ಬೆಳಗಾವಿಯಲ್ಲಿ ದೇಶ ವಿರೋಧಿ ಪಾಕಿಸ್ತಾನ ಪರ ಘೋಷಣೆ ಕೂಗಿದ ದ್ರೋಹಿಗಳು : ಸಾಮಾಜಿಕ ಜಾಲತಾಣದಲ್ಲಿ ಶುರುವಾಯಿತು ವಿರೋಧಿ ಅಲೆ

ಬೆಳಗಾವಿಯಲ್ಲಿ ದೇಶ ವಿರೋಧಿ ಪಾಕಿಸ್ತಾನ ಪರ ಘೋಷಣೆ ಕೂಗಿದ ದ್ರೋಹಿಗಳು : ಸಾಮಾಜಿಕ ಜಾಲತಾಣದಲ್ಲಿ ಶುರುವಾಯಿತು ವಿರೋಧಿ ಅಲೆ

ಬೆಳಗಾವಿ : ವಿಧಾನಸಭಾ ಫಲಿತಾಂಶದ ವೇಳೆ ನಡು ರಸ್ತೆಯಲ್ಲಿ ಕೆಲ ದ್ರೋಹಿಗಳು ದೇಶ ದ್ರೋಹಿಗಳು ಪಾಕಿಸ್ತಾನ ಪರ ಘೋಷಣೆ ಕೂಗಿರುವ ಘಟನೆ ಶನಿವಾರ ಬೆಳಗಾವಿಯಲ್ಲಿ ನಡೆದಿದ್ದು, ಇದರ ವಿರುದ್ದವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವಿರೋಧ ವ್ಯಕ್ತವಾಗತೋಡಗಿದೆ.

   ರಾಜ್ಯ ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಚುನಾವಣೆಯ ಮತ ಎಣಿಕೆ ಕಾರ್ಯವು ಬೆಳಗಾವಿಯ ಆರ್.ಪಿಡಿ ಕಾಲೇಜಿನಲ್ಲಿ ಜರುಗಿತು. ಅತ್ತ ಅಭ್ಯರ್ಥಿಗಳು ಫಲಿತಾಂಶ ದ ಟೆನ್ಷನ್ ನಲ್ಲಿ ಇದ್ದರೆ ಇತ್ತು ಹೊರಗೆ ನಡುರಸ್ತೆಯಲ್ಲಿ ನಿಂತು ಕೆಲ ದೇಶದ್ರೋಹಿ ಕಿಡಿಗೇಡಿಗಳು ಪಾಕಿಸ್ತಾನದ ಪರ ಜೈಘೋಷಗಳನ್ನು ಹಾಕಿದ್ದಾರೆ. ಈ ಬಗ್ಗೆ ವಿಚಾರಿಸಲು ಹೋದ ಪೊಲೀಸರಿಗೂ ಕೂಡಾ ಈ ಕಿಡಿಗೇಡಿಗಳು ಆವಾಜ್ ಹಾಕಿದ್ದಾರೆ ಎನ್ನಲಾಗಿದೆ. 

   ಅತ್ತ ದೇಶ ವಿರೋಧಿ ಪಾಕಿಸ್ತಾನದ ಪರ ಜಯಘೋಷಣೆ ಹಾಕುತ್ತಿದ್ದಂತೆ ಇತ್ತ ಸಾಮಾಜಿಕ ಅಂತರಜಾಲದ ಫೇಸ್ ಬುಕ್ ಮತ್ತು ವಾಟ್ಸಫ್ ಗಳಲ್ಲಿ ಈ ಬಗ್ಗೆ ವಿರೋಧಿ ಅಲೆ ಪ್ರಾರಂಭವಾಗಿದ್ದು, ಘೋಷಣೆ ಕೂಗಿದ ದೇಶದ್ರೋಹಿಗಳ ವಿರುದ್ದ ಕ್ರಮಕೈಗೊಳ್ಳುವಂತೆ ಒತ್ತಡ ಹೆಚ್ಚಾಗತೋಡಗಿದೆ.

ಸುದ್ದಿ ಓದಿ