ ಅಭಿವೃದ್ಧಿ ನಿಗಮಗಳ ಫಲಾನುಭವಿಗಳನ್ನು ಸಂಬಂಧಪಟ್ಟ ಆಯಾ ನಿಗಮಗಳ ಅಧಿಕಾರಿಗಳು, ಫಲಾನುಭವಿಗಳು, ಕಾಂಗ್ರೆಸ್ ಮುಖಂಡರ, ಸಮ್ಮುಖದಲ್ಲ್ಲಿ ಚೀಟಿ ಎತ್ತಿಸಿ ಲಾಟರಿ ಮೂಲಕ ಆಯ್ಕೆ ಮಾಡಿದ ಅವರು ಈಗಾಗಲೇ ಈ ಹಿಂದೆ ಸಾಕಷ್ಟು ವಿವಿಧ ಅಭಿವೃದ್ಧಿ ನಿಗಮಗಳಲ್ಲಿ ಗುರಿಗಿಂತ ಕಡಿಮೆ ಅರ್ಜಿಗಳು ಇರುತ್ತಿದ್ದವು ಹಾಗಾಗಿ ನಮ್ಮನಮ್ಮ ಕಾರ್ಯಕತೃಇಗೆ ಮುಖಂಡರನ್ನು ಗುರ್ತಿಸಿ ಆಯ್ಕೆ ಮಾಡುತ್ತಿತ್ತು ಜೊತೆಗೆ ಅರ್ಹ ಫಲಾನುಭವಿಗಳನ್ನು ಅವರವರ ಅನುಕೂಲಕ್ಕೆ ತಕ್ಕಂತೆ ಆಯ್ಕೆ ಮಾಡುತ್ತಿರುವುದರಿಂದ ಪಾರದರ್ಶಕವಾಗಿ ನೋಡಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ.
ಸಧ್ಯ ಸರಕಾರದ ಗುರಿ ಒಂದೋ ಎರಡೋ ಅಥವಾ ಮೂರು ಇದ್ದರೇ ನೂರರಿಂದ ಮೂರುನೂರವರೆಗೆ ಅರ್ಜಿಗಳು ಬಂದಾಗ ಹೇಗೆ ಆಯ್ಕೆ ಮಾಡುವುದು ಇದರಿಂದ ಅಮಾನ ನ್ಯಾಯ ನೀಡಲು ಸಾಧ್ಯವಾಗುವುದಿಲ್ಲ ಚುನಾವಣೆ ಮುಗಿದ ಮೇಲೆ ನಾವೇಲ್ಲರೂ ಒಂದೇ ಎಂದು ತಿಳಿಯಬೇಕು. ನಮ್ಮ ಕಾಂಗ್ರೇಸ್ ಕಾರ್ಯಕರ್ತರಿಗೆ ಸ್ವಲ್ಪ ನೋವಾಗಬಹುದು ಅದು ಸಹಜವೂ ಕೂಡ ಹೌದು ಹಾಗಂತ ನಾವು ವಿಂಗಡಣೆ ಮಾಡುವುದು ಸರಿಯಲ್ಲ.
ಈ ನಿಟ್ಟಿನಲ್ಲಿ ಈ ಬಾರಿ ವಿನೂತನ ಪ್ರಯೋಗ ಪ್ರಾರಂಭಿಸಲಾಗಿದೆ ಯಾರೂಕೂಡ ಮಾಡಲಾರದ ಪ್ರಯತ್ನ ಇದಾಗಿದೆ ಸಧ್ಯ ಪಾರದರ್ಶಕ ಕಾಯ್ದುಕೊಳ್ಳುವ ಉದ್ದೇಶದಿಂದ ಅಧಿಕಾರಿಗಳ, ಅರ್ಜಿ ಸಲ್ಲಿಸಿ ಎಲ್ಲ ಫಲಾನುಭವಿಗಳ ಹಾಗೂ ನಮ್ಮ ಕಾಂಗ್ರೇಸ್ ಕಾರ್ಯಕರ್ತರ ಮುಖಂಡ ಸಮ್ಮುಖದಲ್ಲಿ ಯಾವೂದೇ ಮೂಲಾಜಿಲ್ಲದೇ ಚೀಟಿ ಎತ್ತಿಸಿ ಲಾಟರಿ ಮೂಲಕ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಿದ್ದು ಇತಿಹಾಸಕ್ಕೆ ಸಾಕ್ಷಿಯಾಗಿದೆ ಇದರಿಂದ ಸರಕಾರದ ಯೋಜನೆಗಳನ್ನು ನೇರವಾಗಿ ಅರ್ಹರಿಗೆ ತಲುಪಿಸಿದಂತಾಗುತ್ತದೆ ಎಂದರು.
ಒಂದು ವೇಳೆ ಈ ಲಾಟರಿಯಿಂದ ಫಲಾನುಭವಿಗಳನ್ನು ಆಯ್ಕೆ ಮಾಡುವ ವಿಧಾನದಿಂದ ನಮ್ಮ ಕಾರ್ಯಕರ್ತರಿಗೆ ಬೇಸರವಾಗಿದ್ದರೆ ದಯವಿಟ್ಟು ಕ್ಷಮೀಸಬೇಕು ಯಾರಿಗೂ ಕೂಡ ಅನ್ಯಾಯವಾಗಬಾರದು ಎಂಬುದೆ ನನ್ನ ಉದ್ದೇಶ ಎಂದರು.
ದೇವರಾಜ ಅರಸು ಹಿಂದುಳಿದ ವರ್ಗಗಳ ನಿಗಮ, ಭೋವಿ ನಿಗಮ, ವೀರಶೈವ ಲಿಂಗಾಯತ ನಿಗಮ, ಪರಿಶಿಷ್ಟ ಜಾತಿ, ಮತ್ತು ಪರಿಶಿಷ್ಟ ಪಂಗಡದ ಡಾ, ಬಿ ಆರ್ ಅಂಬೇಡ್ಕರ ನಿಗಮ, ಸೇರಿದಂತೆ ಇನ್ನೂ ಹಲವು ನಿಗಮಗಳ ಅರ್ಹ ಫಲಾನುಭವಿಗಳನ್ನು ಒಂದೊಂದು ಚೀಟಿ ಎತ್ತುವ ಮೂಲಕ ಆಯ್ಕೆ ಮಾಡಲಾಯಿತು.
ಮುಖಂಡರಾದ ಸಂತೋಷ ಚವ್ಹಾಣ, ತಾಲೂಕಾ ಎಸ್ ಸಿ, ಎಸ್ಟಿ ಘಟಕದ ಅಧ್ಯಕ್ಷ ಶ್ರೀಕಾಂತ ಚಲವಾದಿ, ಹಣಮಂತ ಕುರಿ, ಪುರಸಭೆ ಸದಸ್ಯ ಯಲ್ಲಪ್ಪ ನಾಯಕಮಕ್ಕಳ, ಮಾಜಿ ಸದಸ್ಯ ಮಹ್ಮದರಫೀಕ ಶಿರೋಳ, ತಾಂಡಾ ಅಭಿವೃದ್ಧಿ ಅಕಾರಿ ಗೋಪಿ ಮಡಿವಾಳರ, ಯುವ ಕಾಂಗ್ರೆಸ್ ಅಧ್ಯಕ್ಷ
ಸುರೇಶ ರಾಠೋಡ, ಎಫ್ಡಿಸಿ ವಸಂತ ರಾಠೋಡ, ಇಂಜೀನೀಯರ್, ಸುನೀಲ ರಾಠೋಡ, ಸಂಪನ್ಮೂಲ ವ್ಯಕ್ತಿ ಲಕ್ಷ್ಮಣ ಲಮಾಣಿ, ಅಂಬೇಡ್ಕರ್, ಆದಿ ಜಾಂಬವ, ವಾಲ್ಮೀಕಿ, ಭೋವಿ ನಿಗಮಗಳ ತಾಲೂಕು ಅಭಿವೃದ್ಧಿ ಅಧಿಕಾರಿ ವಸಂತ ಪವಾರ, ಅಲ್ಪಸಂಖ್ಯಾತರ ನಿಗಮದ ಅಕಾರಿ ಶೇಖ್, ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸಿದ ಫಲಾನುಭವಿಗಳು ಇದ್ದರು.