ಬೆಂಗಳೂರು-ಮುಂಬೈ ನಡುವೆ ರೈಲು ಸೇವೆ : ಕೇಂದ್ರ ಸಚಿವ ಪ್ರಲಾದ ಜೋಶಿ
ಬೆಂಗಳೂರು-ಮುಂಬೈ ನಡುವೆ ರೈಲು ಸೇವೆ : ಕೇಂದ್ರ ಸಚಿವ ಪ್ರಲಾದ ಜೋಶಿ
ನವದೆಹಲಿ :. ಕಳೆದ 30 ವರ್ಷಗಳಿಂದ ನೇರವಾಗಿ ಬೆಂಗಳೂರು ಮುಂಬೈ ಸಂಪರ್ಕ ಕಲ್ಪಿಸುವ ಒಂದು ಸೂಪರ್ ಫಾಸ್ಟ್ ರೈಲು ಉದ್ಯಾನ ಎಕ್ಸ್‌ಪ್ರೆಸ್ ಮಾತ್ರ ಆಗಿತ್ತು. ಆ ರೈಲು ಕೂಡ ಬೆಂಗಳೂರಿನಿಂದ ಗುಂಟಕಲ್ ಸೊಲ್ಲಾಪುರ ಮಾರ್ಗದಲ್ಲಿ ಚಲಿಸುತ್ತಿತ್ತು. ಈ ಎರಡು ನಗರಗಳಿಗೆ ಇನ್ನೊಂದು ಸೂಪರ್ ಫಾಸ್ಟ್ ರೈಲನ್ನು ಕರ್ನಾಟಕದ ಮಧ್ಯಭಾಗವಾಗಿರುವ ತುಮಕೂರು, ದಾವಣಗೆರೆ, ಹಾವೇರಿ, ಹುಬ್ಬಳ್ಳಿ-ಧಾರವಾಡ, ಬೆಳಗಾವಿ ಮಾರ್ಗವಾಗಿ ಪ್ರಾರಂಭಿಸಿ ಕರ್ನಾಟಕದ ಜನರಿಂದ ವಾಣಿಜ್ಯ ನಗರಿ ಮುಂಬೈಗೆ ಹೆಚ್ಚಿನ ರೈಲು ಸೇವೆಗಳನ್ನು ಪ್ರಾರಂಭಿಸಬೇಕು ಎಂಬ ನಿರಂತರ ಬೇಡಿಕೆ ಈಡೇರಿಸುವಂತೆ ಕೇಂದ್ರ ಸಚಿವ ಪ್ರಲ್ದಾದಜೋಶಿ, ಹಾವೇರಿ-ಗದಗ ಸಂಸದರಾದ ಬಸವರಾಜ ಬೊಮ್ಮಾಯಿ, ಜಗದೀಶ್ ಶೆಟ್ಟರ್, ತೇಜಸ್ವಿ ಸೂರ್ಯ ಅನುಸರಣೆ ಮಾಡುತ್ತಿದ್ದರು. ಈಗ ರೈಲ್ವೆ ಸಚಿವ ಅಶ್ವಿನಿ ವೈಷ್ಣವ ಅವರು ನಮ್ಮ ಬೇಡಿಕೆಗೆ ಸ್ಪಂದಿಸಿ ಬೆಂಗಳೂರು ಮುಂಬೈ ಸೂಪರ್ ಫಾಸ್ಟ್ ರೈಲು ತುಮಕೂರು, ದಾವಣಗೆರೆ, ಹಾವೇರಿ, ಹುಬ್ಬಳ್ಳಿ-ಧಾರವಾಡ, ಬೆಳಗಾವಿ ಮಾರ್ಗವಾಗಿ ಪ್ರಾರಂಭಿಸಲು ಅಶ್ವಿನಿ ವೈಷ್ಣವ್ ಅವರು ಕೂಡಲೇ ಸಂಬಂಧಿಸಿದ ಅಧಿಕಾರಿಗಳಿಗೆ ನಾವುಗಳು ಸೂಚಿಸಿದ ಮಾರ್ಗದ ಮೂಲಕ ಹೊಸ ರೈಲು ವೇಳಾಪಟ್ಟಿ ತಯಾರಿಸಲು ನಿರ್ದೇಶನ ನೀಡಿದ್ದಾರೆ. ರಾಜ್ಯದ ರಾಜಧಾನಿ ಬೆಂಗಳೂರಿನಿಂದ ವಾಣಿಜ್ಯ ನಗರಿ ಮುಂಬೈ ಸಂಪರ್ಕಿಸುವ ಈ ಹೊಸ ರೈಲು ಸಮಸ್ತ ಕರ್ನಾಟಕದ ಅಭಿವೃದ್ಧಿಯ ಜೊತೆಗೆ ವಾಣಿಜ್ಯೋದ್ಯಮಕ್ಕೂ ಅನುಕೂಲವಾಗುವುದರೊಂದಿಗೆ ಮುಂಬೈ-ಬೆಂಗಳೂರು ಇಂಡಸ್ಟ್ರೀಯಲ್ ಕಾರಿಡಾರ್‌ಗೆ ಪೂರಕವಾಗಿ ಈ ರೀತಿ ಹೊಸ ಸಂಪರ್ಕಗಳು ಓದ್ಯೋಗಿಕ ಬೆಳವಣಿಗೆಗೆ ಕೊಡುಗೆ ನೀಡಲಿವೆ ಎಂದು ಜೋಶಿ ತಿಳಿಸಿದ್ದಾರೆ. ಭಾರತೀಯ ರೈಲ್ವೆ ಅತ್ಯಾಧುನಿಕತೆಯೊಂದಿಗೆ ಅತಿವೇಗವಾಗಿ ಅಭಿವೃದ್ಧಿ ಮೂಲಕ ಜನಮಾನಸದ ಅನೇಕ ಪ್ರಮುಖ ಭರವಸೆಗಳನ್ನು ಈಡೇರಿಸುತ್ತಿರುವ ನಮ್ಮ ಹೆಮ್ಮಯ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಬೆಂಗಳೂರು-ಹುಬ್ಬಳ್ಳಿ ಮತ್ತು ಮುಂಬೈ ರೈಲ್ವೆ ನಿಲ್ದಾಣಗಳಲ್ಲಿ ಲೇನ್ ಸಾಮರ್ಥ್ಯವನ್ನು ಹೆಚ್ಚಿಸುವ ಮೂಲಕ ಹೆಚ್ಚಿನ ಸೂಪರ್ ಫಾಸ್ಟ್ ರೈಲುಗಳನ್ನು ಸಾಧ್ಯವಾಗಿಸಿದ್ದಾರೆ. ಕರ್ನಾಟಕದ ಜನತೆಯ ಪರವಾಗಿ ಧನ್ಯವಾದಗಳನ್ನು ಸಲ್ಲಿಸುವೆ ಏಕೆಂದರೆ ಮುಂಬರುವ ದಿನಗಳಲ್ಲಿ, ಈ ನಗರಗಳ ನಡುವಿನ ರೈಲು ಪ್ರಯಾಣವು ಹೆಚ್ಚಾಗಿ ಮತ್ತು ಇದು ಲಕ್ಷಾಂತರ ಜನರಿಗೆ ಪ್ರಯೋಜನವನ್ನು ನೀಡಲಿದೆ ಎಂದು ಜೋಶಿ ತಿಳಿಸಿದ್ದಾರೆ.