ಬೀಜೋಪಚಾರ ಮತ್ತು ಸುರಕ್ಷಿತಾ ಕೀಟನಾಶಕ ಬಳಕೆಯ ತರಬೇತಿ
ಮೂಡಲಗಿ 20 : ತಾಲೂಕಿನ ಹಳ್ಳೂರು ಮತ್ತು ಖಾನಟ್ಟಿ ಗ್ರಾಮದಲ್ಲಿ ಅರಭಾವಿ ಜಿಲ್ಲಾ ಕೃಷಿ ತರಬೇತಿ ಕೇಂದ್ರ ಮತ್ತು ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಗೋಕಾಕ ಆಶ್ರಯದಲ್ಲಿ ಬೀಜೋಪಚಾರ ಮತ್ತು ಸುರಕ್ಷಿತಾ ಕೀಟನಾಶಕ ಬಳಕೆಯ ತರಬೇತಿ ಕಾರ್ಯಕ್ರಮವನ್ನು ಜರುಗಿತು.
ಅರಭಾವಿ ಜಿಲ್ಲಾ ಕೃಷಿ ತರಬೇತಿ ಕೇಂದ್ರ ಅಧಿಕಾರಿ ಖಾಜಾ ರೂಬಿನಾ ಎಸ್ ಅವರು ಬೀಜೋಪಚಾರ ಅದರ ಮಹತ್ವ ಹಾಗು ವಿಧಾನಗಳ ಕುರಿತು ವಿವರಿಸಿದರು. ಅರಭಾವಿ ಕೃಷಿ ಅಧಿಕಾರಿ ಪ್ರಕಾಶ್ ನಿಡಗುಂದಿ ಮತ್ತು ಮಣ್ಣಿನ ಮತ್ವದ ಬಗ್ಗೆ ತಿಳಿಸಿದರು, ಕೃಷಿ ಸಂಜೀವಿನಿ ತಾಂತ್ರಿಕ ಅಧಿಕಾರಿ ಯಲ್ಲಪ್ಪ ನಿಂಗಣ್ಣವರ್ ಗೊಣ್ಣೆ ಹುಳುವಿನ ಸಮಗ್ರ ನಿರ್ವಹಣೆ ಬಗ್ಗೆ, ಮಹೇಶ್ ಸೊಂಟನವರ್ ಸುರಕ್ಷಿತ ಕೀಟನಾಶಕ ಬಳಕೆ ಬಗ್ಗೆ ಮಾಹಿತಿ ನೀಡಿದರು ಹಾಗೂ ಮಾರುತಿ ಹವಳೆಪ್ಪಗೋಳ ಬೀಜೋಪಚಾರ ಹಾಗೂ ಸುರಕ್ಷಿತ ಕೀಟನಾಶಕ ಬಳಕೆಯ ಬಗ್ಗೆ ರೈತರಿಗೆ ಪ್ರಾತ್ಯಕ್ಷಿಕೆಯನ್ನು ಮೂಲಕ ವಿವರಿಸಿದರು.
ಕಾರ್ಯಕ್ರಮದಲ್ಲಿ ರೈತರು ಮತ್ತು ರೈತ ಮಹಿಳೆಯರು ತಮ್ಮ ಸಮಸ್ಯೆಯ ಪರಿಹಾರ ಕಂಡುಕೊಂಡರು ಹಾಗೂ ಕೃಷಿಯ ಮಾಹಿತಿಯ ಕರ ಪತ್ರಗಳನ್ನು ವಿತರಿಸಿದರು. ಮೂಡಲಗಿ ತಾಲೂಕಿನ ಖಾನಟ್ಟಿ ಗ್ರಾಮದಲ್ಲಿ ಕೃಷಿ ಇಲಾಖೆಯಿಂದ ಜರುಗಿದ ಬೀಜೋಪಚಾರ ಮತ್ತು ಸುರಕ್ಷಿತಾ ಕೀಟನಾಶಕ ಬಳಕೆಯ ತರಬೇತಿಯಲ್ಲಿ ಕೃಷಿಯ ಮಾಹಿತಿಯ ಕರ ಪತ್ರಗಳನ್ನು ರೈತ ಮಹಿಳೆಯರಿಗೆ ವಿತರಿಸಿದರು.
ಈ ಕಾರ್ಯಕ್ರಮದಲ್ಲಿ ಹಳ್ಳೂರು ಮತ್ತು ಖಾನಟ್ಟಿ ಸಂಜೀವಿನಿ ಮಹಿಳಾ ಒಕ್ಕೂಟ ಕೃಷಿ ಸಖಿಯರು ಹಾಗೂ ಸುಜಾತ ಹಿರೇಮಠ್, ಅಂಜು ಕರಗಣ್ಣಿ, ರೈತರು ಮತ್ತು ರೈತ ಮಹಿಳೆಯರು ಹಾಗೂ ಮೂಡಲಗಿ ಕೃಷಿ ಇಲಾಖೆಯ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.