ಬಳ್ಳಾರಿ

ಪೂರ್ವ ಪ್ರಾಥಮಿಕ ಶಾಲೆಗಳ ಶಿಕ್ಷಕರಿಗೆ ತರಬೇತಿ ಶಿಬಿರ

ಪೂರ್ವ ಪ್ರಾಥಮಿಕ ಶಾಲೆಗಳ ಶಿಕ್ಷಕರಿಗೆ ತರಬೇತಿ ಶಿಬಿರ

ಬಳ್ಳಾರಿ 20: ನಗರದ ಎಸ್ ಕೆ ಮೋದಿ ನ್ಯಾಷನಲ್ ಶಾಲೆಯಲ್ಲಿ ವೀ. ವಿ. ಸಂಘದ ಕಿಂಡರ್ಗಾರ್ಟನ್ (ಪೂರ್ವ ಪ್ರಾಥಮಿಕ) ಶಾಲೆಗಳ ಶಿಕ್ಷಕರಿಗೆ ಎರಡು ದಿನಗಳ ತರಬೇತಿ ಶಿಬಿರವನ್ನು ನಡೆಸಲಾಯಿತು.  

ಈ ಒಂದು ಕಾರ್ಯಕ್ರಮಕ್ಕೆ ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಅಲ್ಲಂ ಗುರುಬಸವರಾಜ, ಉಪಾಧ್ಯಕ್ಷರಾದ ಜಾನೆಕುಂಟೆ ಬಸವರಾಜ, ಕಾರ್ಯದರ್ಶಿ ಡಾಽಽ ಅರವಿಂದ ಪಾಟೀಲ್, ಸಹ ಕಾರ್ಯದರ್ಶಿ ಯಾಳ್ಪಿ ಮೇಟಿ ಪೊಂಪನಗೌಡ, ಖಜಾಂಚಿ ಬೈಲುವದ್ದಿಗೇರಿ ಎರ್ರಿಸ್ವಾಮಿ ಮತ್ತು ಎಸ್‌. ಕೆ. ಮೋದಿ ಶಾಲೆಯ ಅಧ್ಯಕ್ಷರಾದ ಏಳುಬೆಂಚಿ ರಾಜಶೇಖರ ಹಾಗು ಪ್ರಾಂಶುಪಾಲರಾದ ಸುನಂದ ಎಂ. ಪಾಟೀಲ್ ಹಾಗೂ ತರಬೇತಿದಾರರಾದ  ಅಂಜುಮ್ ಪರ್ವೀನ್ ಇವರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ  ನೀಡಲಾಯಿತು.  

ವೀ.ವಿ. ಸಂಘದ ಕಾರ್ಯದರ್ಶಿ ಡಾಽಽ ಅರವಿಂದ ಪಾಟೀಲ್ ಸಭೆಯನ್ನುದ್ದೇಶಿಸಿ ಮಾತನಾಡಿ ಪ್ರತಿಯೊಂದು ಮಗುವು ಒಂದು ಸೂಪರ್ಸ್ಟಾರ್‌. ನಿಮ್ಮ ಮಕ್ಕಳನ್ನು ಮುಕ್ತವಾದ ವಾತಾವರಣವನ್ನು ನೀಡುವ ಮೂಲಕ ಅವರನ್ನು ಹೊಳೆಯಲು ಅವಕಾಶ ಮಾಡಿಕೊಡಿ ಎಂದು ತಿಳಿಸಿದರು. ಈ ಒಂದು ಹಂತದಲ್ಲಿ ಮಗುವು ನಗುನಗುತ್ತಾ ತಮ್ಮ ಭೌತಿಕ, ನೈತಿಕ ಸಾಮರ್ಥ್ಯಗಳನ್ನು ಸಂಭಾಷಣೆಯ ಮೂಲಕ ಶಿಕ್ಷಕರು ಹೇಳಿಕೊಡಬೇಕೆಂದು ತಿಳಿಸಿದರು.   

ಎಸ್‌.ಕೆ.ಮೋದಿ ಶಾಲೆಯ ಅಧ್ಯಕ್ಷರಾದ ಏಳುಬೆಂಚಿ ರಾಜಶೇಖರ ಸಭೆಯನ್ನುದ್ದೇಶಿಸಿ ಶಿಕ್ಷಕರು ಮಕ್ಕಳನ್ನು ಶಾಲಾ ಮಾದರಿಯ ಪರಿಸರಕ್ಕೆ ಪರಿಚಯಿಸುವುದು ಶಿಕ್ಷಕರ ಬಹು ಮುಖ್ಯ ಪಾತ್ರ ಹಾಗೂ ಮಗುವು ಮನೆ ಮತ್ತು ಶಾಲಾ ಆಧಾರಿತ ವಾತಾವರಣ ನಡುವೆ ಶಿಕ್ಷಕರು ಒಂದು ಸೇತುವೆಯನ್ನು ಒದಗಿಸುವುದು ಅವಶ್ಯಕ ಎಂದು ತಿಳಿಸಿದರು.  

ತರಬೇತಿದಾರರಾದ ಅಂಜುಮ್ ಪರ್ವೀನ್ ಶಿಕ್ಷಕರನ್ನು ಉದ್ದೇಶಿಸಿ ಮಾತನಾಡಿ ಈ ಒಂದು ಹಂತದಲ್ಲಿ ಮಗುವು ಶಾಲಾ ಪೂರ್ವ ಶಿಕ್ಷಣವು ಓಪಚಾರಿಕ ಶಾಲಾ ಶಿಕ್ಷಣದ ಸವಾಲುಗಳನ್ನು ಎದುರಿಸಬೇಕಾಗುತ್ತದೆ ಅದನ್ನು ಶಿಕ್ಷಕರು ಕೆಲವು ಕೌಶಲ್ಯಗಳ ಮೂಲಕ ತಿಳಿಸಬೇಕಾಗುತ್ತದೆ. ತರಗತಿಯಲ್ಲಿ ಶಿಕ್ಷಕರು ಮಕ್ಕಳಿಗೆ ಮುಕ್ತವಾಗಿ ಅಭಿಪ್ರಾಯಗಳನ್ನು ಸ್ವೀಕರಿಸಿ ಅವರಿಗೆ ಬರವಣಿಗೆ ಸಂಗೀತ ಹಾಡು ನೃತ್ಯಗಳ ಮೂಲಕ ಅವರನ್ನು ತರಗತಿಗೆ ಸಿದ್ದಪಡಿಸುವುದಾಗಿದೆ ಎಂದು ತಿಳಿಸಿಕೊಟ್ಟರು. 


ಸುದ್ದಿ ಓದಿ